ಹಾಸನ;ಬೇಲೂರು ತಾಲೂಕಿನ ಚುಟುಕು ಸಾಹಿತ್ಯ ಪರಿಷತ್ ಉದ್ಘಾಟನೆ, ಪದಗ್ರಹಣ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಸೆ. 22 ಭಾನುವಾರ ಬೆಳಿಗ್ಗೆ 10 ಗಂಟೆಗೆ ಬೇಲೂರು ಪಟ್ಟಣದ ಚನ್ನಕೇಶವ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಹಾಸನ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಬಾ.ನಂ ಲೋಕೇಶ್ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಹಾಸನ ಜಿಲ್ಲಾ ಚು.ಸಾ.ಪ ಅಧ್ಯಕ್ಷರಾದ ಬಾ.ನಂ ಲೋಕೇಶ್ ಪ್ರಾಸ್ತಾವಿಕ ನುಡಿಯಾಡಲಿದ್ದಾರೆ. ಉದ್ಘಾಟನೆಯನ್ನು ಚು.ಸಾ.ಪ ಸಂಸ್ಥಾಪಕರಾದ ಡಾ.ಎಂ.ಜಿ.ಆರ್ ಅರಸ್ ಮಾಡಲಿದ್ದಾರೆ.ಅಧ್ಯಕ್ಷತೆಯನ್ನು ಬೇಲೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಹೆಚ್.ಕೆ ಸುರೇಶ್ ಅವರು ವಹಿಸಲಿದ್ದಾರೆ.ಬೇಲೂರು ತಾಲ್ಲೂಕು ಅಧ್ಯಕ್ಷರಾದ ಕಿರಣ್ ಕುಮಾರ್ ಬಿ ರವರ ಸ್ವರಚಿತ ಚುಟುಕಾಮೃತ ಕೃತಿ ಲೋಕಾರ್ಪಣೆಯನ್ನು ಬೇಲೂರು ತಹಶೀಲ್ದಾರರಾದ ಎಂ ಮಮತಾ ಬಿಡುಗಡೆ ಮಾಡಲಿದ್ದಾರೆ.
ಈ ವೇಳೆ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಹಾಗೂ ಜಿಲ್ಲಾ ಚುಟುಕು ಕವಿಗೋಷ್ಠಿ ನಡೆಯಲಿದೆ.ಕವಿಗೋಷ್ಠಿ ಅಧ್ಯಕ್ಷತೆಯನ್ನು ಅರಸೀಕೆರೆ ತಾಲ್ಲೂಕು ಚು ಸಾ ಪ ಅಧ್ಯಕ್ಷೆ ಪದ್ಮಮೂರ್ತಿ ವಹಿಸುವರು.ಆಶಯ ನುಡಿಯನ್ನು ನಿಕಟ ಪೂರ್ವ ಹಾಸನ ಜಿಲ್ಲಾ ಅಧ್ಯಕ್ಷ ಮಳಲಿ ಹರೀಶ್ ಕುಮಾರ್,ಆಡಲಿದ್ದಾರೆ. ಜೂನಿಯರ್ ರವಿಚಂದ್ರನ್ (ಚಿನ್ನುಕೊಪ್ಪಳ )ಹಾಗೂ ಜೀ ಕನ್ನಡ ಟಿವಿ ಕಾಮಿಡಿ ಕಿಲಾಡಿಗಳು ಕಲಾವಿದ ಧರ್ಮ ಹಾಸನ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಇರುತ್ತದೆ.
ಕಾರ್ಯಕ್ರಮದಲ್ಲಿ ಡಿ.ಎಸ್.ಈ.ಆರ್. ಟಿ ಬೆಂಗಳೂರು ನಿರ್ದೇಶಕರಾದ ಎಂ ಆರ್ ಮಾರುತಿ, ಪ್ರಧಾನ ಮಂತ್ರಿ ಪೋಷಣ್ ಅಭಿಯಾನ ಬೆಂಗಳೂರು ಜಂಟಿ ನಿರ್ದೇಶಕರಾದ ಹೆಚ್.ಕೆ ಪುಷ್ಪಲತಾ, ಬೇಲೂರ್,ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ, ಹಾಸನ ಜಿಲ್ಲಾ ಚು.ಸಾ.ಪ ಪತ್ರಿಕಾ ಕಾರ್ಯದರ್ಶಿ ಮೂರ್ತಿ ಬೆಳ್ಳಾವರ,ಕಸಾಪ ಅಧ್ಯಕ್ಷರಾದ ಮಾ.ನಾ ಮಂಜೇಗೌಡ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
————————————ಮೂರ್ತಿ