ಮಂಡ್ಯ.ಮೇ.27:- ವಿದ್ಯಾರ್ಥಿಗಳು ಚಿಕ್ಕಂದಿನಿಂದಲೇ ದೇಶಾಭಿಮಾನ ಹಾಗೂ ಪರಿಸರ ಪ್ರೇಮವನ್ನು ಬೆಳಸಿಕೊಳ್ಳಿ ಎಂದು ಗ್ವಾರವಾನ್ವಿತ ನ್ಯಾಯಮೂರ್ತಿ ಹಾಗೂ ಉಪಲೋಕಾಯುಕ್ತರಾದ ಬಿ.ವೀರಪ್ಪ ಅವರಯ ತಿಳಿಸಿದರು.
ಇಂದು ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆಯ ವತಿಯಿಂದ ಕರಿಘಟ್ಟದಲ್ಲಿ ಆಯೋಜಿಸಲಾಗಿದ್ದ ಗಿಡ ನೆಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು. ಕರಿಘಟ್ಟ ಬೆಟ್ಟದಲ್ಲಿ ಕಾಡಿನ ಮರಗಳಿಗೆ ಬೆಂಕಿಯಾಕಿದರೆ ಮಕ್ಕಳಾಗುತ್ತದೆ ಎಂಬ ಮೂಡನಂಬಿಕೆಯಿಂದ ಸಾರ್ವಜನಿಕರು ಹೊರಬರಬೇಕು. ಕಾಡಿನ ಮರಗಳಿಗೆ ಬೆಂಕಿ ಹಾಕುವ ಕೃತ್ಯ ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ನಾವೆಲ್ಲರೂ ಇಂದು ನೆಮ್ಮದಿಯಾಗಿ ಜೀವಿಸಲು ಕಾರಣ ನಮ್ಮ ದೇಶದ ಸೈನಿಕರು, ಸೈನಿಕರು ತಮ್ಮ ಜೀವವನ್ನು ಪಣಕ್ಕಿಟ್ಟು ದೇಶದ ನಾಗರೀಕ ರಕ್ಷಣೆಗಾಗಿ ಶ್ರಮಿಸುವವರು, ಇತ್ತೀಚೆಗೆ ನಡೆದ ಪೆಹಲ್ಗಾಂ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಒಂದು ನಿಮಿಷ ಮೌನಾಚರಣೆ ಆಚರಿಸಿ ಗೌರವ ಸಲ್ಲಿಸಿದರು.
ಒಂದು ಗಿಡವನ್ನು ಒಳ್ಳೆಯ ಮನಸ್ಸಿನಿಂದ ನೆಟ್ಟಿ ಬೆಳಸಿ ಗಿಡ- ಮರಗಳೆ ನಮ್ಮ ಮಕ್ಕಳಿದ್ದಂತೆ. ಮರಗಳಿಂದ ಉತ್ತಮ ವಾತಾವರಣ ಬೆಳೆಯುತ್ತದೆ. ಆರೋಗ್ಯ ವೃದ್ಧಿಸುತ್ತದೆ. ಪ್ರತಿಯೊಬ್ಬರು ತಮ್ಮ ಮನೆಯ ಸುತ್ತಮುತ್ತಲು ಕನಿಷ್ಠ ಒಂದು ಗಿಡವನ್ನು ನೆಟ್ಟಿ ಬೆಳಸಿ. ಇದೆ ಸಮಾಜಕ್ಕೆ ನಾವು ನೀಡುವ ದೊಡ್ಡ ಕೊಡುಗೆ ಎಂದರು.
