ಚಿಕ್ಕಮಗಳೂರು-ಜಿಲ್ಲಾಸ್ಪತ್ರೆಯ ಮನಶಾಸ್ತ್ರಜ್ಞ ಡಾ ಹೆಚ್.ಪಿ.ಸತೀಶ್ ಅವರಿಗೆ ಪಿ.ಹೆಚ್‌.ಡಿ ಪದವಿ ನೀಡಿದ ಕರ್ನಾಟಕ ವಿಶ್ವವಿದ್ಯಾನಿಲಯ

ಚಿಕ್ಕಮಗಳೂರು;ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡದಲ್ಲಿ ನಡೆದ 74ನೇ ಘಟಿಕೋತ್ಸವದಲ್ಲಿ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯ ಮನಶಾಸ್ತ್ರಜ್ಞ ಡಾ ಹೆಚ್.ಪಿ.ಸತೀಶ್ ಅವರಿಗೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ರವರು ಪಿ.ಹೆಚ್.ಡಿ ಪದವಿ ಪ್ರಧಾನ ಮಾಡಿದರು.

ಧಾರವಾಡ ವಿಶ್ವವಿದ್ಯಾನಿಲಯದ ಮನೋವಿಜ್ಞಾನ ವಿಭಾಗದ ಪ್ರಾಧ್ಯಾಪಕರಾದ ಡಾ.ಎಸ್.ಜಿ. ಜಾದವ್ ಇವರ ಮಾರ್ಗದರ್ಶನದಲ್ಲಿ “ಸೈಕಲಾಜಿಕಲ್ ಮಾರ್ಬಿಡಿಟಿ, ಪೇರೆಂಟಲ್ ಸ್ಟ್ರೆಸ್, ಸೆಲ್ಫ್ ಎಫಿಕಸಿ, ಫ್ಯಾಮಿಲಿ ಪೆಥಾಲಜಿ ಅಂಡ್ ಎಮೋಷನಲ್ ಕಾಂಪಿಟೆನ್ಸ್ ಅಮಾಂಗ್ ಪೇರೆಂಟ್ಸ್ ಆಫ್ ಅಟೆನ್ಷನ್ ಡಿಫಿಸಿಟ್ ಅಂಡ್ ಹೈಪರ್ ಆಕ್ಟಿವಿಟಿ ಡಿಸಾರ್ಡರ್ ಅಂಡ್ ನಾರ್ಮಲ್ ಚಿಲ್ಡ್ರನ್” ಎಂಬ ವಿಷಯದ ಮೇಲೆ ಕೈಗೊಂಡ ಮಹಾ ಪ್ರಬಂಧಕ್ಕೆ ಪಿ.ಹೆಚ್.ಡಿ ಪದವಿ ನೀಡಲಾಗಿದೆ.

ಪಿ.ಹೆಚ್.ಡಿ ಪದವಿ ಪಡೆದ ಡಾ.ಹೆಚ್.ಪಿ.ಸತೀಶ್ ಇವರನ್ನು ಜಿಲ್ಲಾ ಸರ್ಜನ್ ಸೇರಿದಂತೆ ಜಿಲ್ಲಾ ಸ್ಪತ್ರೆಯ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

—–ಸುರೇಶ್

Leave a Reply

Your email address will not be published. Required fields are marked *

× How can I help you?