ಕೆ.ಆರ್.ಪೇಟೆ;ಏಷ್ಯಾ ಖಂಡದ ರೈತ ಸಂಘಟನೆಗಳ ಒಕ್ಕೂಟದ ವತಿಯಿಂದ ರೈತರ ಮಹಿಳಾ ನಾಯಕತ್ವ ತರಬೇತಿ ಕಾರ್ಯಗಾರವು ಥೈಲ್ಯಾಂಡ್ ದೇಶದ ಸುಪಾನ್ ಬೂರಿ ಪಟ್ಟಣದಲ್ಲಿ ಇಂದು ಆರಂಭವಾಯಿತು.
ಈ ಕಾರ್ಯಾಗಾರವು ಇದೇ ಸೆ.19ರಿಂದ ಸೆ.25ರವರೆಗೆ ನಡೆಯಲಿದೆ.ಕಾರ್ಯಾಗಾರದಲ್ಲಿ ಕೆ.ಆರ್.ಪೇಟೆ ತಾಲ್ಲೂಕಿನ ಪ್ರಗತಿಪರ ರೈತ ಮಹಿಳೆ ಹಾಗೂ ಕರ್ನಾಟಕ ರೈತ ಸಂಘದ ಮಹಿಳಾ ಘಟಕದ ನಿಕಟ ಪೂರ್ವ ಅಧ್ಯಕ್ಷೆ ನಂದಿನಿ ಜಯರಾಂ ಹಾಗೂ ಕರ್ನಾಟಕ ರೈತ ಸಂಘದ ಮಹಿಳಾ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಸೇರಿದಂತೆ ಏಷ್ಯಾ ಖಂಡದ ವಿವಿಧ ದೇಶಗಳ ಸುಮಾರು 79 ರೈತ ಮಹಿಳೆಯರು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ.
ಅದರ ಮುಂದುವರೆದ ಭಾಗವಾಗಿ ಏಷ್ಯಾ ಖಂಡದ ರೈತ ಸಂಘಟನೆಯ ಮಹಿಳಾ ಮುಖಂಡರ ತರಬೇತಿ ಕಾರ್ಯಗಾರವು ಥೈಲ್ಯಾಂಡ್ ದೇಶದ ದಲ್ಲಿ ಸೆಪ್ಟೆಂಬರ್ 19 ರಿಂದ 25 ರವರೆಗೆ ನಡೆಯುತ್ತಿದೆ.ರೈತ ಮಹಿಳೆಯರಿಂದಲೇ ಕೃಷಿ ಬದುಕು, ಕೃಷಿ ಕ್ಷೇತ್ರದ ಸಂಕಟಗಳು,ಸಮಸ್ಯೆಗಳು, ಸವಾಲುಗಳು ವಿಷಯ ಕುರಿತು ಕಾರ್ಯಾಗಾರದಲ್ಲಿ ಕೃಷಿ ತಜ್ಞರು ವಿಷಯ ಮಂಡನೆ ಮಾಡಲಿದ್ದಾರೆ.
ಹಾಗೆಯೇ ಇತರ ವಿಷಯಗಳಾದ ಭೂಮಿಯ ಒಡತನ, ಬೀಜದ ಸಾರ್ವಭೌಮತ್ವ, ಜಾಗತಿಕ ತಾಪಮಾನದ ಅವಾಂತರಗಳಿಂದ ರೈತ ಮಹಿಳೆಯ ಬದುಕಿನ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ.
ವಿಶೇಷವಾಗಿ ನಮ್ಮ ಮಾತೃಭಾಷೆ, ರಾಷ್ಟ್ರ ಭಾಷೆ ಅಂತರಾಷ್ಟ್ರೀಯ ಭಾಷೆಗಳಲೂ ರೈತ ಎಂಬ ಪದಕ್ಕೆ ವಿರೋಧ ಲಿಂಗ ಪದವಿಲ್ಲದೆ ರೈತಮಹಿಳೆ ಪದದ ಬಳಕೆ ಬದಲು ಒಂದು ಪದದ ಅನ್ವೇಷಣೆ ಚರ್ಚೆಗಳ ನಂತರ ಹೊರಬೇರಬೇಕೆಂಬ ಕೂಗು ಗಟ್ಟಿಯಾಗಿದೆ.
