ಕೆ.ಆರ್.ಪೇಟೆ-ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ 92ನೇ ಹುಟ್ಟು ಹಬ್ಬ- ಶಾಸಕ ಹೆಚ್.ಟಿ.ಮಂಜು ನೇತೃತ್ವದಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಣೆ

ಕೆ.ಆರ್.ಪೇಟೆ,ಮೇ.19: ಮಾಜಿ ಪ್ರಧಾನಿಗಳು ಹಾಗೂ ಜೆಡಿಎಸ್ ಪಕ್ಷದ ರಾಷ್ಟ್ರೀಯ ವರಿಷ್ಠ ಪೂಜ್ಯ ಹೆಚ್.ಡಿ.ದೇವೇಗೌಡರ 92ನೇ ಹುಟ್ಟು ಹಬ್ಬವನ್ನು ಕೆ.ಆರ್.ಪೇಟೆ ಕ್ಷೇತ್ರದ ಶಾಸಕರಾದ ಹೆಚ್.ಟಿ.ಮಂಜು ನೇತೃತ್ವದಲ್ಲಿ ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ತಾಲ್ಲೂಕು ಸರ್ಕಾರಿ ಆಸ್ಪತ್ರೆಯ ಎಲ್ಲಾ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.

ಈ ವೇಳೆ ಮಾತನಾಡಿದ ಶಾಸಕ ಹೆಚ್.ಟಿ.ಮಂಜು ಮಾತನಾಡಿ ದೇವೇಗೌಡರು ರೈತರ ಸಂಕೇತವಾಗಿದ್ದಾರೆ. ಅವರು 10ತಿಂಗಳು ಪ್ರಧಾನ ಮಂತ್ರಿಗಳಾಗಿದ್ದ ಅವಧಿಯಲ್ಲಿ ರೈತರ ಪರವಾದ ಆಡಳಿತವನ್ನು ನೀಡಿದರು. ಹೈನುಗಾರಿಕೆ ಅಭಿವೃದ್ಧಿಗೆ ಸ್ಟೆಪ್ ಯೋಜನೆಯನ್ನು ಜಾರಿಗೆ ತಂದರು. ನೀರಾವರಿಗೆ ಲಕ್ಷಕೋಟಿ ರೂಪಾಯಿಗಳನ್ನು ಮೀಸಲಿಟ್ಟರು. ದೇಶದ ಗಡಿಗೆ ಬೇಟಿ ಬೀಟಿ ಯೋಧರಿಗೆ ದೈರ್ಯ ತುಂಬಿದರು. ಹುಬ್ಬಳ್ಳಿಯ ಈದ್ಗಾ ಮೈದಾನದ ಸಮಸ್ಯೆಯನ್ನು ಒಂದೇ ಗಂಟೆಯಲ್ಲಿ ಬಗೆಹರಿಸಿದರು.

ಹೀಗೆ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತರುವ ಮೂಲಕ ದೇಶದ ಸಮಗ್ರ ಅಭಿವೃದ್ಧಿಗೆ ಕೆಲಸ ಮಾಡಿದರೆ. ಇನ್ನಷ್ಟು ವರ್ಷಗಳ ಕಾಲ ಅಧಿಕಾರ ಸಿಕ್ಕಿದ್ದರೆ ದೇಶವನ್ನು ಅಭಿವೃದ್ಧಿಯ ನಾಗಾಲೋಟದಲ್ಲಿ ಸಾಗಿಸುವಂತೆ ಮಾಡುತ್ತಿದ್ದರು. ಆದರೆ ಕಾಂಗ್ರೆಸ್ ಪಕ್ಷದವರು ದೇವೇಗೌಡರ ಅಧಿಕಾರದ ಯಶಸ್ಸು ಸಹಿಸಲಾಗದೇ ಅಧಿಕಾರದಿಂದ ಕೆಳಕ್ಕೆ ಇಳಿಸಿದರು.

ಪ್ರಧಾನ ನರೇಂದ್ರ ಮೋದಿಯವರಿಗೆ ಅಚ್ಚುಮೆಚ್ಚಿನ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ದೇವೇಗೌಡರು 93ರ ಇಳಿ ವಯಸ್ಸಿನಲ್ಲೂ ನಮ್ಮ ರೈತರು ಮತ್ತು ಕರ್ನಾಟಕ ರಾಜ್ಯ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಅನಾವರಣ ಮಾಡಿ ಪರಿಹಾರ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಇಂತಹ ರಾಜಕೀಯ ಮುತ್ಸದ್ದಿ ಶತಾಯುಷಿಗಳಾಗಿ ಗಿನ್ನಿಸ್ ದಾಖಲೆ ಮಾಡುವಂತಾಗಲಿ, ದೇವರು ಆಯಸ್ಸು, ಆರೋಗ್ಯ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹೆಚ್.ಕೆ.ಅಶೋಕ್, ಜಿಲ್ಲಾ ದಿಶಾ ಸಮಿತಿ ಸದಸ್ಯ ನರಸನಾಯಕ್, ತಾ.ಪಂ.ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್, ಬಲ್ಲೇನಹಳ್ಳಿ ನಂದೀಶ್, ಮಾಕವಳ್ಳಿ ವಸಂತ ಕುಮಾರ್, ಸಾಮಿಲ್ ರವಿಕುಮಾರ್, ಅಕ್ಕಿಹೆಬ್ಬಾಳು ಬಸವಲಿಂಗಪ್ಪ, ಜೆಡಿಎಸ್ ಮುಖಂಡರಾದ ಅಜಯ್ ರಾಮೇಗೌಡ, ಹೆಚ್.ಟಿ.ಲೋಕೇಶ್, ತಾಲ್ಲೂಕು ಹೆಚ್.ಡಿ.ಕುಮಾರಸ್ವಾಮಿ ಅಭಿಮಾನಿಗಳ ಸಂಘದ ಅಧ್ಯಕ್ಷ ಯಗಚಗುಪ್ಪೆ ಕುಮಾರ್, ಉಪಾಧ್ಯಕ್ಷ ರಾಮಕೃಷ್ಣ, ಕೆ.ಆರ್.ಹೇಮಂತ್‌ಕುಮಾರ್, ಗಿರೀಶ್, ಬೇಲದಕೆರೆ ನಂಜಪ್ಪ, ಚಿಕ್ಕೋಸಹಳ್ಳಿ ನಾಗೇಶ್, ಅರಳಕುಪ್ಪೆ ಪ್ರತಾಪ್ ಸೇರಿದಂತೆ ನೂರಾರು ಜೆಡಿಎಸ್ ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.

– ಶ್ರೀನಿವಾಸ್‌ ಆರ್.

Leave a Reply

Your email address will not be published. Required fields are marked *