ಕೊಪ್ಪ;ದೈಹಿಕ ಶಿಕ್ಷಕರೇ ಇಲ್ಲದ ತಾಲೂಕಿನ ಲೋಕನಾಥಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ತಾಲೂಕು ಮಟ್ಟದ ಶಾಲಾ ಕ್ರೀಡಾಕೂಟದಲ್ಲಿ ಹಲವು ಪ್ರಶಸ್ತಿಗಳನ್ನು ಬಾಚಿಕೊಳ್ಳುವ ಮೂಲಕ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ಅವಕಾಶ ಗಿಟ್ಟಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.
ತಲಮಕ್ಕಿಯಲ್ಲಿ ನಡೆದ ಕ್ರೀಡಾಕೂಟ ಇಂತಹದೊಂದು ಅಚ್ಚರಿಗೆ ಸಾಕ್ಷಿಯಾಗಿದೆ.ಶಾಲೆಯ ಇತರ ಶಿಕ್ಷಕರೇ ಈ ಮಕ್ಕಳಿಗೆ ತರಬೇತಿ ನೀಡಿದ್ದು ಅವರ ಶ್ರಮಕ್ಕೆ ಸಾರ್ಥಕತೆಯನ್ನು ವಿದ್ಯಾರ್ಥಿಗಳು ಗಳಿಸಿಕೊಟ್ಟಿದ್ದಾರೆ.
ಬಾಲಕಿಯರ ಕಬ್ಬಡ್ಡಿಯಲ್ಲಿ ಪ್ರಥಮ ಸ್ಥಾನ,100ಮೀಟರ್ ಓಟದಲ್ಲಿ ಪೂಜಾ ಪ್ರಥಮಸ್ಥಾನ,ಹಾಗು ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನವನ್ನು ಪಡೆದರೆ,ಇಬ್ಬನಿ 200 ಮೀ ಓಟದಲ್ಲಿ ದ್ವಿತೀಯ ಸ್ಥಾನವನ್ನು,ಅಫ್ಜಲ್ ತಟ್ಟೆ ಮತ್ತು ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಅಯ್ಕೆಯಾಗಿದ್ದಾರೆ.
ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಸತೀಶ್ ಹಾಗೂ ಮಾಜಿ ಅಧ್ಯಕ್ಷರಾದ ರಮೇಶ್ ರವರು ಮಕ್ಕಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಮುಂದಿನ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಉತ್ತಮ ರೀತಿಯ ಪ್ರದರ್ಶನ ನೀಡಿ ಗೆದ್ದು ಬರಲಿ ಎಂದು ಹಾರೈಸಿದ್ದಾರೆ.
ವಿದ್ಯಾರ್ಥಿಗಳಿಗೆ ಶಾಲೆಯ ಮುಖ್ಯ ಶಿಕ್ಷಕರಾದ ಲಕ್ಷ್ಮಣ್ ಎಸ್.ಸಹ ಶಿಕ್ಷಕರಾದ ಸುನಿಲ್ ಕುಮಾರ್ ಹಾಗೂ ಶಿಕ್ಷಕಿ ಗೀತಾ ಅಭಿನಂದನೆ ಸಲ್ಲಿಸಿದರು.
————————–-ಹರೀಶ್ ನಾರ್ವೆ