ಮೈಸೂರು-ಭಾರತೀಯ ಜನತಾ ಪಾರ್ಟಿ ಮೈಸೂರು ಜಿಲ್ಲಾ ಗ್ರಾಮಾಂತರ ವತಿಯಿಂದ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಸದಸ್ಯತ್ವ ಅಭಿಯಾನ

ಮೈಸೂರು-ಭಾರತೀಯ ಜನತಾ ಪಾರ್ಟಿ ಮೈಸೂರು ಜಿಲ್ಲಾ ಗ್ರಾಮಾಂತರ ವತಿಯಿಂದ ವರುಣಾ ವಿಧಾನಸಭಾ ಕ್ಷೇತ್ರದ ಅಳಗಂಚಿ,ಅಳಗಂಚಿಪುರ,ಇಮ್ಮಾವು,ಇಮ್ಮಾವು ಹುಂಡಿ,ಏಚಗಳ್ಳಿ,ಮುಂತಾದ ಗ್ರಾಮಗಳಿಗೆ ತೆರಳಿ ಸದಸ್ಯತಾ ಅಭಿಯಾನ ನಡೆಸಿ ಸಾಕಷ್ಟು ನಾಗರೀಕರು ಹಾಗೂ ಯುವಕ ಮಿತ್ರರನ್ನು ಸದಸ್ಯರನ್ನಾಗಿ ನೇಮಕ ಮಾಡಿಕೊಳ್ಳಲಾಯಿತು ಎಂದು ಜಿಲ್ಲಾ ಗ್ರಾಮಾಂತರ ಅಧ್ಯಕ್ಷರಾದ ಎಲ್ ಆರ್ ಮಹದೇವಸ್ವಾಮಿ ತಿಳಿಸಿದರು.

ಇಡೀ ರಾಜ್ಯದಲ್ಲಿ ಬಿಜೆಪಿ ಸದಸ್ಯತ್ವ ಚುರುಕಾಗಿ ಸಾಗುತ್ತಿದ್ದು ಇದರ ನೇತೃತ್ವ ವಹಿಸಿರುವ ನಮ್ಮ‌ ನಾಯಕರು ಹಾಗೂ ರಾಜ್ಯಾದ್ಯಕ್ಷರೂ ಆದ ಬಿ.ವೈ ವಿಜಯೇಂದ್ರ ಯಡಿಯೂರಪ್ಪ ರವರು ಪ್ರತೀ ಜಿಲ್ಲೆಗಳಿಗೂ ತೆರಳಿ ಸದಸ್ಯತ್ವ ನೋಂದಣಿ ಮಾಡಿಸುತ್ತಿದ್ದು ಇದರಿಂದ ಮುಂದಿನ ದಿನಗಳಲ್ಲಿ ಪಕ್ಷ ಮತ್ತಷ್ಟು ಬಲಿಷ್ಠಗೊಳ್ಳಲಿದೆ ಎಂದರು.

