ಕೆ.ಆರ್.ಪೇಟೆ:ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ 51ನೇ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವದ ಸವಿನೆನಪಿಗಾಗಿ ಹಿರಿಯ ಜೋಡಿಗಳಿಗೆ ಸನ್ಮಾನ

ಕೆ.ಆರ್.ಪೇಟೆ:ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ 51ನೇ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವದ ಸವಿನೆನಪಿಗಾಗಿ 80 ವರ್ಷ ಹಾಗೂ ಐವತ್ತು ವರ್ಷ ತುಂಬಿದ ಐವತ್ತೊಂದು ಹಿರಿಯ ಆದರ್ಶ ಜೋಡಿಗಳಿಗೆ ಹೇಮಗಿರಿ ಬಿಜಿಎಸ್ ಶಾಖಾಮಠದ ಪ್ರಧಾನ ಕಾರ್ಯದರ್ಶಿಗಳಾದ ಡಾ:ಜೆ.ಎನ್ ರಾಮಕೃಷ್ಣೇಗೌಡ ನೇತೃತ್ವದಲ್ಲಿ ವಿಶೇಷ ಪೂಜೆ ಹಾಗೂ ಅಭಿನಂದನಾ ಸಮಾರಂಭ ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿತು.

ತಾಲೂಕಿನ ಕಸಬಾ ಹೋಬಳಿಯ ಹೇಮಗಿರಿ ಬಿಜಿಎಸ್ ಎಜುಕೇಶನ್ ಸೆಂಟರ್ ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರಾದ ಹೆಚ್.ಟಿ ಮಂಜು,ಜಗದ್ಗುರು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ 51ನೇ ವರ್ಷದ ಪಟ್ಟಾಭಿಷೇಕದ ನೆನಪಿಗಾಗಿ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಹೇಮಗಿರಿ ಶಾಖಾ ಮಠದ ಪ್ರಧಾನ ಕಾರ್ಯದರ್ಶಿ ಡಾ:ಜೆ.ಎನ್ ರಾಮಕೃಷ್ಣೇಗೌಡರು ಸದಾ ಸಾಂಸ್ಕೃತಿಕ ಸಂಸ್ಕಾರ ಎತ್ತಿ ಹಿಡಿಯಲು ಹಾಗೂ ಬಿ.ಜಿ.ಎಸ್ ಸಂಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ 50 ವರ್ಷ ದಾಂಪತ್ಯ ಜೀವನ ಪೂರೈಸಿದ ದಂಪತಿಗಳಿಗೆ ಸನ್ಮಾನಿಸುವ ಮೂಲಕ ಯುವಕರಿಗೆ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ವಿಶೇಷ ಸಂದೇಶ ನೀಡುತ್ತಿರುವುದು ಶ್ಲಾಘನೀಯ.ಶ್ರೀಗಳು ನಾಡು ಕಂಡ ಅಪ್ರತಿಮ ಕಾಯಕ ಯೋಗಿ,ಸಂತ ಶ್ರೇಷ್ಠರ 51ನೇ ವರ್ಷದ ಪಟ್ಟಾಭಿಷೇಕದ ಸುಸಂದರ್ಭದಲ್ಲಿ ಸ್ಮರಿಸುವುದು ನಮ್ಮೆಲ್ಲರ ಪುಣ್ಯ.

