ಬೇಲೂರು;ಬೇಲೂರು ತಾಲೂಕಿನ ಕ್ರೀಡಾಪ್ರಿಯರಿಗೊಂದು ಸಂತಸದ ಸುದ್ದಿ,ನೀವು ಓಡುತ್ತೀರಾ? ತಂಡ ಕಟ್ಟಿಕೊಂಡು ನಿಮ್ಮ ಊರಿನಲ್ಲಿ ವಾಲಿಬಾಲ್,ಥ್ರೋ ಬಾಲ್,ಕಬ್ಬಡ್ಡಿ ಖೋ-ಖೋ ಆಡುತ್ತೀರಾ?ಶಾಲೆ-ಕಾಲೇಜುಗಳ ಸಮಯದಲ್ಲಿ ಬರ್ಜಿ ಎಸೆತ,ಉದ್ದ ಜಿಗಿತ,ಎತ್ತರ ಜಿಗಿತ,ಮತ್ತು ತ್ರಿವಿದ ಜಿಗಿತ ಹಾಗೂ ಗುಂಡು ಎಸೆತ,ತಟ್ಟೆ ಎಸೆತಗಳಲ್ಲಿ ಭಾಗವಹಿಸಿ ಅನುಭವವಿದೆಯಾ?
ಹಾಗಿದ್ದಲ್ಲಿ ನೀವು ಈ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಬಹುದು.ನಿಮ್ಮ ಹಳೆಯ ದಿನಗಳ ಮೆಲುಕು ಹಾಕುತ್ತ ಬಹುಮಾನಗಳನ್ನು ಗೆಲ್ಲಬಹುದು.ಒಂದು ವೇಳೆ ಇವಾವುವು ಇಲ್ಲವೆಂದಲ್ಲಿ ನಿಮ್ಮ ಊರಿನ ಕ್ರೀಡಾಪಟುಗಳ ಸ್ಪರ್ಧೆಗಳನ್ನು ಕಣ್ತುಂಬಿಕೊಳ್ಳಬಹುದು.
ಹೆಚ್ಚಿನ ಮಾಹಿತಿ ಹೀಗಿದೆ…
ದಿನಾಂಕ 23/09/2024 ರ ಸೋಮವಾರ ಬೇಲೂರು ತಾಲ್ಲೂಕಿನ ಪುರುಷ ಮತ್ತು ಮಹಿಳೆಯರಿಗಾಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾ ಕೂಟವನ್ನು ಜಿಲ್ಲಾ ಪಂಚಾಯತ್ ಹಾಸನ,ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹಾಸನ, ತಾಲ್ಲೂಕ್ ಪಂಚಾಯತ್ ಬೇಲೂರು ಹಾಗೂ ಶಾಲಾ ಶಿಕ್ಷಣ ಇಲಾಖೆ ಬೇಲೂರು ಇವರ ಸಂಯುಕ್ತ ಆಶ್ರಯದಲ್ಲಿ ತಾಲ್ಲೂಕು ಕ್ರೀಡಾಂಗಣ ಹನುಮಂತನಗರ ಬೇಲೂರು ಇಲ್ಲಿ ನೆಡೆಯಲಿದೆ ಎಂದು ಟಿ.ಪಿ.ಇ.ಓ. ಜಗದೀಶ್ ತಿಳಿಸಿದರು.
ಈ ಕ್ರೀಡಾಕೂಟದಲ್ಲಿ ಪುರುಷರಿಗೆ ಮತ್ತು ಮಹಿಳೆಯರಿಗೆ 100 ಮೀ,200 ಮೀ,400 ಮೀ,800 ಮೀ,1500 ಮೀ, , ಓಟ, ಉದ್ದ ಜಿಗಿತ,ಎತ್ತರ ಜಿಗಿತ,ಮತ್ತು ತ್ರಿವಿದ ಜಿಗಿತ ಹಾಗೂ ಗುಂಡು ಎಸೆತ,ತಟ್ಟೆ ಎಸೆತ ಮತ್ತು ಭರ್ಜಿ ಎಸೆತ, 4×100 ರಿಲೇ, 4×400 ಓಟ, ವಾಲಿಬಾಲ್, ಥ್ರೋಬಾಲ್, ಕಬ್ಬಡಿ, ಖೋ ಖೋ ಹಾಗು ಪುರುಷರಿಗೆ 5000 ಮೀ, 10000 ಮೀ ಓಟ ಮತ್ತು ಮಹಿಳೆಯರಿಗೆ 3000 ಮೀ ಓಟ ಇರುವುದರಿಂದ ಭಾಗವಹಿಸುವ ಪುರುಷರು ಮತ್ತು ಮಹಿಳೆಯರು 9980119510 ನಂಬರ್ ಗೆ ಕರೆ ಮಾಡಿ ಅಥವಾ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯಲ್ಲಿ ಖುದ್ದಾಗಿ ಬಂದು ನನ್ನನ್ನು ಸಂಪರ್ಕಿಸಿ ಕ್ರೀಡಾಕೂಟದಲ್ಲಿ ಭಾಗವಹಿಸಲು ನೋಂದಣಿ ಮಾಡಿಕೊಳ್ಳಬಹುದು ಎಂದು ತಿಳಿಸಿದರು.
——————————-ರವಿಕುಮಾರ್