ಬೇಲೂರು-ರಾಷ್ಟ್ರೀಕೃತ ಬ್ಯಾಂಕುಗಳ ಪೈಪೋಟಿಯ ನಡುವೆ ನಮ್ಮ ಬ್ಯಾಂಕ್ ಈ ಬಾರಿಯೂ ಸಹ ಸದಸ್ಯರುಗಳ ಸಹಕಾರದಿಂದ ಲಾಭದೆಡೆಗೆ ಸಾಗುತ್ತಿದೆ ಎಂದು ಅರ್ಬನ್ ಬ್ಯಾಂಕ್ ನ ಅಧ್ಯಕ್ಷ ಬಿ.ಎನ್ ಚಂದ್ರಶೇಖರ್ ತಿಳಿಸಿದರು.
ಬೇಲೂರಿನ ಒಕ್ಕಲಿಗ ಕಲ್ಯಾಣ ಮಂಟಪದಲ್ಲಿ ನಡೆದ ಬೇಲೂರು ಅರ್ಬನ್ ಕೋ ಆಪರೇಟಿವ್ ಬ್ಯಾಂಕಿನ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು,ನಮ್ಮ ಬ್ಯಾಂಕು 1997 ರಲ್ಲಿ ಪ್ರಾರಂಭವಾಗಿ 27 ವರ್ಷಗಳು ಕಳೆದಿದ್ದು ಒಂದು ವರ್ಷ ಮಾತ್ರ ನಷ್ಟ ಕಂಡರು ಉಳಿದ ವರ್ಷಗಳಲ್ಲಿ ಲಾಭವನ್ನು ಕಂಡಿದೆ.
ಈ ಮಹತ್ತರವಾದ ಸಾಧನೆ ಬ್ಯಾಂಕಿನ ಸದಸ್ಯರುಗಳ ಸಲಹೆ ಸಹಕಾರದಿಂದ ಸಾಧ್ಯವಾಗಿದೆ.ಜೊತೆಗೆ ಬ್ಯಾಂಕ್ನ ನ ವತಿಯಿಂದ ಬಹಳಷ್ಟು ಜನ ಗ್ರಾಹಕರು ಸಾಲವನ್ನು ಪಡೆಯುತ್ತ ಬಂದಿದ್ದು ಬಹಳಷ್ಟು ಜನ ಪ್ರಾಮಾಣಿಕವಾಗಿ ಸಾಲವನ್ನು ಮರು ಜಮಾ ಮಾಡಿದ್ದಾರೆ.ಎಲ್ಲ ಬ್ಯಾಂಕುಗಳಲ್ಲಿ ಆಗುವಂತೆಯೇ ಒಂದಷ್ಟು ಜನ ಸಾಲಗಾರರು ಮರುಪಾವತಿಸಲು ಹಿಂದೇಟು ಹಾಕುತ್ತಿದ್ದಾರೆ.ಅವರು ಸಲ ಮರುಪಾವತಿಸಿದ್ದೆ ಆದರೆ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಇನ್ನಷ್ಟು ಅಭಿವೃದ್ಧಿ ಹೊಂದಲಿದೆ ಎಂದರು.
ವಾರ್ಷಿಕವಾಗಿ ಸುಮಾರು 70 ಕೋಟಿಗಳಷ್ಟು ವ್ಯವಹಾರ ನಡೆಸಿದ್ದು 2023/24ನೇ ಸಾಲಿನಲ್ಲಿ ಒಳ್ಳೆಯ ಲಾಭಗಳಿಸಿದೆ. ಬ್ಯಾಂಕಿಗೆ ಸ್ವಂತ ಕಟ್ಟಡವನ್ನು ನಿರ್ಮಿಸಲು ನಿವೇಶನವನ್ನು ಖರೀದಿ ಮಾಡಿ ಅಲ್ಲಿ ಕಟ್ಟಡವನ್ನು ನಿರ್ಮಿಸಿ ಸ್ವಂತ ಕಟ್ಟಡದಲ್ಲಿ ಬ್ಯಾಂಕು ನಡೆಸಲು ನಿರ್ಧರಿಸಿದ್ದೇವೆ.
ಬ್ಯಾಂಕಿನ ವಹಿವಾಟುದಾರರಿಗೆ ಅವಶ್ಯಕತೆನುಸಾರ ಎ.ಟಿ.ಎಂ ಕಾರ್ಡನ್ನು ಸದ್ಯದಲ್ಲೇ ನೀಡಲಿದ್ದೇವೆ.ಎ.ಟಿ.ಎಂ ಕಾರ್ಡ್ ಹೊಂದಿದ ಗ್ರಾಹಕರು ಬೇರೆ ಸ್ಥಳಗಳಲ್ಲಿ ತಮ್ಮ ಹಣವನ್ನು ಪಡೆದುಕೊಳ್ಳಬಹುದು, ನಮ್ಮ ಬ್ಯಾಂಕ್ ಭಾರತೀಯ ರಿಸರ್ವ್ ಬ್ಯಾಂಕ್ ಹಾಗು ರಾಜ್ಯ ಸರ್ಕಾರದ ಆದೇಶ ಮತ್ತು ಶರತ್ತುಗಳಿಗೆ ಒಳಪಟ್ಟು ಕಾರ್ಯನಿರ್ವಹಿಸಬೇಕಾಗಿರುವುದರಿಂದ ಗ್ರಾಹಕರು ಹಾಗೂ ಸದಸ್ಯರುಗಳು ಅವರುಗಳ ಮಾರ್ಪಾಡಿಗೆ ಸಹಕರಿಸಿ ಬ್ಯಾಂಕಿನಲ್ಲಿ ವ್ಯವಹಾರ ನಡೆಸಿ ಬ್ಯಾಂಕನ್ನು ಲಾಭ ಗಳಿಸಲು ಸಹಕರಿಸಬೇಕು ಎಂದು ಬಿ ಎನ್ ಚಂದ್ರಶೇಖರ್ ಮನವಿ ಮಾಡಿಕೊಂಡರು.