ಇತ್ತೀಚೆಗೆ ಪ್ರಧಾನಿ ಮೋದಿಯವರು ಒಂದು ರಾಷ್ಟ್ರ ಒಂದು ಚುನಾವಣೆ ಎಂಬ ಕ್ರಾಂತಿಕಾರಿ ಬೆಳವಣಿಗೆಗೆ ಅಡಿಪಾಯ ಹಾಕಿದ್ದು ಇದರಿಂದ ದೇಶದ ಅಭಿವೃದ್ಧಿ ಗೆ ವೇಗ ಬಂದಿದೆ.ಒಂದು ರಾಷ್ಟ್ರ ಒಂದು ಚುನಾವಣೆ ಅನುಕೂಲಗಳೆಂದರೆ ಚುನಾವಣೆ ಕಡಿಮೆ ಖರ್ಚಿನಲ್ಲಿ ಮುಗಿಯಲಿದೆ.31 ರಾಜ್ಯಗಳಲ್ಲಿ ಸರಿಸುಮಾರು 4120 ಶಾಸಕರಿದ್ದಾರೆ. ಪ್ರತ್ಯೇಕವಾಗಿ ಚುನಾವಣೆ ನಡೆಸಲು ಪ್ರತಿ ಬಾರಿ ನೂರಾರು ಕೋಟಿ ವೆಚ್ಚವಾಗುತ್ತದೆ.ವ್ಯವಸ್ಥೆಗಳು,ವೇತನಗಳು ಮತ್ತು ಭದ್ರತೆಗಳಿಗಾಗಿ ಗಣನೀಯ ಪ್ರಮಾಣದ ಹಣವನ್ನು ಖರ್ಚು ಮಾಡಲಾಗುತ್ತದೆ.ವರ್ಷದಿಂದ ವರ್ಷಕ್ಕೆ ಚುನಾವಣೆಯ ಮೇಲೆ ಹೆಚ್ಚುತ್ತಿರುವ ವೆಚ್ಚವನ್ನು ಗ್ರಾಫ್ ತೋರಿಸುತ್ತದೆ.ಇದೆಲ್ಲವನ್ನು ಸರಿದೂಗಿಸಲು ಹಾಗೂ ದೇಶದ ಅಭಿವೃದ್ಧಿ ಗೆ ಆರ್ಥಿಕ ಹೊಡೆತ ಬೀಳದಿರುವಂತೆ ಈ ಒಂದು ನಿರ್ಧಾರ ಪರಿಣಾಮಕಾರಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ನಂತರ ಒಬಿಸಿ ಜಿಲ್ಲಾಧ್ಯಕ್ಷರಾದ ಬಾಲಚಂದ್ರು ರವರು ಮಾತನಾಡಿ ಈಗಾಗಲೇ ದೇಶದಾದ್ಯಂತ ಬಿರುಸಾಗಿ ಸದಸ್ಯತ್ವ ಅಭಿಯಾನ ನಡೆಯುತ್ತಿದ್ದು ನಮ್ಮ ಬಿಜೆಪಿ ತತ್ವ ಸಿದ್ದಾಂತವನ್ನು ಒಪ್ಪಿ ಹಲವಾರು ನಾಗರೀಕರು,ಯುವಕರು,ತಾಯಂದಿರು ಸದಸ್ಯತ್ವ ಪಡೆಯುತ್ತಿದ್ದು ಇದರಿಂದ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಹೆಚ್ಚಿನ ಶಕ್ತಿ ದೊರೆಯುತ್ತದೆ ಎಂದರು.

ಬಿಜೆಪಿ ಪಕ್ಷವು ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಒಬಿಸಿ ವರ್ಗಕ್ಕೆ ಹೆಚ್ಚಿನ ಸ್ಥಾನಮಾನಗಳನ್ನು ಕೊಡುತ್ತಲಿದ್ದು ಅದರಲ್ಲೂ ಪ್ರಧಾನಿ ಮೋದಿರವರು ನಮ್ಮ ವರ್ಗಕ್ಕೆ ಸೂಕ್ತ ಸ್ಥಾನಮಾನ ಕಲ್ಪಿಸುವ ಮೂಲಕ ಗೌರವ ನೀಡುತ್ತಾ ಆಡಳಿತ ನೆಡೆಸುತ್ತಿದ್ದಾರೆ ಎಂದು ಕಾರ್ಯಗಾರದ ಕುರಿತು ಮಾತನಾಡಿದರು.

ವರುಣಾ ಕ್ಷೇತ್ರದ ಸಂಚಾಲಕರಾದ ನಗರ್ಲೆ ಮಹದೇವಸ್ವಾಮಿರವರು,ಹಾಗೂ ಜಿಲ್ಲಾ ಪ್ರಧಾನಕಾರ್ಯದರ್ಶಿ ಬಾಲಕೃಷ್ಣ ರವರು ಮಾತನಾಡಿದರು.

ಈ ಸಂಧರ್ಭದಲ್ಲಿ ಇಮ್ಮಾವು ಮನು,ಇಮ್ಮಾವು ಹುಂಡಿ ಮಹೇಶ್,ನಾಗೇಶ್ ಶೆಟ್ಟರು,ಅಳಗಂಚಿ ಶಿವಯ್ಯ,ತಾ.ಪಂ ಸದಸ್ಯ ಅಳಗಂಚಿ ರಾಜೇಂದ್ರ ,ಗುರುಸ್ವಾಮಿ,ಮಹದೇವಸ್ವಾಮಿ,ಸಂದೀಪ್,ನಿರಂಜನ್,ಸಿದ್ದಶೆಟ್ಟರು,ಶಂಕರ,ಏಚಗಳ್ಳಿ ದಿನೇಶ್,ಶಿವಕುಮಾರ್,ಮುಂತಾದ ಬಿಜೆಪಿ ಮುಖಂಡರುಗಳು ಉಪಸ್ಥಿತರಿದ್ದರು.

——————ಮಧು ಮೈಸೂರು

Leave a Reply

Your email address will not be published. Required fields are marked *

× How can I help you?