ಬೇಲೂರು – ಛಲವಾದಿ ಮಹಾ ವೇದಿಕೆ ವತಿಯಿಂದ 134 ನೇ ಅಂಬೇಡ್ಕರ್ ಜಯಂತಿ ಆಚರಣೆ – ಮಾಜಿ ಪುರಸಭಾ ಅಧ್ಯಕ್ಷ ಸಿ ಎನ್ ದಾನಿ ಮಾಹಿತಿ

ಬೇಲೂರು– ಛಲವಾದಿ ಮಹಾ ವೇದಿಕೆ ವತಿಯಿಂದ 134 ನೇ ಅಂಬೇಡ್ಕರ್ ಜಯಂತಿಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಮೇ 26 ಸೋಮವಾರ ಬೆಳಗ್ಗೆ 11 ಗಂಟೆಗೆ ಛಲವಾದಿ ಬಂಧುಗಳ ಮಹಾ‌ ವೇದಿಕೆ ಹಾಗೂ ಎಲ್ಲಾ ದಲಿತಪರ ಪ್ರಗತಿಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ 134 ನೇ ಜನ್ಮ ದಿನಾಚರಣೆ ಹಾಗೂ ಛಲವಾದಿ ಜನಾಂಗದ ಮಹಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮಕ್ಕೆ ಎಲ್ಲಾ ರೀತಿಯ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತದೆ ಎಂದು ಮಾಜಿ ಪುರಸಭಾ ಅಧ್ಯಕ್ಷ ಸಿ ಎನ್ ದಾನಿ ತಿಳಿಸಿದರು.

ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು ಬೆಳಿಗ್ಗೆ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ನಂತರ ವಿವಿಧ ಜಾನಪದ ಕಲಾ ತಂಡಗಳಿಂದ ಬೃಹತ್ ಮೆರವಣಿ ನಡೆಯಲಿದೆ.

ಸಮಾರಂಭದ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಶ್ರೀ ಬಸವನಾಗಿ ದೇವ ಶರಣರು ಜಗದ್ಗುರು ಶ್ರೀ ಗುರುಪೀಠ ಚಿತ್ರದುರ್ಗ ಇವರು ವಹಿಸಲಿದ್ದು ಮೈಸೂರಿನ ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮಿಜಿಗಳು ಕರ್ನಾಟಕ ಸರ್ಕಾರದ ಗಣ್ಯರಾದ ಲೋಕೋಪಯೋಗಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವರಾ ಸತೀಶ್ ಜಾರಕಿಹೊಳಿ ಹಾಗೂ ಸಚಿವ ಎಚ್ ಸಿ ಮಹದೇವಪ್ಪ ರವರು ಆಗಮಿಸಲಿದ್ದಾರೆ. ಖ್ಯಾತ ಕನ್ನಡ ಚಲನಚಿತ್ರ ನಟ ದುನಿಯಾ ವಿಜಯ್ ಮಹಾ ನಾಯಕ ಧಾರಾವಾಹಿಯ ಬಾಲನಟ ಆಯುಧ್ ಬಾನು ಶಾಲಿ ಹಾಗೂ ಸ್ಥಳೀಯ ಶಾಸಕ ಎಚ್ ಕೆ ಸುರೇಶ್ ಸೇರಿದಂತೆ ಹಲವು ಹಾಲಿ ಮಾಜಿ ಸಚಿವರು ಶಾಸಕರು ಜನಪ್ರತಿನಿಧಿಗಳು ಆಗಮಿಸಲಿದ್ದಾರೆ.

ಈ ಕಾರ್ಯಕ್ರಮಕ್ಕೆ ಸಮಾಜದ ಹಿರಿಯ ಮುಖಂಡರುಗಳು ದಲಿತ ಸಂಘಟನೆ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು, ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರುಗಳು ನೌಕರರು, ವಿದ್ಯಾರ್ಥಿಗಳು, ಯುವ ಮುಖಂಡರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಹಗರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂದೇಶ್. ಮಾಜಿ ಪುರಸಭೆ ಸದಸ್ಯ ಬಿ ಎಸ್ ಮಂಜುನಾಥ್. ರಘು ನಾರಾಯಣಪುರ. ಹೆಚ್ ಡಿ ರಮೇಶ್. ಮಲ್ಲಿಕಾರ್ಜುನ ದೇವಿಹಳ್ಳಿ . ದೇವರಾಜು. ಹರೀಶ್ ಮೇಕೆದಾಟು.ಧರ್ಮ ಪ್ರಕಾಶ್ . ತೀರ್ಥ ಕುಮಾರ್.ರವಿ ರಾಯಪುರ . ಚಂದ್ರು. ಕುಮಾರ್ ಕೌರಿ . ಇತರರು ಹಾಜರಿದ್ದರು.

– ನೂರು ಅಹಮ್ಮದ್

Leave a Reply

Your email address will not be published. Required fields are marked *