ಚಿಕ್ಕಮಗಳೂರು, ಮೇ.19:- ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಭಾನುವಾರ ಖಾಸಗೀ ಕಾರ್ಯಕ್ರಮದ ಹಿನ್ನೆಲೆ ಜಿಲ್ಲೆಗಾಗಮಿಸಿದ ವೇಳೆ ಜಿಲ್ಲಾ ಬಿಜೆಪಿ ಎಸ್.ಸಿ ಮೋರ್ಚಾ ಅಧ್ಯಕ್ಷ ಕುರುವಂಗಿ, ವೆಂಕಟೇಶ್ ನಿವಾಸಕ್ಕೆ ಭೇಟಿ ನೀಡಿದ್ದು, ಈ ವೇಳೆ ವೆಂಕಟೇಶ್ ಕುಟುಂಬವು ಆತ್ಮೀಯವಾಗಿ ಗೌರವ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಭಾಜಪ ಮುಖಂಡರುಗಳಾದ ಹೆಚ್.ಕೆ.ಕೇಶವಮೂರ್ತಿ, ಮೋಹನ್, ಹಂಪಯ್ಯ, ಜೆ.ಡಿ.ಲೋಕೇಶ್, ರೇವನಾಥ್, ಕೃಷ್ಣಮೂರ್ತಿ, ನಾಗೇಶ್, ಚಂದ್ರಪ್ಪ, ನಂಜುಂಡಪ್ಪ ಮತ್ತಿತರರಿದ್ದರು.