ಚಿಕ್ಕಮಗಳೂರು, ಮೇ.15:- ಅಸಂಘಟಿತ ಕಾರ್ಮಿಕರಾದ ಮಂಟಪ, ಸಭಾಭವನ, ಟೆಂಟ್ ಮತ್ತು ಪೆಂಡಾಲ್‌ಗಳ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ನೋಂದಣಿ ಮಾಡಿಸಲು ದಾಖಲೆಗಳನ್ನು ಜಿಲ್ಲಾ ಅಡುಗೆ ತಯಾರಕರ ಸಂಘವು ಸಹಾಯಕ ಕಾರ್ಮಿಕ ಅಧಿಕಾರಿ ಎಂ.ಸುಭಾಷ್ ನೀಡಿದರು.

ಈಗಾಗಲೇ 100ಕ್ಕೂ ಹೆಚ್ಚು ಕಾರ್ಮಿಕರ ನೊಂದಣೀ ಪಟ್ಟಿ ತಯಾರಿಸಿ ಇಲಾಖೆಗೆ ನೀಡಲಾಗಿದ್ದು ಶೀಘ್ರದಲ್ಲೇ ಕಾರ್ಮಿಕ ಕಾರ್ಡ್ಗಳನ್ನು ವಿತರಿಸಬೇಕು ಎಂದು ಸಂಘದ ಪದಾಧಿಕಾರಿಗಳು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಆನಂದ್, ಸದಸ್ಯ ರಾಜು, ಕಾರ್ಮಿಕ ಇಲಾಖೆ ಯೋಜನ ನಿರ್ದೇಶಕ ಪ್ರವೀಣ್ ಕುಮಾರ್ ಹಾಜರಿದ್ದರು.
– ಸುರೇಶ್ ಎನ್.