ಚಿಕ್ಕಮಗಳೂರು:ಜಿಲ್ಲಾ ಪದವೀಧರರ ಪತ್ತಿನ ಸಹಕಾರ ಸಂಘದ 2023-24ನೇ ಸಾಲಿನ 24ನೇ ವರ್ಷದ ಸರ್ವಸದಸ್ಯರ ಸಭೆಯಲ್ಲಿ ಷೇರುದಾರರಿಗೆ ಶೇಕಡ 10 ರಷ್ಟು ಡಿವಿಡೆಂಡ್‌ನ್ನು ಸಭೆಯ ಅಧ್ಯಕ್ಷ ಡಾ.ಡಿ.ಎಲ್.ವಿಜಯಕುಮಾರ್ ಘೋಷಿಸಿದರು.
ಅವರು ಇಂದು ಸಂಘದ ಸಂಘದ ಸರ್ವಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ 2000-01ನೇ ಸಾಲಿನಲ್ಲಿ ಆರಂಭವಾದ ಈ ಸಂಘವು ಇದುವರೆವಿಗೂ 2231 ಸದಸ್ಯರುಗಳನ್ನು ,68.23 ಲಕ್ಷ ಷೇರು ಹಣವನ್ನು ಹೊಂದಿದ್ದು,13.75 ಕೋಟಿ ಠೇವಣಿ ಸಂಗ್ರಹಿಸುವ ಮೂಲಕ 10.80ಕೋಟಿ ನೀಡಿ 2023-24ನೇ ಸಾಲಿನಲ್ಲಿ 40 ಕೋಟಿ ವ್ಯವಹಾರವನ್ನು ನಡೆಸಿ, ರೂ.15,38,456-62 ರೂಗಳ ನಿವ್ವಳ ಲಾಭವನ್ನು ಗಳಿಸಿದೆ.ಕಳೆದ 24ವರ್ಷಗಳಿಂದಲೂ ಲಾಭದಲ್ಲಿರುವ ಸಂಘವು ಈ ವರ್ಷ ಶೇ 10ರಷ್ಟು ಡಿವಿಡೆಂಡ್ ಅನ್ನು ಷೇರುದಾರರಿಗೆ ಘೋಷಿಸಿದೆ ಎಂದರು.
ಈ ಹಿಂದೆ ವಾರ್ಷಿಕ ಮಹಾಸಭೆಯಲ್ಲಿ ಭರವಸೆ ನೀಡಿದಂತೆ 2 ವರ್ಷದೊಳಗೆ ಸ್ವಂತ ಭವ್ಯವಾದ ಕಟ್ಟಡವನ್ನು ಕಟ್ಟಿ ಅದ್ದೂರಿಯಾಗಿ ಗಣ್ಯವಕ್ತಿಗಳಿಂದ ಉದ್ಘಾಟನೆ ಮಾಡಿ ಸಂಘವು ಸ್ವಂತ ಕಟ್ಟಡದಲ್ಲಿ ಕಾರ್ಯ ಪ್ರಾರಂಭಿಸಲಾಗಿದೆ.ಈ ಕಾರಣಕ್ಕೆ ನಮ್ಮ ಆಡಳಿತ ಮಂಡಳಿ ಮತ್ತು ಕಟ್ಟಡ ಉಪ ಸಮಿತಿಯ ಸದಸ್ಯರಿಗೆ ಅಭಿನಂದೆನಗಳನ್ನು ಸಲ್ಲಿಸುತ್ತೇನೆ. ಕಟ್ಟಡವನ್ನು ಕಟ್ಟಲು ಈಗಾಗಲೇ ಸುಮಾರು 1.22 ಕೋಟಿ ವ್ಯಯಿಸಿದ್ದು,ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಲಿಪ್ಟ್ ಅಳವಡಿಸಿರುವ ಸೊಸೈಟಿ ಎಂದರೆ ಅದು ನಮ್ಮ ಸೊಸೈಟಿ ಎಂದು ತಿಳಿಸಿದರು.
ಸಂಘದ ವ್ಯವಸ್ಥಾಪಕ ನಾರಾಯಣ ಸ್ವಾಮಿ ಸಿ.ಎಂ, 2023-24ನೇ ಸಾಲಿನ ವರದಿಯನ್ನು ಮಂಡಿಸಿದರು.ಲಾಭ-ನಷ್ಟಗಳ ವಿವರಣೆಯೊಂದಿಗೆ 2023-24ನೇ ಸಾಲಿನಲ್ಲಿ ಸಂಘವು ಕನಿಷ್ಠ 250 ಸದಸ್ಯರುಗಳನ್ನು ನೊಂದಾಯಿಸಿಕೊoಡು ಷೇರು ಬಂಡವಾಳವನ್ನು 1 ಕೋಟಿಗೆ ಹೆಚ್ಚಿಸಲು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸದಸ್ಯರಿಗೆ ಸ್ಥಿರಾಸ್ತಿ ಸಾಲವನ್ನು 35ಲಕ್ಷದವರೆಗೆ ನೀಡುತ್ತಿದ್ದು, 12 ಕೋಟಿಗೂ ಅಧಿಕ ಸಾಲನೀಡಿ 2 ಕೋಟಿ ಠೇವಣಿಯನ್ನು ಸಂಗ್ರಹಿಸುವ ಗುರಿಯ ಬಗ್ಗೆ ತಿಳಿಸಿದರು.
ಸಂಘದ ನಿರ್ದೇಶಕ ಕೆ.ವೆಂಕಟೇಶ್ ಪೈ, ಯು.ಟಿ.ನಾಗರಾಜು, ಎಸ್.ವಿ. ಬಸವರಾಜಪ್ಪ, ಬಿ.ಹೆಚ್.ಶಂಕರ್, ಮರುಳಪ್ಪ ಹೆಚ್.ಆರ್., ಚಂದ್ರನಾಯಕ್, ಗಂಗೇಗೌಡ ಎಂ.ಪಿ., ದೀಪಕ್ ಡಿ.ಬಿ., ಉಮೇಶ್‌ಕುಮಾರ್ ಎಂ.ಎಸ್., ಬಿ.ಎಂ.ಸುoದರಾಜ್, ಪ್ರಶಾಂತ ಬಿ.ಎಸ್, ಅನುಪಮ ಡಿ. ಇದ್ದರು. ಮನ್ವಿತಾ ಸಿ. ನಾರಾಯಣ ಪ್ರಾರ್ಥಿಸಿ, ಸಿ.ಆರ್.ಪ್ರೇಮಕುಮಾರ್ ಸ್ವಾಗತಸಿದರೆ, ಗೀತಾ ಬಿ.ವಿ. ಇವರ ವಂದಿಸಿದರು.
———-ಪ್ರಕಾಶ್ ಕೋಟಿಗನಹಳ್ಳಿ