ಚಿಕ್ಕಮಗಳೂರು-ಕಾಫಿ ಮತ್ತು ಮೆಣಸಿನ ಬೆಳೆಗಾರರಿಗೆ ಸಕಾಲದಲ್ಲಿ ಸಾಲಸೌಲಭ್ಯ ಒದಗಿಸುವ ಮುಖಾಂತರ ಅವರನ್ನು ಆರ್ಥಿಕ ಸದೃಢಗೊಳಿಸುವಲ್ಲಿ ಸಹಕಾರ ಸಂಘವು ಕಾರ್ಯಪ್ರವೃತ್ತವಾಗಿದೆ ಎಂದು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಕೆ.ಮಂಜುನಾಥ್ ಹೇಳಿದರು.
ತಾಲ್ಲೂಕಿನ ಹಿರೇಕೊಳಲೆ ಗ್ರಾಮದ ಡಾ ಅಂಬೇಡ್ಕರ್ ಭವನದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಂಗಳವಾರ ಅವರು ಮಾತನಾಡುತ್ತಿದ್ದರು.
ಸಂಘವು ಸ್ಥಾಪನೆಗೊಂಡು ಸುಮಾರು ಐದು ದಶಕಗಳನ್ನು ದಾಟಿದೆ.ರೈತರು ಹಾಗೂ ಬೆಳೆಗಾರರ ಏಳಿಗೆಗಾಗಿ ಪೂರ್ವಿಕರು ಸಂಘವನ್ನು ಸ್ಥಾಪಿಸಿ ಅಡಿಪಾಯ ಹಾಕಿಕೊಟ್ಟರು.ಪ್ರಸಕ್ತ ಸಾಲಿನಲ್ಲಿ ಬೆಳೆಗಾರರಿಗೆ 3.62 ಕೋಟಿ ರೂ.ಗಳು ಸಾಲವಿತರಿಸಿ ಶೇ.100 ವಸೂಲಾತಿ ಪೂರ್ಣಗೊಳಿಸಿದೆ.ಸಂಘದಲ್ಲಿ ಸುಮಾರು 711 ಮಂದಿ ಸದಸ್ಯರುಗಳ ಸಂಖ್ಯಾ ಬಲವಿದ್ದು ಒಟ್ಟು ಠೇವಣಿ 1.82 ಲಕ್ಷ, ಡಿಸಿಸಿ ಬ್ಯಾಂಕ್ನಲ್ಲಿ 16 ಲಕ್ಷ ಹಾಗೂ ಅಪದ್ಧತಿ ನಿಧಿಯಡಿ 6.71 ಲಕ್ಷ ರೂ.ಗಳನ್ನು ಸಂಘವು ಹೊಂದಿದೆ ಎಂದು ಹೇಳಿದರು.
ಸದಸ್ಯರುಗಳ ಆರೋಗ್ಯ ದೃಷ್ಟಿಯಿಂದ50 ಕುಟುಂಬದ 270ಕ್ಕೂ ಹೆಚ್ಚು ಮಂದಿಗೆ ಯಶಸ್ವಿನಿ ಯೋಜನೆಯಡಿ ಕಾರ್ಡ್ ವ್ಯವಸ್ಥೆ ಕಲ್ಪಿಸಿದ್ದು ಈ ಪೈಕಿ ಐದು ಮಂದಿ ಯೋಜನೆಯ ಸದ್ಬಳಕೆ ಮಾಡಿಕೊಂಡಿದ್ದಾರೆ.ಒಟ್ಟಾರೆ ಈ ಸಾಲಿನಲ್ಲಿ ಸಂಘವು 1.78 ಲಕ್ಷ ರೂ.ಗಳ ನಿವ್ವಳ ಲಾಭದಿಂದ ಪ್ರಗತಿ ಹೊಂದುತ್ತಿದೆ ಎಂದರು.
ಸoಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಕುಶಾಲ ವಾರ್ಷಿಕ ವರದಿಯನ್ನು ಮಂಡಿಸಿದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಪವನ್ಕುಮಾರ್, ಸಂಘದ ಉಪಾಧ್ಯಕ್ಷ ಎನ್.ಎನ್.ಚಂದ್ರ ಶೇಖರ್, ನಿರ್ದೇಶಕರುಗಳಾದ ಎನ್.ಎಸ್.ರಮೇಶ್, ಕೆ.ಬಿ.ಈಶ್ವರೇಗೌಡ, ಕೆ.ಎಸ್.ವೀರೇಗೌಡ, ಹೆಚ್.ಈ. ಪರಮೇಶ್, ವನಿತಾ ರಾಜೇಗೌಡ, ಪಿ.ಟಿ.ತೀರ್ಥ, ಕೆ.ಸಿ.ಧರ್ಮೇಶ್, ಮಾರಾಟ ಗುಮಾಸ್ತ ಕೆ.ಎಸ್.ರುತ್ವಿಕ್ ಹಾಗೂ ಸದಸ್ಯರುಗಳು ಹಾಜರಿದ್ದರು.
———--ಸುರೇಶ್