ನಾವು ಪ್ರತಿ ಕ್ಷಣ ನೆನಯಬೇಕಾದದ್ದು ಸೈನಿಕರು. ಅವರು ತಮ್ನ ವೈಯಕ್ತಿಕ ಬದುಕನ್ನು ಬದಿಗಿಟ್ಟಿ ದೇಶದ ಜನತೆಯನ್ನು ರಕ್ಷಿಸುತ್ತಿದ್ದಾರೆ ನಾವು ಅವರಿಗೆ ಚಿರರುಣಿಯಾಗಿರಬೇಕು. ದೇಶದ ಅಭಿವೃದ್ಧಿಗೆ ಬೇಕಿರುವ ಸಸ್ಯ ಸಂಪತ್ತನ್ನು ರಕ್ಷಿಸಲು ಪಣ ತೊಡೋಣ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪ್ರಕೃತಿಯ ಮೇಲೆ ನಿರಂತರವಾಗಿ ದಾಳಿ ನಡೆಸಿಕೊಂಡು ಬರುತ್ತಿದ್ದರು ಪ್ರಕೃತಿ ನಿಸ್ವಾರ್ಥದಿಂದ ಮನುಕುಲಕ್ಕೆ ಗಾಳಿ, ನೀರು, ಬೆಳಕು, ಆಹಾರ ನೀಡಿ ರಕ್ಷಿಸುತ್ತಿದೆ, ಆದರೂ ಮನುಷ್ಯ ವನ್ಯಜೀವಿಗಳ ವಿರುದ್ಧ ಸುಮರ ಸಾರುತ್ತಿದ್ದಾನೆ, ಈಗಲಾದರೂ ಎಚ್ಚೆತ್ತು ಪರಿಸರವನ್ನು ಉಳಿಸಿಕೊಳ್ಳಬೇಕಿದೆ ಇಲ್ಲವಾದಲ್ಲಿ ಜಗತ್ತು ಚಂಡಮಾರುತ, ಬಿರುಗಾಳಿ ಭೂ ಕುಸಿತದಂತ ಪ್ರಾಕೃತಿಕ ವಿಕೋಪ ಎದುರಿಸಬೇಕಾಗುತ್ತದೆ ಎಂದರು.
ಯುವ ಜನತೆ ಮೂಡ ನಂಬಿಕೆಯ ವಿರುದ್ಧ ಜಾಗೃತಿ ಮೂಡಿಸಬೇಕು ಯುವ ಪೀಳಿಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ, ಹಸಿರೇ ಉಸಿರು ಎಂಬುದು ಕೇವಲ ಘೋಷವಾಕ್ಯವಾಗ ಬಾರದು, ವಿದ್ಯಾರ್ಥಿಗಳು ಗಿಡ ಮರಗಳ ಉಪಯೋಗದ ಕುರಿತು ಹಿರಿಯರಿಗೆ ಅರಿವು ಮೂಡಿಸಿ, ಪ್ರತಿಯೊಂದು ಮನೆಗೂ ಒಂದು ಗಿಡ ನೆಟ್ಟು ಪ್ರಕೃತಿ ಉಳಿಸೋಣ ಎಂದು ಕರೆ ನೀಡಿದರು.

ನಮ್ಮ ದೇಶದ ಅತಿ ದೊಡ್ಡ ಪಿಡುಗು ಭ್ರಷ್ಟಾಚಾರ
ದೇಶದ ಪ್ರಜೆಗಳು ಹಣ ಆಮಿಷಕ್ಕೊಳ್ಳಗಾಗಿ ಮತದಾನ ಮಾಡುತ್ತಿದ್ದಾರೆ, ಉತ್ತಮ ನಾಯಕರು ಆಯ್ಕೆಯಾಗದಿದ್ದಲ್ಲಿ ದೇಶವನ್ನು ಲೂಟಿ ಮಾಡುತ್ತಾರೆ. ನಮ್ಮ ದೇಶದ ಅತಿ ದೊಡ್ಡ ಪಿಡುಗು ಭ್ರಷ್ಟಾಚಾರವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಪರಿಸರ ಪ್ರೇಮಿಗಳಾದ ರಮೇಶ್, ಡಾ. ಸುಜಯ್, ರಾಘವೇಂದ್ರ ರವರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ: ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್ ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆನಂದ್, ಲೋಕಾಯುಕ್ತದ ಉಪನಿಬಂಧಕರಾದ ಅರವಿಂದ್, ಮಿಲನ ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧೀಕಗಷಕ ಸುರೇಶ್ ಬಾಬು,ವಕೀಲರ ಸಂಘದ ಅಧ್ಯಕ್ಷ ಮರಿಗೌಡ, ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಂತರ ಕರಿಘಟ್ಟದ ವೆಂಕಟರಮಣ ಸ್ವಾಮಿ ಸಸ್ಯೋದ್ಯಾನವನದಲ್ಲಿ ನ್ಯಾಯಮೂರ್ತಿ ಹಾಗೂ ಉಪಲೋಕಾಯುಕ್ತರಾದ ಬಿ. ವೀರಪ್ಪ ಅವರು ಗಿಡ ನೆಡುವ ಮೂಲಕ ಜಾಗೃತಿ ಮೂಡಿಸಿದರು.