ಹುಬ್ಬಳ್ಳಿ : ಈ ವರ್ಷ 2025 ವಿಶ್ವದಾದ್ಯಂತ ಸ್ಕೋಡಾ ಆಟೊಗೆ ಪ್ರಮುಖ ಮೈಲಿಗಲ್ಲಾಗಿದ್ದು 130 ವರ್ಷಗಳ ಶ್ರೀಮಂತ ಇತಿಹಾಸ ಮತ್ತು ಭಾರತದಲ್ಲಿ 25 ಉತ್ಸಾಹಕರ ವರ್ಷಗಳ ಸಂಭ್ರಮಾಚರಣೆಯಾಗಿದೆ. ಗ್ರಾಹಕರಿಗೆ ಹತ್ತಿರವಾಗುವ ಕಾರ್ಯತಂತ್ರದ ಅಡಿಯಲ್ಲಿ ನಿರ್ಮಾಣವಾದ ಸ್ಕೋಡಾ ಆಟೊ ಇಂಡಿಯಾ ಪ್ರಮುಖವಾದ ಬ್ರಾಂಡ್, ಉತ್ಪನ್ನ, ಜಾಲ ಮತ್ತು ಗ್ರಾಹಕ-ಕೇಂದ್ರಿತ ಉಪಕ್ರಮಗಳನ್ನು ರೂಪಿಸಿದ್ದು ಭಾರತೀಯ ಮಾರುಕಟ್ಟೆಯಲ್ಲಿ ವೇಗ ವರ್ಧಿಸಲಿದೆ.

ಈ ಸಂದರ್ಭ ಕುರಿತು ಸ್ಕೋಡಾ ಆಟೊ ಇಂಡಿಯಾದ ಬ್ರಾಂಡ್ ನಿರ್ದೇಶಕರಾದ ಆಶಿಶ್ ಗುಪ್ತಾ, “ಭಾರತವು ಯೂರೋಪ್ ಹೊರಗಡೆ ಸ್ಕೋಡಾ ಆಟೊಗೆ ಅತ್ಯಂತ ಪ್ರಮುಖ ಬೆಳವಣಿಗೆಯ ಮಾರುಕಟ್ಟೆಯಾಗಿದೆ. ನಾವು ಸದೃಢ, ಭವಿಷ್ಯ-ಸನ್ನದ್ಧ ಬ್ರಾಂಡ್ ಅನ್ನು ನಿರ್ಮಿಸಲು ಆದ್ಯತೆ ನೀಡಿದ್ದು ಅದಕ್ಕೆ ಉದ್ದೇಶದ ಭಾವನೆ, ದೂರದೃಷ್ಟಿಯ ಸ್ಪಷ್ಟತೆ ಮತ್ತು ಅನುಷ್ಠಾನದ ಸದೃಢತೆ ಹೊಂದಿದ್ದೇವೆ. ನಮ್ಮ ಉತ್ಪನ್ನದ ಆಕ್ರಮಣಕಾರಿ ಕಾರ್ಯತಂತ್ರವು ಗ್ರಾಹಕರ ವಿಕಾಸಗೊಳ್ಳುತ್ತಿರುವ ಅಗತ್ಯಗಳು ಮತ್ತು ಆಕಾಂಕ್ಷೆಗಳಿಗೆ ಪೂರಕವಾಗಿದ್ದು ನಮ್ಮ ಪ್ರಗತಿಯ ಪ್ರಯಾಣಕ್ಕೆ ಶಕ್ತಿ ನೀಡಲಿದೆ. ನಾವು ವ್ಯೂಹಾತ್ಮಕವಾಗಿ ನಮ್ಮ ಜಾಲ ವಿಸ್ತರಿಸುತ್ತಿದ್ದೇವೆ ಮತ್ತು ಗುಣಮಟ್ಟ, ಸುರಕ್ಷತೆ ಮತ್ತು ಮೌಲ್ಯದ ನಮ್ಮ ಪರಂಪರೆಯನ್ನು ಮರು ದೃಢೀಕರಿಸುತ್ತಿದ್ದೇವೆ.ನಮ್ಮ ಎಲ್ಲ ಉದ್ಯಮದ ವಲಯಗಳೂ ಸಕ್ರಿಯವಾಗಿದ್ದು 2025 ಬ್ರಾಂಡ್ ಅನ್ನು ಗಮನಾರ್ಹವಾಗಿ ಸದೃಢಗೊಳಿಸಲಿದ್ದೇವೆ ಮತ್ತು ಭಾರತದಲ್ಲಿ ನಾವು ಮತ್ತಷ್ಟು ವಿಸ್ತರಿಸಲಿದ್ದೇವೆ” ಎಂದರು.

ಸ್ಕೋಡಾ ಆಟೊ ಇಂಡಿಯಾದ ಉತ್ಪನ್ನದ ಪ್ರಭಾವೀ ಕಾರ್ಯತಂತ್ರದಲ್ಲಿ
ಪ್ರತಿಯೊಬ್ಬರಿಗೂ ಎಸ್.ಯು.ವಿ.” ಒಳಗೊಂಡಿದೆ ಮತ್ತು ತನ್ನ ಸೆಡಾನ್ ಪರಂಪರೆಯನ್ನು ಹೆಚ್ಚಿಸಿದೆ. ಕೈಲಾಕ್, ಕುಶಾಕ್ ಮತ್ತು ಕೊಡಿಯಾಕ್ ಗಳು ಪ್ರತಿ ಎಸ್.ಯು.ವಿ. ಆಕಾಂಕ್ಷೆ ಮತ್ತು ಬೆಲೆಯಲ್ಲೂ ಪೂರೈಕೆಯಾಗುತ್ತಿದ್ದು ಸ್ಕೋಡಾ ಆಟೊ ಇಂಡಿಯಾ ಸ್ಲೇವಿಯಾದಿಂದ ಹಾಗೂ ಸದ್ಯದಲ್ಲೇ ಬಿಡುಗಡೆಯಾಗಲಿರುವ `ಗ್ಲೋಬಲ್ ಐಕಾನ್’ ಮೂಲಕ ತನ್ನ ಸೆಡಾನ್ ಪರಂಪರೆಯನ್ನೂ ನಿರ್ಮಿಸಲಿದೆ ಎಂದು ತಿಳಿಸಿದರು.
- ಕೆ.ಬಿ.ಚಂದ್ರಚೂಡ