ಕುವೆಂಪು ರವರಂತೆ ವಿಶ್ವಮಾನವ ಪರಿಕಲ್ಪನೆಯನ್ನು,ಬಸವಣ್ಣನವರಂತೆ ಸರ್ವರಿಗೂ ಸಮಬಾಳು ಸರ್ವರಿಗೆ ಸೇವೆ ಸಲ್ಲಿಸಿದ ಕೀರ್ತಿ ಶ್ರೀಗಳದು.ಸಂಪ್ರದಾಯದ ಮೂಲಕ ಸನಾತನ ಸಂಸ್ಕೃತಿ ಪುನಜೀವನಗೊಳಿಸಿದ ಶ್ರೀ ಬಾಲ ಗಂಗಾಧರನಾಥ ಸ್ವಾಮೀಜಿ ಅವರು, ಸಮಾಜದ ಸುಧಾರಕರಾಗಿ, ಜಾತಿ ಧರ್ಮ ಬೇಧ ಮರೆತು ಲಕ್ಷಾಂತರ ವಿದ್ಯಾರ್ಥಿಗಳಿಗೆ ಅಕ್ಷರಸಂತ,ಅನ್ನದಾಸೋಹ ನೀಡಿದ್ದರು.ಸಮಾಜದಲ್ಲಿ ಮನುಷ್ಯನ ಬದುಕುವ ರೀತಿ ಮತ್ತು ಸಮಾಜದ ಸುಧಾರಣೆಗೆ ಹಲವಾರು ಮೌಲ್ಯಯುತ ಸಲಹೆ ಮತ್ತು ಸಹಕಾರ ಶ್ರೀ ಮಠದ ಮೂಲಕ ಮಾಡಿದ್ದಾರೆ.ಮಠವನ್ನು ಶ್ರೀಗಳ ರೀತಿಯಲ್ಲೇ ಡಾ:ಜೆ.ಎನ್ ರಾಮಕೃಷ್ಣೇಗೌಡರು ಕೂಡ ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ ಎಂದು ಬಣ್ಣಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹೇಮಗಿರಿ ಬಿಜಿಎಸ್ ಶಾಖಾಮಠದ ಪ್ರಧಾನ ಕಾರ್ಯದರ್ಶಿಗಳಾದ ಡಾ: ಜೆ.ಎನ್ ರಾಮಕೃಷ್ಣೇಗೌಡ ಜಗದ್ಗುರು ಡಾ: ಶ್ರೀ ಬಾಲಗಂಗಾಧರನಾಥ ಶ್ರೀಗಳ 51ನೇ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ಶ್ರೀಗಳ ಆದರ್ಶಗಳನ್ನು ಮೈಗೂಡಿಸಿಕೊಂಡು ಆಶೀರ್ವಾದದೊಂದಿಗೆ ಪ್ರತಿ ವರ್ಷದಂತೆ ಈ ವರ್ಷವೂ ವಿನೂತನವಾಗಿ 51 ಹಿರಿಯ ಆದರ್ಶ ದಂಪತಿಗಳಿಗೆ ಅಭಿನಂದನೆ ಸಮಾರಂಭ ಆಯೋಜಿಸಿದ್ದೇವೆ.ಬೆಳಗ್ಗೆ ಮದುವೆ ಸಂಜೆ ಕೊಲೆ ಮಾಡುವಂತಹ ಘಟನೆಗಳು ಇಂದು ನಡೆಯುತ್ತಿವೆ. ಇದರ ನಡುವೆಯೂ ಸುವರ್ಣ ದಾಂಪತ್ಯ ಪೂರ್ಣಗೊಳಿಸಿರುವುದು ಯುವ ಸಮುದಾಯಕ್ಕೆ ಮಾದರಿಯಾಗಿರುವ ದಂಪತಿಗಳ ಗೌರವಿಸುವ ನಮ್ಮ ಕರ್ತವ್ಯ.ಜಾತಿ ಧರ್ಮಕ್ಕೆ ಸೀಮಿತರಾಗದೆ ಸಮಾಜಮುಖಿ ಸೇವೆಯ ಮೂಲಕ ಎಲ್ಲಾ ಜಾತಿ ವರ್ಗದ ಜನರ ಆರಾಧ್ಯ ದೇವರ ಈ ಅರ್ಥಪೂರ್ಣ ಕಾರ್ಯಕ್ರಮದ ಮಾಡುವ ಮೂಲಕ ಅವರ ಆದರ್ಶ ಮತ್ತು ತತ್ತ್ವಗಳನ್ನು ನಮ್ಮ ಜೀವನದಲ್ಲೂ ಅಳವಡಿಸಿಕೊಳ್ಳೋಣ ಎಂದು ತಿಳಿಸಿದರು.

