ಕೆ.ಆರ್.ಪೇಟೆ:ಸಹಕಾರಿ ಸಂಘಗಳಲ್ಲಿ ಗುರುತಿಸಿಕೊಳ್ಳುವ ಮೂಲಕ ನಾನು ತಾಲೂಕಿನ ಜನಸಂಪರ್ಕಕ್ಕೆ ಬಂದು ಶಾಸಕನಾಗಲು ಸಾಧ್ಯವಾಯಿತು-ಶಾಸಕ ಹೆಚ್ ಟಿ ಮಂಜು

ಕೆ.ಆರ್.ಪೇಟೆ:ಸಹಕಾರಿ ಸಂಘಗಳಲ್ಲಿ ಗುರುತಿಸಿಕೊಳ್ಳುವ ಮೂಲಕ ನಾನು ತಾಲೂಕಿನ ಜನಸಂಪರ್ಕಕ್ಕೆ ಬಂದು ಶಾಸಕನಾಗಲು ಸಾಧ್ಯವಾಯಿತು ಎಂದು ಶಾಸಕ ಹೆಚ್ ಟಿ ಮಂಜು ಹೇಳಿದರು.

ತಾಲೂಕಿನ ಶೀಳನೆರೆ ಹೋಬಳಿಯ ಹರಳಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2023-24 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಜ್ಯೋತಿ ಬೆಳಗಿಸುವ ಮುಖಾಂತರ ಉದ್ಘಾಟಿಸಿ ಮಾತನಾಡಿದರು.

ತಾಲೂಕಿನಲ್ಲೆ ನನ್ನ ಹುಟ್ಟೂರಿನ ಹರಳಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಉತ್ತಮವಾಗಿ ಆದಾಯದಲ್ಲಿ ನಾಲ್ಕನೇ ಸ್ಥಾನದಲ್ಲಿ ಇರುವುದು ನಿಜಕ್ಕೂ ಸಂತೋಷಕರ ವಿಚಾರ.ಈ ಸಹಕಾರಿ ಕ್ಷೇತ್ರದಿಂದಲೇ ನಾನು ತಾಲೂಕಿನಲ್ಲಿ ಉತ್ತಮವಾದ ಜನರ ಸಂಪರ್ಕ ಹೊಂದುವ ಮೂಲಕ ಒಂದು ಉನ್ನತ ಜವಾಬ್ದಾರಿ ಶಾಸಕ ಸ್ಥಾನಕ್ಕೆ ಏರುವಂತಾಗಿದೆ.

ಸಹಕಾರಿ ಸಂಘಗಳು ಬರಿ ಸಾಲ ಕೊಡುವುದಕ್ಕೆ ಅಷ್ಟೇ ಸೀಮಿತವಾಗಿರಬಾರದು.ರೈತರಿಗೆ ರಸಗೊಬ್ಬರ, ಕ್ರೀಮಿನಾಶಕ ಔಷಧಗಳುಕೊಡುವ ಮೂಲಕ ರೈತರಿಗೆ ಸಹಕಾರಿಯಾಗಬೇಕು .ಆ ನಿಟ್ಟಿನಲ್ಲಿ ಸಿಬ್ಬಂದಿಗಳು ಶ್ರಮವಹಿಸಿ ಕೆಲಸ ಮಾಡಬೇಕು.ರೈತರ ಆದಾಯಕ್ಕೆ ತಕ್ಕಂತೆ ರೈತರಿಗೆ ಸಾಲ ನೀಡಿ ಸಾಲ ಮನ್ನಾದಂತಾ ಕಾರ್ಯಗಳು ನಿಗದಿತ ಸಮಯದಲ್ಲಿ ನಡೆಯುವಂತೆ ನೋಡಿಕೊಳ್ಳಬೇಕು. ರೈತರೊಂದಿಗೆ ಉತ್ತಮ ಸಂಪರ್ಕಹೊಂದಿ ಯಾವುದೇ ಹೊರೆಯಾಗದಂತೆ ನೋಡಿಕೊಳ್ಳಬೇಕು. ಇಂದು ಸಹಕಾರಿ ಸಂಘಗಳ ಜತೆಗೆ ರಾಷ್ಟ್ರೀಯ,ಅಂತಾರಾಷ್ಟ್ರೀಯ ಬ್ಯಾಂಕುಗಳು ದೊಡ್ಡ ಪೈಪೋಟಿ ನಡೆಸುತ್ತಿವೆ.ಆದರೂ ಸಹಕಾರಿ ಸಂಘಗಳನ್ನು ಹಿಂದಕ್ಕೆ ಹಾಕಲು ಸಾಧ್ಯವಾಗುತ್ತಿಲ್ಲ. ಸಹಕಾರಿ ಸಂಘಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುತ್ತಿರುವುದರಿಂದ ಗಣನೀಯವಾಗಿ ಬೆಳೆಯುತ್ತಿವೆ.ವೃತ್ತಿಪರತೆ ಅಳವಡಿಸಿಕೊಳ್ಳದಿದ್ದರೆ ಗ್ರಾಮೀಣ ಪ್ರದೇಶದಲ್ಲಿ ಸಹಕಾರ ಪತ್ತಿನ ಸಂಘಗಳು ಬೆಳೆಯುವುದು ಕಷ್ಟ. ಸಹಕಾರ ಸಂಘಗಳ ಪ್ರತಿನಿಧಿಗಳು ವೃತ್ತಿಪರತೆ, ಶಿಸ್ತು ಹಾಗೂ ಬದ್ದತೆ ಮೈಗೂಡಿಸಿಕೊಳ್ಳಬೇಕು ಎಂದರು.

