ಕೆ.ಆರ್.ಪೇಟೆ:ಅಕ್ಕಿಹೆಬ್ಬಾಳು ಪ್ರಾಥಮಿಕ ಕಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ವಕೀಲ ಎಸ್.ಆರ್ ನವೀನ್ ಕುಮಾರ್ ನೇತೃತ್ವದಲ್ಲಿ ಗ್ರಾ.ಪಂ ಆವರಣದಲ್ಲಿ ನಡೆಯಿತು
ಎಂ.ಡಿ.ಸಿ.ಸಿ ಬ್ಯಾಂಕಿನ ಉಪಾಧ್ಯಕ್ಷ ಹೊಸಹೊಳಲು ಹೆಚ್.ಕೆ ಅಶೋಕ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,ರೈತರಿಗಾಗಿ ರೈತರಿಗೋಸ್ಕರ ಇರುವ ಸಂಸ್ಥೆ ಇದಾಗಿದೆ.ಸಹಕಾರ ಸಂಘಗಳು ರೈತರಿಗೆ ವರದಾನ ಆಗಿವೆ, ಸಂಘದ ವಾರ್ಷಿಕ ಮಹಾಸಭೆಗಳು ಕೇವಲ ಲಾಭ- ನಷ್ಟಗಳ ಬಗ್ಗೆ ಚರ್ಚಿಸುವ ಸಭೆಯಾಗಬಾರದು.ರೈತರಿಗೆ, ಗ್ರಾಹಕರಿಗೆ ಉತ್ತಮ ಸೇವೆ ನೀಡುವುದರ ಬಗ್ಗೆ ಚರ್ಚೆ ಆಗಬೇಕು.ಸಹಕಾರ ಸಂಘಗಳ ಮಹತ್ವ ಹೆಚ್ಚು ಇದ್ದು,ಅದನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು.ಇದೇ ರೀತಿ ಸಂಘ ಮತ್ತಷ್ಟು ಅಬಿವೃದ್ದಿ ಹೊಂದಲಿ ಎಂದು ಹೇಳಿದರು.
ಅಧ್ಯಕ್ಷ ವಕೀಲ ಎಸ್.ಆರ್ ನವೀನ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 23- 24ನೇ ಸಾಲಿನಲ್ಲಿ ಒಟ್ಟು 11 ಕೋಟಿ ವ್ಯವಹಾರವನ್ನ ನಡೆಸಿದೆ.ಸಹಕಾರ ಸಂಘಗಳು ಮುಕ್ತವಾಗಿ ಕೆಲಸ ಮಾಡಬೇಕು.ಸಹಕಾರ ಸಂಘಗಳ ಉಳಿವಿನಲ್ಲಿ ರೈತರ ಹಿತ ಮತ್ತು ಬಲವರ್ಧನೆಯು ಅಡಗಿದೆ. ಹಾಗಾಗಿ ಪಕ್ಷಾತೀತವಾಗಿ ಸಹಕಾರ ಕ್ಷೇತ್ರವನ್ನು ಮುನ್ನಡೆಸಲು ನಮ್ಮ ಆಡಳಿತ ಮಂಡಳಿ ಪಕ್ಷಬೇಧ ಮರೆತು ಪ್ರಾಮಾಣಿಕವಾಗಿ ಕೆಲಸ ಮಾಡಿರುವ ತೃಪ್ತಿ ನಮಗಿದೆ ಎಂದರು.
ಈ ಸಂದರ್ಭದಲ್ಲಿ ಎಂ.ಡಿ.ಸಿ.ಸಿ ಮೇಲ್ವಿಚಾರಕ ಆದಿಲ್ ಪಾಷ,ಸಂಘದ ಉಪಾಧ್ಯಕ್ಷ ಎ.ಜೆ ಕುಮಾರ್,ನಿರ್ದೇಶಕರಾದ ಕುಮಾರ್,ಉದಯಕುಮಾರ್,ಚಂದ್ರಪ್ಪ,ಕೋಮಲ,ಲಲಿತ,ಎಸ್. ಎಂ ರಾಮೇಗೌಡ,ರಾಜೇಶ್,ನಂಜುಂಡಯ್ಯ, ಜಯರಾಮನಾಯಕ, ಹರೀಶ್, ಪುರಸಭಾ ಸದಸ್ಯ ಗಿರೀಶ್, ಮಾಜಿ ಸದಸ್ಯ ಕೆ.ಆರ್ ಹೇಮಂತ್ ಕುಮಾರ್, ಕಾರ್ಯದರ್ಶಿ ಎಂ. ಎನ್ ಸತೀಶ್, ಗುಮಾಸ್ತರಾದ ಮಂಜುನಾಥ್,ಶ್ರೀಧರ್, ಬೈರೇಗೌಡ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
————————- ಮನು ಮಾಕವಳ್ಳಿ ಕೆ ಆರ್ ಪೇಟೆ