ಕೆ.ಆರ್.ನಗರ ಕಾಗಿನಲೆ ಮಹಾಸಾನಸ್ಥಾನ ಶಾಖ ಮಠದ ಪೀಠಧ್ಯಕ್ಷರಾದ ಶ್ರೀ ಶಿವಾನಂದಪುರಿ,ಕಾಪನಹಳ್ಳಿ ಗವಿಮಠ ಪೀಠಾಧ್ಯಕ್ಷ ಶ್ರೀ ಸ್ವತಂತ್ರ ಚನ್ನವಿರ ಸ್ವಾಮೀಜಿ, ತೆಂಡೆಕೆರೆ ಬಾಳೆಹೊನ್ನೂರು ಶಾಖಾ ಮಠದ ಅಧ್ಯಕ್ಷರಾದ ಶ್ರೀ ಗಂಗಾಧರ್ ಶಿವಚಾರ್ಯ ಸ್ವಾಮಿಜೀ, ಬೇಬಿ ಶ್ರೀರಾಮ ಯೋಗಿಶ್ವರ ಮಠದ ಅಧ್ಯಕ್ಷರಾದ ಶ್ರೀ ಶಿವಬಸವ ಸ್ವಾಮೀಜಿ, ಎಲೆರಾಮಪುರ ಕುಂಚಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಹನುಮಂತನಾಥ ಸ್ವಾಮೀಜಿ, ಶ್ರವಣಬೆಳಗೊಳ ಶ್ರೀ ಚೌಡೇಶ್ವರಿದೇವಿ ಮಹಾಸಂಸ್ಥಾನ ಮಠದ ಅಧ್ಯಕ್ಷರಾದ ಶ್ರೀ ಬಸವೇಶ್ವರ ಚೈತನ್ಯ ಸ್ವಾಮೀಜಿ, ಅಮೃತೂರು ವೇದವ್ಯಾಸ ಮಠದ ಅಧ್ಯಕ್ಷರಾದ ಶ್ರೀ ಬಸವನಂದ ಸ್ವಾಮೀಜಿ,ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಶ್ರೀ ಗಳ ಪುತ್ತಳಿಗೆ ವಿವಿಧ ಬಗೆಯ ಅಭಿಷೇಕ ಹೋಮ ಹವನ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು.

ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ಹಿರಿಯ ಆದರ್ಶ ದಂಪತಿಗಳು ಹಿರಿಯರು ನಿಶ್ಚಯಿಸಿದ ಮದುವೆ ಸುದೀರ್ಘವಾಗಿರುತ್ತದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.ಈ ರೀತಿಯ ಸನ್ಮಾನದಿಂದ ಕೊನೆ ಹಂತದ ಜೀವನದಲ್ಲಿ ಅತ್ಯಂತ ಸಂತೋಷ ತಂದಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಸಮಾಜ ಸೇವಕ ಆರ್ ಟಿ ಓ ಮಲ್ಲಿಕಾರ್ಜುನ್,ಮನ್ಮುಲ್ ನಿರ್ದೇಶಕ ಡಾಲು ರವಿ,ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಂಡಿಹೊಳೆ ಅಶೋಕ್,ಕಸಪಾ ಮಾಜಿ ಅಧ್ಯಕ್ಷ ಹರಿಚರಣ್ ತಿಲಕ್,ಪುರಸಭಾ ಮಾಜಿ ಸದಸ್ಯರ ಕೆ.ಆರ್ ನೀಲಕಂಠ,ಹಿರಿಯ ಮುಖಂಡ ಬಂಡಿಹೊಳೆ ರಾಮೇಗೌಡ,ನಟನಹಳ್ಳಿ ನಿಂಗೇಗೌಡ,ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್, ಆರ್.ಟಿ.ಓ ಮಲ್ಲಿಕಾರ್ಜುನ್ ಅಭಿಮಾನಿ ಬಳಗದ ಅಧ್ಯಕ್ಷ ಗಂಜಿಗೆರೆ ಮಹೇಶ್ ಹೇಮಗಿರಿ, ಶೀಳನೆರೆ ಅಜಯ್,ಬಿಜಿಎಸ್ ಎಜುಕೇಷನ್ ಸೆಂಟರ್ ಶಾಲಾ ಶಿಕ್ಷಕರು,ಹಿರಿಯ ಆದರ್ಶ ದಂಪತಿಗಳು ಸೇರಿದಂತೆ ಉಪಸ್ಥಿತರಿದ್ದರು.

——————————- ಮನು ಮಾಕವಳ್ಳಿ ಕೆ ಆರ್ ಪೇಟೆ

Leave a Reply

Your email address will not be published. Required fields are marked *

× How can I help you?