ಚಿಕ್ಕಮಗಳೂರು, ಮೇ.19:– ಅಂತರ್ಜಾಲದ ಗಂಧವೇ ಇಲ್ಲದಿರುವ ಗುಡ್ಡಗಾಡು ಪ್ರದೇಶಗಳಲ್ಲಿ ಕರ್ತ ವ್ಯ ನಿರ್ವಹಿಸುವ ಗ್ರಾಮೀಣ ಅಂಚೆ ಸೇವಕರ ಮೂಲ ಬೇಡಿಕೆಗಳನ್ನು ಸರ್ಕಾರಗಳು ಈಡೇರಿಸಬೇಕು ಎಂದು ನವದೆಹಲಿ ಎ.ಐ.ಜಿ.ಡಿ.ಎಸ್.ಯು ಮಹಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಮಹಾದೇವಯ್ಯ ಹೇಳಿದರು.
ನಗರದ ಡಾ|| ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ಅಖಿಲ ಭಾರತ ಗ್ರಾಮೀಣ ಅಂ ಚೆ ಸೇವಕರ ಸಂಘದ 13ನೇ ದ್ವೆöÊವಾರ್ಷಿಕ ಅಧಿವೇಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬ್ರಿಟಿಷರ ಆಳ್ವಿಕೆಯ ಕಾಲಘಟ್ಟದಿಂದ ಗ್ರಾಮೀಣ ಅಂಚೆ ಸೇವಕರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ದೇಶ ಸ್ವಾತಂತ್ರö್ಯಗೊAಡು ಅಮೃತ ಮಹೋತ್ಸವ ಕಳೆದರೂ ಬೇಡಿಕೆಗಳನ್ನು ಸರ್ಕಾರ ಈಡೇರಿಸಿಲ್ಲ. ಪ್ರಸ್ತುತ 1.39 ಲಕ್ಷ ಅಂಚೆ ಕಚೇರಿಗಳಲ್ಲಿ 3 ಲಕ್ಷಕ್ಕೂ ನೌಕರರು ಕೆಲಸ ಮಾಡುತ್ತಿದ್ದು ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸದಿರುವುದು ನೋವಿನ ಸಂಗತಿ ಎಂದರು.

ಗ್ರಾಮೀಣ ನೌಕರರು ಅಂತರ್ಜಾಲವಿಲ್ಲದ ಪ್ರದೇಶಗಳಲ್ಲಿ ತೆರಳಿ ಸರ್ಕಾರದ ಸವಲತ್ತುಗಳಾದ ಮನೆ ಆರ್ಡರ್, ಕಾಗದ ಪತ್ರ ಹಾಜನಸಂಪರ್ಕ ಕೊಂಡಿಯಾದ ನೌಕರರನ್ನು ಸರ್ಕಾರ ಕಡೆಗಣಿಸುತ್ತಿದೆ. ಈ ಉದ್ಯಮದಲ್ಲೂ ಲಾಭ-ನಷ್ಟವನ್ನು ಗಮನಿಸಿ ಖಾಸಗೀಕರಣಗೊಳಿಸುವುದು ರಾಷ್ಟçಕ್ಕೆ ದೊಡ್ಡ ಆತಂಕವಾಗಿದೆ ಎಂದು ತಿಳಿಸಿದರು.
ನೌಕರರಿಗೆ ಪಿಂಚಣಿ, ಆರೋಗ್ಯ ವಿಮೆ, ಕನಿಷ್ಟ ವೇತನವನ್ನು ಪೂರೈಸುತ್ತಿಲ್ಲ. ಕಳೆದ ಕೋವಿಡ್ ಸಮ ಯದಲ್ಲಿ ರಾಜ್ಯದಲ್ಲಿ 100 ಹಾಗೂ ದೇಶದಲ್ಲಿ 1500 ಸೇವಕರು ಮೃತರಾದರು. ಆ ಕುಟುಂಬಕ್ಕೆ ಸರ್ಕಾರಗಳು ಪರಿಹಾರದ ಅಶ್ವಾಸನೆ ಹೊರತಾಗಿ ಆರ್ಥಿಕವಾಗಿ ನಯಾಪೈಸೆಯನ್ನು ನೀಡಿಲ್ಲ ಎಂದು ಹೇಳಿದರು.

