ಕೊಟ್ಟಿಗೆಹಾರ-ಅತ್ತಿಗೆರೆ ಗ್ರಾಮದ ಪ್ರಾಥಮಿಕ ಶಾಲಾ ಆವರಣದಲ್ಲಿ ಬಾರಿ ಗಾತ್ರದ ಕಾಳಿಂಗ ಸರ್ಪವೊಂದು ಕಾಣಿಸಿಕೊಂಡು ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಶುಕ್ರವಾರ ವಿದ್ಯಾರ್ಥಿಗಳು ಹೊರತು ಹೋದ ಮೇಲೆ ಶೌಚಾಲಯದ ಒಳಗೆ ಕಾಳಿಂಗ ಸರ್ಪವೊಂದು ಅಡಗಿ ಕುಳಿತಿರುವುದನ್ನು ಗ್ರಾಮಸ್ಥರು ನೋಡಿ ತಕ್ಷಣ ಉರಗ ಪ್ರೇಮಿ ಮೊಹಮ್ಮದ್ ಆರಿಫ್ ರವರಿಗೆ ಹಾಗು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಬಂದ ಮೊಹಮ್ಮದ್ ಆರಿಫ್ ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ ಕಾಳಿಂಗ ಸರ್ಪವನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.ಕಾಳಿಂಗ ಸರ್ಪ 15 ಅಡಿಗೂ ಹೆಚ್ಚು ಉದ್ದವಿದ್ದು ಅದನ್ನು ಅರಣ್ಯಾಧಿಕಾರಿ ವಿಜಯ್ ಕುಮಾರ್ ಸಮ್ಮುಖದಲ್ಲಿ ಚಾರ್ಮಾಡಿ ಅರಣ್ಯಕ್ಕೆ ಬಿಡುವುದಾಗಿ ಮೊಹಮ್ಮದ್ ಆರಿಫ್ ತಿಳಿಸಿದರು.
ಒಟ್ಟಾರೆ ವಿದ್ಯಾರ್ಥಿಗಳು ಶೌಚಾಲಯಕ್ಕೆ ಹೋದ ಸಂದರ್ಭದಲ್ಲಿ ಅವರಿಗೆ ಅಪಾಯವನ್ನುಂಟು ಮಾಡದೇ ಕಾಳಿಂಗ ಸರ್ಪ ಮಾನವೀಯತೆಯನ್ನು ಮೆರೆದಿದೆ ಎಂದೇ ಹೇಳಬಹುದು.
————––ಸೂರಿ ಬಣಕಲ್