ರಚನಾತ್ಮಕ ಕೃಷಿಕೇಂದ್ರಿತ ಮತ್ತು ಜನಪರ ರೈತ ಮಹಿಳಾ ವಾದದ ಚರ್ಚೆಗೆ ಏಷ್ಯಾ ಖಂಡದ ರೈತ ಮಹಿಳೆಯರ ಸಮಾವೇಶದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಚುಕ್ಕಿ ನಂಜುಂಡಸ್ವಾಮಿ ಚಾಮರಾಜನಗರ,ನಳಿನಿ ಗೌಡ ಕೋಲಾರ,ಚಿತ್ರದುರ್ಗದಿಂದ ಮೇಘನ,ಚಿಕ್ಕಮಗಳೂರು ಜಿಲ್ಲೆಯಿಂದ ಮಮತಾ,ಬೆಳಗಾಮಿನಿಂದ ಪಾರ್ವತಿ ಕಲ್ಸಣ್ಣನವರ್ ಮತ್ತು ವಕೀಲರಾದಂತ ಅಶ್ವಿನಿ ಮತ್ತು ಮಂಡ್ಯ ಜಿಲ್ಲೆಯಿಂದ ನಂದಿನಿ ಜಯರಾಂ ಸೇರಿ 79ಮಂದಿ ರೈತ ಮಹಿಳೆಯರು ಭಾಗವಹಿಸಿದ್ದಾರೆ .
ಕೃಷಿ ಹುಟ್ಟುವಳಿಗಳನ್ನು ಉತ್ಪತ್ತಿ ಮಾಡುವ ಮಹಿಳೆಯರನ್ನು ಹೀಗೆ ಗಣನೆಗೆ ತೆಗೆದುಕೊಳ್ಳದೆ ಮುಂದುವರೆದರೆ ಕೃಷಿ ಉಳಿದೀತೇ ಎಂಬ ಪ್ರಶ್ನೆಯೊಂದಿಗೆ -ನಾಟಿ ಬಿತ್ತನೆ ಬೀಜದಂತೆ ರೈತ ಮಹಿಳೆಯರು ಉಳಿದರೆ ಮಾತ್ರ ಆಹಾರ ಸಾರ್ವಭೌಮತ್ವವು ಉಳಿದಿತ್ತು ಎಂಬುದು ಚರ್ಚೆಯ ಮುನ್ನಲ್ಲೆಗೆ ಬಂದಿದೆ.
2023ರಲ್ಲಿ ವಿಶ್ವ ಮಹಿಳಾ ರೈತ ಸಂಘಟನೆಗಳ ಒಕ್ಕೂಟದ ಸಮಾವೇಶವು ಆಫ್ರಿಕಾ ದೇಶದ ಮುಖಂಬಿಕ ಪಟ್ಟಣದಲ್ಲಿ ಯಶಸ್ವಿಯಾಗಿ ನಡೆದಿತ್ತು. ಈ ಸಮಾವೇಶದಲ್ಲಿ ಪ್ರಪಂಚದ 81 ದೇಶಗಳ 180 ರೈತ ಸಂಘಟನೆಗಳ ಸಾವಿರಾರು ಮಹಿಳೆಯರು ಭಾಗವಹಿಸಿ ಯಶಸ್ವಿಗೊಳಿಸಿದ್ದರು.ಇದರ ಮುಂದುವರೆದ ಭಾಗವಾಗಿ ಥೈಲ್ಯಾಂಡ್ ದೇಶದಲ್ಲಿ ಮಹಿಳಾ ಸಂಘಟನೆ ಮತ್ತು ತರಬೇತಿ ಕಾರ್ಯಾಗಾರ ನಡೆಯುತ್ತಿದೆ.
—————————–ಶ್ರೀನಿವಾಸ್ ಕೆ ಆರ್ ಪೇಟೆ