ನಂತರದಲ್ಲಿ ಮಾತನಾಡಿದ ಮಾಜಿ ಅಧ್ಯಕ್ಷ ಬಲ್ಲೂರು ಸ್ವಾಮಿಗೌಡ ಮಾನ್ಯ ಸದಸ್ಯರುಗಳು, ಷೇರುದಾರರಿಗೆ ನಮ್ಮ ಬ್ಯಾಂಕಿನ ಒಂದು ವರ್ಷದ ವಾರ್ಷಿಕ ವರದಿಯನ್ನು ತಿಳಿಸಲು ವಾರ್ಷಿಕ ಮಹಾಸಭೆಯನ್ನು ಆ ಯೋಜನೆಗೊಳಿಸಿ ವರದಿಯನ್ನು ತಿಳಿಸಿರುತ್ತೇವೆ.ವಾರ್ಷಿಕ ಸಭೆಗೆ ಮಾತ್ರ ಬರದೆ ಬೇರೆ ದಿನಗಳಲ್ಲಿ ಬ್ಯಾಂಕಿಗೆ ಭೇಟಿ ಕೊಟ್ಟು ತಮ್ಮ ಸಲಹೆ ಮತ್ತು ಕುಂದು ಕೊರತೆಗಳ ತಿಳಿಸಿದರೆ ನಾವು ಅವುಗಳನ್ನು ಅಳವಡಿಸಿಕೊಂಡು ಹೋಗುತ್ತೇವೆ.ಸದಸ್ಯರುಗಳು ನಮ್ಮ ಬ್ಯಾಂಕಿನಲ್ಲಿ ವಹಿವಾಟನ್ನು ಮಾಡಿದರೆ ಮಾತ್ರ ಇನ್ನು ಹೆಚ್ಚಿನ ಲಾಭವನ್ನು ಗಳಿಸಬಹುದು.ಅರ್ಬನ್ ಕೋ ಆಪರೇಟಿವ್ ಬ್ಯಾಂಕು ಬೇಲೂರು ತಾಲೂಕಿನ ಕೆಲವು ಮಹನಿಯರುಗಳು ಕಟ್ಟಿ ಬೆಳೆಸಿದಂತಹ ಬ್ಯಾಂಕ್ ಆಗಿದ್ದು ಈ ಬ್ಯಾಂಕ್ ಅನ್ನು ಉಳಿಸಿ ಬೆಳೆಸೋಣ ಎಂದರು.
ಸಭೆಯಲ್ಲಿ ಮಾಜಿ ಅಧ್ಯಕ್ಷರುಗಳಾದ ಹೇಮಾವತಿ,ಸುಬ್ರಹ್ಮಣ್ಯ, ಲಕ್ಷ್ಮಣ್ ಗೌಡ, ಪ್ರಸನ್ನ, ಬಲರಾಮೇಗೌಡ, ನಿರ್ದೇಶಕರುಗಳಾದ ಲೀಲಾವೆಂಕಟೇಶ್, ವಿಜಯಕುಮಾರ್, ನಾಗೇಶ್, ಶಿವರಾಜ್, ಸೋಮಶೇಖರ್, ಬ್ಯಾಂಕಿನ ಷೇರುದಾರರು, ಸದಸ್ಯರುಗಳು, ಬ್ಯಾಂಕಿನ ಸಿಬ್ಬಂದಿ ವರ್ಗ ಹಾಜರಿದ್ದರು.
ಸಭೆಯ ಸ್ವಾಗತವನ್ನು ನಿರ್ದೇಶಕ ಬಿ,ವಿ ಶಿವರಾಜ್ ನಿರ್ವಹಿಸಿ ಬ್ಯಾಂಕಿನ ವಾರ್ಷಿಕ ವರದಿಯನ್ನು ವ್ಯವಸ್ಥಾಪಕ ಶಿವಶಂಕರ್,ಲೆಕ್ಕ ಪತ್ರವನ್ನು ಬ್ಯಾಂಕಿನ ಸಿಬ್ಬಂದಿ ರಮೇಶ್ ಮಂಡಿಸಿದರು.
ವಿದ್ಯಾರ್ಥಿಗಳಾದ ಸಹನ, ಅರ್ಪಿತ ಪ್ರಾರ್ಥನೆಯನ್ನು ಸಲ್ಲಿಸಿದರು.
————-ರವಿಕುಮಾರ್