ಕೊಪ್ಪ;ವಿಶ್ವಹಿಂದೂ ಪರಿಷತ್,ಬಜರಂಗದಳ ಕೊಪ್ಪ ಪ್ರಖಂಡದ ನೇತೃತ್ವದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 4ನೆ ವರ್ಷದ ಚಿಕ್ಕಮಗಳೂರು ಜಿಲ್ಲಾ ಮಟ್ಟದ ಮೊಸರು ಕುಡಿಕೆ ಒಡೆಯುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಜರಂಗದಳದ ಕೊಪ್ಪ ಪ್ರಖಂಡದ ತಾಲ್ಲೂಕು ಸಂಯೋಜಕ ವಿನಯ್ ಶಿವಪುರ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕೆಯೊಂದಿಗೆ ಮಾತನಾಡಿದ ಅವರು, 22 ನೇ ತಾರೀಖಿನ ಭಾನುವಾರದಂದು ಬೆಳಿಗ್ಗೆ 9:30 ರಿಂದ ಲಾಲ್ ಬಹಾದ್ದೂರ್ ಶಾಸ್ತ್ರಿ ಕ್ರೀಡಾಂಗಣದಲ್ಲಿ ಸ್ಪರ್ಧೆ ಪ್ರಾರಂಭವಾಗಲಿದ್ದು,ಜಿಲ್ಲೆಯ ಹೆಸರಾಂತ ತಂಡಗಳು ಭಾಗವಹಿಸಲಿವೆ ಎಂದರು.
ಈ ಬಾರಿಯ ಸ್ಪರ್ಧೆಯಲ್ಲಿ ಬಾರಿ ಪೈಪೋಟಿಯನ್ನು ನಿರೀಕ್ಷೆ ಮಾಡಿದ್ದೇವೆ.ವಿಜೇತರಿಗೆ ಬಹುಮಾನವಾಗಿ 22,222 ರೂ ಮತ್ತು ಆಕರ್ಷಕ ಟ್ರೋಫಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಅಲ್ಲದೆ ಇದೆ ದಿನ ವಿಶ್ವ ಹಿಂದೂ ಪರಿಷತ್ ಸಂಸ್ಥಾಪನ ದಿನದ 60ನೇ ವರ್ಷಾಚರಣೆಯ ಅಂಗವಾಗಿ ಷಷ್ಠಿ ಪೂರ್ತಿ ಸಮ್ಮೇಳನ ನಡೆಯಲಿದೆ.ಕಾರ್ಯಕ್ರಮ ಉದ್ಘಾಟನೆಯನ್ನು ವಿಶ್ವ ಹಿಂದೂ ಪರಿಷತ್ ನ ಜಿಲ್ಲಾಧ್ಯಕ್ಷರಾದ ಕೆ.ಪಿ ಸುರೇಶ್ ಕುಮಾರ್ ನೆರವೇರಿಸಲಿದ್ದಾರೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸನಾತನ ಹಿಂದೂ ಸಮಾಜ ಪರಿಷತ್ ನ ಮಲೆನಾಡು ವಿಭಾಗದ ಸಂಚಾಲಕರಾದ ವಾಸಪ್ಪ ಕುಂಚೂರು ವಹಿಸಿಕೊಳ್ಳಲಿದ್ದಾರೆ.ದಿಕ್ಸೂಚಿ ಭಾಷಣವನ್ನು ವಿಹಿಂಪ ಕಾರ್ಯದರ್ಶಿ ಮಹಿಪಾಲ್ ಮಾಡಲಿದ್ದಾರೆ ಎಂದ ಅವರು,ಗೌರವ ಉಪಸ್ಥಿತಿಯಲ್ಲಿ ಆರ್.ಡಿ. ಮಹೇಂದ್ರ,ಶಶಾಂತ್ ಹೇರೂರು,ದಿವಿರ್ ಮಲ್ನಾಡ್,ಅಜಿತ್ ಕುಮಾರ್ ಕಳಸ,ಬಿ.ವಿ ದೀಪಕ್ ಮುಂತಾದವರು ಇರಲ್ಲಿದ್ದಾರೆ ಎಂದು ತಿಳಿಸಿದರು.
————–:ಹರೀಶ್ ನಾರ್ವೆ