ಕೊರಟಗೆರೆ :- ಮನೆಯ ಮೇಲಿಂದ ಬಿದ್ದು ಸೊಂಟ ನೋವು ಮಾಡಿಕೊಂಡಿದ್ದ ವ್ಯಕ್ತಿ ಓರ್ವ ಸತತವಾಗಿ ಸೊಂಟ ನೋವು ಬಾದೆ ತಾಳಲಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊರಟಗೆರೆ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಜರುಗಿದೆ.
ಕೊರಟಗೆರೆ ತಾಲೂಕಿನ ರೆಡ್ಡಿ ಕಟ್ಟೆ ಬಳಿಯ ಹಳ್ಳದ ಬಳಿ ಈ ದುರ್ಘಟನೆ ಜರಿಗಿದ್ದು, ಗೌರಿಬಿದನೂರು ತಾಲೂಕಿನ ಹುಚ್ಚಾಡನಹಳ್ಳಿ ಗ್ರಾಮದ ಗಂಗಪ್ಪನ ಮಗ ವಿನಾಯಕ 45 ವರ್ಷ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾನೆ.

ಈತ ಟ್ಯಾಕ್ಟರ್ ಡ್ರೈವರ್ ಆಗಿ ಕೆಲಸ ನಿರ್ವಹಿಸುತ್ತಿದ್ದು ಇತ್ತೀಚಿಗೆ ಮನೆ ಮೇಲ್ಭಾಗದಿಂದ ಬಿದ್ದು ಸೊಂಟ ಮುರಿದುಕೊಂಡು ಚಿಕಿತ್ಸೆ ಪಡೆಯುತ್ತಿದ್ದ ಎನ್ನಲಾಗಿದ್ದು, ಇತ್ತೀಚಿಗೆ ನೋವಿನ ಬಾದೆ ತಾಳಲಾರದೆ ಗೌರಿಬಿದನೂರಿನಿಂದ ಕೊರಟಗೆರೆಗೆ ಬಂದು ಯಾವುದೋ ಮಾನಸಿಕ ಖಿನ್ನತೆಗೆ ಒಳಗಾಗಿ ಜೊತೆಗೆ ಸೊಂಟ ನೋವಿನ ಬಾದೆ ತಾಳಲಾರದೆ ಕೊರಟಗೆರೆ ತಾಲೂಕಿನ ರೆಡ್ಡಿಕಟ್ಟೆ ಬಳಿಯ ಹಳ್ಳ ಒಂದರ ಬಳಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಅನಿಲ್ ಹಾಗೂ ಪಿಎಸ್ಐ ತೀರ್ಥೇಶ್ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಕೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
– ಶ್ರೀನಿವಾಸ್, ಕೊರಟಗೆರೆ