ದೇಶದಲ್ಲಿ ಅಂಚೆ ಕಚೇರಿಗಳನ್ನು ಮುಚ್ಚಿಸುವ ಸಲುವಾಗಿ ಕೇಂದ್ರ ಸರ್ಕಾರ ಖಾಸಗೀಕರಣದತ್ತ ಹೆಜ್ಜೆ ಹಾಕುತ್ತಿದೆ. ಅಲ್ಲದೇ ಗ್ರಾಮೀಣ ಅಂಚೆ ಕಚೇರಿಗಳನ್ನು ತೆರವುಗೊಳಿಸಿ, ಜಿಲ್ಲಾ ಕೇಂದ್ರದಲ್ಲಿ ಏಕಮಾತ್ರ ಕಚೇರಿ ಸ್ಥಾಪಿಸಲು ಮುಂದಾಗುತ್ತಿದ್ದು ಈ ವ್ಯವಸ್ಥೆಯನ್ನು ವಿರೋಧಿಸಿ ಜುಲೈ 09 ರಂದು ಭಾರತಾದ್ಯಂತ ಆಯಾ ಅಂಚೆ ಕಚೇರಿಗಳಲ್ಲಿ ಪ್ರತಿಭಟನೆಗೆ ಕರೆ ನೀಡಲಾಗಿದೆ ಎಂದರು.
ಗ್ರಾಮೀಣ ಅಂಚೆ ಸೇವಕರ ಕಾನೂನು ಸಲಹೆಗಾರ ಎಸ್.ಎಸ್.ಮಂಜುನಾಥ್ ಮಾತನಾಡಿ ಅಂಚೆ ಅಧಿಕಾರಿಗಳು ಹಾಗೂ ನೌಕರರ ನಡುವೆ ಉತ್ತಮ ಒಡನಾಟ ಅತಿಮುಖ್ಯ. ಒಗಟ್ಟಿನಿಂದ ಕೆಲಸ-ಕಾರ್ಯಗಳ ಲ್ಲಿ ತೊಡಗಿಸಿಕೊಂಡರೆ ಸರ್ಕಾರದ ಸವಲತ್ತನ್ನು ಒಗ್ಗಟ್ಟು ಪ್ರದರ್ಶಿಸಿ ಪಡೆದುಕೊಳ್ಳಲು ಸಾಧ್ಯ ಎಂದು ತಿಳಿಸಿದರು.

ಎಐಜಿಡಿಎಸ್‌ಯು ಜಿಲ್ಲಾಧ್ಯಕ್ಷ ಟಿ.ಸಿ.ಚಂದ್ರಪ್ರಕಾಶ್ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮೀಣ ನೌಕರರ ಸಮಾನ ಕೆಲಸಕ್ಕೆ ಸಮಾನ ವೇತನವಿಲ್ಲದೆ ಶೋಷಣೆ ಅನುಭವಿಸುತ್ತಿದ್ದಾರೆ. ಸೇವಕರ ಬೇಡಿಕೆಗಳನ್ನು ಸರಕಾರ ಯಾವುದೇ ಹೆಚ್ಚುವರಿ ಅರ್ಥಿಕ ಹೊರೆಯಿಲ್ಲದೆ ಈಡೇರಿಸಬಹುದಾಗಿದ್ದು, ಕೇಂದ್ರ ಸರ್ಕಾರದ ಜನ ಪ್ರತಿನಿಧಿಗಳು ಗಮನ ಸೆಳೆಯಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಚಿಕ್ಕಮಗಳೂರು ವಿಭಾಗದ ಅಧೀಕ್ಷಕ ಎನ್.ಬಿ.ಶ್ರೀನಾಥ್, ಬೆಂಗಳೂರು ವಲಯಾಧ್ಯಕ್ಷ ಎಸ್.ಆರ್.ಭೈಲಪ್ಪ, ಕಾರ್ಯದರ್ಶಿ ಹೆಚ್.ವಿ.ರಾಜ್‌ಕುಮಾರ್, ಸಹ ಕಾರ್ಯದರ್ಶಿ ಮಲ್ಲಿ ಕಾರ್ಜುನ್, ಸಂಘಟನಾ ಕಾರ್ಯದರ್ಶಿ ವೈ.ಯು.ಗಂಗಾಧರ್, ಉಪಾಧ್ಯಕ್ಷ ಟಿ.ಹನುಮಂತಪ್ಪ, ಜಿಲ್ಲಾ ಕಾರ್ಯದರ್ಶಿ ಎಂ.ಡಿ.ಲೋಹಿತ್‌ಕುಮಾರ್, ಕಾರ್ಯದರ್ಶಿ ನವೀನ್ ಮತ್ತಿತರರಿದ್ದರು.
– ಸುರೇಶ್ ಎನ್.