ಮೈಸೂರು-ಗಬ್ಬುನಾರುತ್ತಿರುವ ಅಂಡರ್ ಪಾಸ್ ಗಳು-ದಸರಾ ಸಮೀಪಿಸುತ್ತಿದೆ ಮೈಸೂರಿಗರ ಗೌರವ ಕಳೆಯಬೇಡಿ ಎಂದು ಪಾಲಿಕೆಗೆ ವಿಕ್ರಂ ಅಯ್ಯಂಗಾರ್ ಮನವಿ

ಮೈಸೂರು-ದಸರಾ ಸಮೀಪಿಸುತ್ತಿದ್ದು ದೇಶ ವಿದೇಶಗಳಿಂದ ಪ್ರವಾಸಿಗರು ಮೈಸೂರಿಗೆ ಆಗಮಿಸಲಿದ್ದಾರೆ.ನಗರದ ಬಹುತೇಕ ಅಂಡರ್ ಪಾಸ್ ರಸ್ತೆಗಳು ಕೊಳಕು ತುಂಬಿ ಗಬ್ಬು ನಾರುತ್ತಿದ್ದು ಪಾಲಿಕೆ ಅವನ್ನು ಸರಿಪಡಿಸುವತ್ತ ಗಮನ ಹರಿಸಬೇಕೆಂದು ಸಾಮಾಜಿಕ ಹೋರಾಟಗಾರ ವಿಕ್ರಂ ಅಯ್ಯಂಗಾರ್ ಆಗ್ರಹಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿರುವ ಅವರು,ಕೋಟ್ಯಂತರ ರೂಪಾಯಿ ಖರ್ಚುಮಾಡಿ ಜನರ ಓಡಾಟಕ್ಕೆ ನಿರ್ಮಿಸಿರುವ ನಗರದ ವಸ್ತುಪ್ರದರ್ಶನಕ್ಕೆ ಹೋಗುವ ಅಂಡರ್ ಪಾಸ್ ಸೇರಿದಂತೆ ಬಹುತೇಕವುಗಳು ಅನೈತಿಕ ಚಟುವಟಿಕೆಗಳ ಆಗರವಾಗಿವೆ.ಸಾರ್ವಜನಿಕರು ಸಂಚರಿಸಲು ಯೋಗ್ಯವಾಗದ ಪರಿಸ್ಥಿತಿಯಲ್ಲಿವೆ.ಸಂಜೆಯಾದರೆ ಸಾಕು ಆ ನಿರ್ಜನ ಅಂಡರ್ ಪಾಸ್ ಗಳಲ್ಲಿ ಕುಡುಕರು ಅಪಾಪೋಲಿಗಳು ಸೇರಿಕೊಂಡು ಅನೈತಿಕ ಚಟುವಟಿಕೆಗಳ ನಡೆಸುತ್ತಾರೆ.

ಮೈಸೂರು ನಗರಪಾಲಿಕೆ ಹಾಳು ಬಿದ್ದಿರುವ ಆ ಅಂಡರ್ ಪಾಸ್ ಗಳನ್ನು ಸರಿಪಡಿಸಿ ಸಿ ಸಿ ಟಿವಿ ಗಳನ್ನೂ ಅಳವಡಿಸಿ ದಸರಾಕ್ಕೆ ಬರುವ ಪ್ರವಾಸಿಗರ ಮುಂದೆ ಮೈಸೂರಿಗರ ಗೌರವ ಉಳಿಸುವಂತೆ ಅವರು ಕೇಳಿಕೊಂಡಿದ್ದು,ಪೊಲೀಸ್ ಇಲಾಖೆಯು ಅಂಡರ್ ಪಾಸ್ ಗಳ ಅಕ್ರಮ ಚಟುವಟಿಕೆಗಳ ಬಗ್ಗೆ ಕಣ್ಣಿರಿಸುವಂತೆ ವಿಕ್ರಂ ಅಯ್ಯಂಗಾರ್ ಆಗ್ರಹಿಸಿದ್ದಾರೆ.

ಆದಷ್ಟು ಶೀಘ್ರ ನಮ್ಮ ಮನವಿಯನ್ನು ಮಹಾನಗರ ಪಾಲಿಕೆಯ ಅಧಿಕಾರಿಗಳು ಪುರಸ್ಕರಿಸಿ ಸಮಸ್ಯೆ ನಿವಾರಣೆಗೆ ಮುಂದಾಗಬೇಕು,ಇಲ್ಲವಾದಲ್ಲಿ ಸಮಾನ ಮನಸ್ಕ ಸಂಘಟನೆಗಳ ಬೆಂಬಲ ಪಡೆದು ಮಹಾನಗರ ಪಾಲಿಕೆಯ ಎದುರು ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.

———————-–ಮಧುಕುಮಾರ್

Leave a Reply

Your email address will not be published. Required fields are marked *

× How can I help you?