ಚಿಕ್ಕಮಗಳೂರು-ಆಲ್ದೂರು ಪ್ರಾಥಮಿಕ ಸರ್ಕಾರಿ ಆಸ್ಪತ್ರೆಯನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮಾರ್ಪಡಿಸಿ,ಶಾಶ್ವತ ವೈದ್ಯರ ನೇಮಿಸಬೇಕು-ಎಸ್.ಡಿ.ಪಿ.ಐ ಆಗ್ರಹ

ಚಿಕ್ಕಮಗಳೂರು-ಆಲ್ದೂರು ಪ್ರಾಥಮಿಕ ಸರ್ಕಾರಿ ಆಸ್ಪತ್ರೆಯನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮಾರ್ಪಡಿಸಿ, ಶಾಶ್ವತ ವೈದ್ಯರ ನೇಮಿಸಬೇಕು ಎಂದು ಆಗ್ರಹಿಸಿ ಎಸ್.ಡಿ.ಪಿ.ಐ. ಮುಖಂಡರುಗಳು ಗುರುವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಈ ಸಂಬoಧ ಶಿರಸ್ತೇದಾರ್ ಹೇಮಂತ್‌ಕುಮಾರ್ ಅವರಿಗೆ ಸಲ್ಲಿಸಿದ ಮುಖಂಡರುಗಳು ಆಲ್ದೂರು ಹೋಬಳಿ ತಾಲ್ಲೂಕು ಕೇಂದ್ರವಾಗಿ ಬೆಳವಣಿಗೆ ಹೊಂದುತ್ತಿರುವ ಹಿನ್ನೆಲೆ ಆಸ್ಪತ್ರೆಯನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿಸಲು ಮುಂದಾಗಬೇಕು ಎಂದರು.

ಬಳಿಕ ಮಾತನಾಡಿದ ಮೂಡಿಗೆರೆ ತಾಲ್ಲೂಕು ಅಧ್ಯಕ್ಷ ಅಂಗಡಿ ಚಂದ್ರು,ಪ್ರಸ್ತುತ ಆಲ್ದೂರು ಹೋಬಳಿ ಅತಿ ದೊಡ್ಡ ಹೋಬಳಿಯಾಗಿದೆ.ಬಹಳಷ್ಟು ಗ್ರಾಮ,ಉಪಗ್ರಾಮಗಳನ್ನು ಒಳಗೊಂಡಿದೆ.ಆದರೆ ಇಲ್ಲಿನ ಸರ್ಕಾರಿ ಆಸ್ಪತ್ರೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವಾಗಿ ಮಾತ್ರ ಉಳಿದುಕೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹೋಬಳಿಯಲ್ಲಿ ಯಾವುದೇ ವೈದ್ಯರು,ಅತ್ಯವಶ್ಯಕ ಇಸಿಜಿ ಮತ್ತು ಇತರೇ ಸೌಲಭ್ಯಗಳು ಇರುವು ದಿಲ್ಲ.ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಸಾರ್ವಜನಿಕರು ತುತ್ತಾದರೆ ಜಿಲ್ಲಾ ಕೇಂದ್ರ ತೆರಳಲು ಸೂಚಿಸಲಾಗುತ್ತಿದ್ದು ಈ ಸಂಬoಧ ಈಚೆಗೆ ಆಲ್ದೂರು ಸಮಿತಿಯಿಂದ ಪ್ರಾಥಮಿಕ ಕೇಂದ್ರದ ಎದುರು ಪ್ರತಿಭಟನೆ ನಡೆಸಲಾಗಿತ್ತು ಎಂದು ತಿಳಿಸಿದರು.

ತದನಂತರ ಆಲ್ದೂರು ಉಪತಹಶೀಲ್ದಾರ್‌ಗೆ ಪ್ರಾಥಮಿಕ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮಾರ್ಪಾಡಿಸಲು ಮನವಿ ಸಲ್ಲಿಸಿ ಎರಡ್ಮೂರು ತಿಂಗಳಾದರೂ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹೀಗಾಗಿ ಸಾರ್ವಜನಿಕರು ಮತ್ತು ರೋಗಿಗಳಿಗೆ ಚಿಕಿತ್ಸೆ ವಿಷಯದಲ್ಲಿ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಶೀಘ್ರದಲ್ಲೇ ಸಮುದಾಯ ಕೇಂದ್ರವಾಗಿ ಮಾರ್ಪಾಡಿಸಿ ಕ್ರಮ ಕೈಗೊಳ್ಳಬೇಕು.ವಿಳಂಭ ಧೋರಣೆ ಅನುಸರಿ ಸಿದರೆ ಜಿಲ್ಲಾ ಕೇಂದ್ರದಲ್ಲಿ ಬೃಹತ್ ಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಎಸ್‌ಡಿಪಿಐ ಖಜಾಂಚಿ ಖಾಲಿದ್ ಮಹಮ್ಮದ್, ಕ್ಷೇತ್ರ ಸಮಿತಿ ಸದಸ್ಯ ನಾಗೇಶ್,ಆಲ್ದೂರು ಹೋಬಳಿ ಅಧ್ಯಕ್ಷ ಮನ್ಸೂರ್,ಉಪಾಧ್ಯಕ್ಷ ಮಹಮ್ಮದ್ ಜಿಷನ್ ಮತ್ತಿತರರಿದ್ದರು.

Leave a Reply

Your email address will not be published. Required fields are marked *

× How can I help you?