ಎಂ.ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ಹೊಸಹೊಳಲು ಅಶೋಕ್ ಮಾತನಾಡಿ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಹೋಲಿಸಿದರೆ ಸಹಕಾರ ಸಂಘಗಳ ಮೂಲಕ ತ್ವರಿತಗತಿಯಲ್ಲಿ ಸಾಲ ಸೌಲಭ್ಯ ಪಡೆದುಕೊಳ್ಳಬಹುದು. ಸಹಕಾರ ಸಂಘಗಳ ಮೂಲಕ ಸದಸ್ಯರು ತಾವು ಪಡೆದ ಸಾಲವನ್ನು ಸಮರ್ಪಕವಾಗಿ ಸಕಾಲದಲ್ಲಿ ಮರುಪಾವತಿ ಮಾಡಿದಲ್ಲಿ ಸಂಘ ಅಭಿವೃದ್ಧಿ ಹೊಂದಲು ಸಾಧ್ಯ. ಎಲ್ಲ ಸಮಾಜದ ಬಡ,ಮಧ್ಯಮ ವರ್ಗದವರಿಗೆ ಅತಿ ಸರಳ ಹಾಗೂ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುವ ಮೂಲಕ ಸಹಕಾರ ಸಂಘಗಳು ಮಾಡುತ್ತಿರುವ ನಿಶ್ವಾರ್ಥ ಸೇವೆ ನಿಜಕ್ಕೂ ಶ್ಲಾಘನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಹೆಚ್.ಟಿ ಲೋಕೇಶ್ ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದು ಮತ್ತು ಅವರ ಏಳಿಗೆಗೆ ಶ್ರಮಿಸುವುದು ಸಹಕಾರ ಸಂಘಗಳ ಮೂಲ ಉದ್ದೇಶ. ಆ ತತ್ವವನ್ನೇ ನಮ್ಮ ಆಡಳಿತ ಮಂಡಳಿ ಮೈಗೂಡಿಸಿಕೊಂಡು ಸಂಘದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ.ಮಳೆ ಕೊರತೆ,ಬೆಳೆನಷ್ಟಗಳಿಂದ ರೈತ ಸಾಲ ಬಾಧೆ ಅನುಭವಿಸುತ್ತಿದ್ದಾನೆ.ಮಳೆ ನಂಬಿ ವ್ಯವಸಾಯ ಮಾಡುವ ರೈತ ಆರ್ಥಿಕವಾಗಿ ಕುಗ್ಗುತ್ತಿದ್ದಾನೆ. ಈ ನಿಟ್ಟಿನಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಮೂಲಕ ಅವರನ್ನು ಆರ್ಥಿಕವಾಗಿ ಸದೃಢಗೊಳಿಸಲು ಪ್ರಾಮಾಣಿಕವಾಗಿ ಶ್ರಮವಿಸುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಹೆಚ್. ಟಿ ಲೋಕೇಶ್, ಉಪಾಧ್ಯಕ್ಷ ಅನಿತಾ, ನಿರ್ದೇಶಕರಾದ ಭೈರಪುರ ಜೆ.ಹರೀಶ್, ರಾಯಸಮುದ್ರ ಪ್ರೇಮಕುಮಾರ್, ಮೈಲನಹಳ್ಳಿ ಮಂಜೇಗೌಡ,ಚಟ್ಟೆನಹಳ್ಳಿ ಮಹದೇವ, ಸಿಂಗಾಪುರ ಬೋರೇಗೌಡ, ಚಟ್ಟೆನಹಳ್ಳಿ ಗೋಪಾಲಶೇಟ್ಟಿ, ನೀತಿಮಂಲ ಲೋಕಮಾತೇ, ರಾಯಸಮುದ್ರ ಲೋಕೇಶಚಾರಿ,ಸರೋಜಮ್ಮ, ಸಂಘದ ಕಾರ್ಯದರ್ಶಿ ಡಿ.ಆದರ್ಶ, ಗುಮಸ್ತರಾದ ಆಶಾ,ಅರುಣ್ ಕುಮಾರ್, ಅನುರತಿ, ಗ್ರಾ.ಪಂ ಅಧ್ಯಕ್ಷ ಯೋಗೇಶ್,ಸದಸ್ಯರಾದ ಉಮಾ ಶ್ರೀಧರ್,ಸಂಘದ ಮಾಜಿ ಅಧ್ಯಕ್ಷ ಶಿವಲಿಂಗೇಗೌಡ, ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಮಹೇಶ್, ಪಿಡಿಓ ಬಸವಶೆಟ್ಟಿ, ಮೇಲ್ವಿಚಾರಕೀ ಸರಸ್ವತಿ ,ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್,ಸಂಘದ ಶೇರುದಾರರು ಸೇರಿದಂತೆ ಇತರರಿದ್ದರು.

———————-–ಮನು ಮಾಕವಳ್ಳಿ ಕೆ ಆರ್ ಪೇಟೆ

Leave a Reply

Your email address will not be published. Required fields are marked *

× How can I help you?