ಚಾಮರಾಜನಗರ: ಜಗತ್ತಿನ ಸೃಷ್ಟಿಕರ್ತರು ವಿಶ್ವಕರ್ಮರು.ದೈವಿಕ ವಾಸ್ತು ಶಿಲ್ಪ ದೇವರು.ವಿಶ್ವಕರ್ಮರು ಮಾನವನ ಅಭಿವೃದ್ಧಿಗೆ,ಕೌಶಲ್ಯ,ಕಲೆ,ವಾಸ್ತು ಶಿಲ್ಪವನ್ನು ನೀಡಿ ಜಗತ್ತನ್ನು ಸುಂದರಗೊಳಿಸಿದ ಮಹಾನ್ ವ್ಯಕ್ತಿ ಎಂದು ಸಂಸ್ಕೃತಿ ಚಿಂತಕ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ನಗರದ ಪ್ರಕಾಶ ಭವನದಲ್ಲಿ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಹಮ್ಮಿಕೊಂಡಿದ್ದ ವಿಶ್ವಕರ್ಮ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಶಿಲ್ಪಿ ನಟರಾಜು ರಾಮಸಮುದ್ರ ರನ್ನು ಗೌರವಿಸಿ ಮಾತನಾಡುತ್ತಾ, ಜಗತ್ತಿನ ಶ್ರೇಷ್ಠ ನಗರಗಳ ನಿರ್ಮಾಣ ಮಾಡಿ, ಮಾನವನ ಸಂತೋಷ ಮತ್ತು ಕಲ್ಯಾಣಕ್ಕೆ ಕಾರಣವಾದ ವಿಶ್ವಕರ್ಮರ ಕೊಡುಗೆ ಅಪಾರ.
ಪ್ರಾಚೀನ ನಗರಗಳಾದ ಹಸ್ತಿನಾಪುರ ,ದ್ವಾರಕ ,ಇಂದ್ರಪ್ರಸ್ಥ ಲಂಕಾ ನಗರಗಳನ್ನು ಸ್ವರ್ಗವನ್ನಾಗಿ ರೂಪಿಸಿ ಕಲೆ ,ವಾಸ್ತುಶಿಲ್ಪ, ಕೌಶಲ್ಯ ತಂತ್ರಜ್ಞಾನ, ಕ್ಷೇತ್ರಗಳಲ್ಲಿ ವಿಶಿಷ್ಟತೆಯನ್ನು ನೀಡಿದವರು.ಅವರನ್ನು ಸ್ಮರಿಸಿರುವ ಮೂಲಕ ಪ್ರಪಂಚಕ್ಕೆ ತಮ್ಮದೇ ಆದ ಕಲಾ ಕೌಶಲ್ಯವನ್ನು ನೀಡಿ ಸುಂದರ ಜಗತ್ತನ್ನು ನಿರ್ಮಿಸುತ್ತಿರುವ ಎಲ್ಲ ಶಿಲ್ಪಿಗಳನ್ನು ನಾವು ನೆನೆಯಬೇಕು. ಶಿಲ್ಪಿಗಳ ಮೂಲಕ ಮಾನವನ ಮನಸ್ಸನ್ನು ಅರಳಿಸುವ ಕಾರ್ಯ ಮಾಡುವ ಮೂಲಕ ಜಗತ್ತಿಗೆ ವಾಸ್ತು, ತಂತ್ರಜ್ಞಾನ, ಕಟ್ಟಡಗಳ ನಿರ್ಮಾಣ ಮತ್ತು ವಿನ್ಯಾಸಗಳ ರಚನೆಯಲ್ಲಿ ಭಾರತೀಯರಿಗೆ ವಿಶ್ವಕರ್ಮರು ವಿಶೇಷ ಶಕ್ತಿಯನ್ನು ನೀಡಿ ಜಗತ್ತಿನಲ್ಲಿ ಶ್ರೇಷ್ಠತೆಗೆ ಕೊಂಡೊಯ್ದಿದ್ದಾರೆ ಎಂದರು.
ದಿವ್ಯ ಸಾನಿಧ್ಯವನ್ನು ವಹಿಸಿದ್ದ ಪ್ರಜಾಪಿತ ಬ್ರಹ್ಮಾ ಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕರು, ಮನೋಬಲ ತರಬೇತುದಾರರಾದ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀರವರು ಮಾತನಾಡಿ ಬ್ರಹ್ಮನ ಮಗನಾಗಿ ಜಗತ್ತಿಗೆ ಕಾಯಕ ಶ್ರೇಷ್ಠತೆಯನ್ನು ,ಕೌಶಲ್ಯದ ರಹಸ್ಯವನ್ನು ,ಆಯುಧಗಳಲ್ಲಿ ಆಧ್ಯಾತ್ಮಿಕ ರಹಸ್ಯವನ್ನು ನೀಡಿದವರು ವಿಶ್ವಕರ್ಮರು.ಆಧ್ಯಾತ್ಮ ಮತ್ತು ಬೌದ್ಧಿಕತೆಯ ಸಮತೋಲನದ ಮೂಲಕ ಜೀವನವನ್ನು ಸುಂದರಗೊಳಿಸಿಕೊಳ್ಳಬೇಕು ಎಂದು ಜಗತ್ತಿಗೆ ಸಾರಿದವರು.ವಿಶ್ವಕರ್ಮರು ಜೀವನವನ್ನು ಸುಂದರವಾಗಿ ರೂಪಿಸಿಕೊಳ್ಳುವ ಕೌಶಲ್ಯ ಪ್ರತಿ ಮಾನವನಲ್ಲು ಬೆಳೆಯಬೇಕು. ಸುಖ ,ಸಂತೋಷ ನೆಮ್ಮದಿ, ಶಾಂತ ವಾತಾವರಣವನ್ನು ನಿರ್ಮಿಸುವ ಮೂಲಕ ವಿಶ್ವಕರ್ಮರಿಗೆ ನಾವು ಸದಾ ಸ್ಮರಣೀಯ ಕಾಣಿಕೆಯನ್ನು ನೀಡಬೇಕಾಗಿದೆ ಎಂದರು.
ಇದೇ ಸಂದರ್ಭದಲ್ಲಿ ರಾಮಸಮುದ್ರದ ನಟರಾಜ್ ರವರನ್ನು ಕಲೆ ಮತ್ತು ವಾಸ್ತುಶಿಲ್ಪದ ಮತ್ತು ವಿಗ್ರಹದ ರಚನೆಯ ಮೂಲಕ ತಲೆತಲೆಮಾರಿನಿಂದ ಕಾಯಕ ನಿರ್ವಹಿಸುತ್ತಿರುವ ನಟರಾಜರವರನ್ನು ಗೌರವಿಸಿ ಸನ್ಮಾನಿಸಲಾಯಿತು .
ಕಾರ್ಯಕ್ರಮದಲ್ಲಿ ಓಂ ಶಾಂತಿ ನ್ಯೂಸ್ ಸರ್ವಿಸ್ ನ ಬಿಕೆ ಆರಾಧ್ಯ, ನಾಗರಾಜು , ಪ್ರಮೀಳಾ,ಶಶಿ , ಆಶಾ, ಶ್ರೀನಿವಾಸ, ಪುಟ್ಟಶೇಖರ ಮೂರ್ತಿ, ತ್ರಿವೇಣಿ,ಗೀತ, ಮುಂತಾದವರು ಇದ್ದರು.