ಬೇಲೂರು;-ಗುರು ಎಂಬ ಸ್ಥಾನಕ್ಕೆ ಜಗತ್ತಿನ ಎಲ್ಲಾ ಧರ್ಮಗಳಲ್ಲೂ ಶ್ರೇಷ್ಠ ಸ್ಥಾನ ಮಾನ ನೀಡಲಾಗಿದೆ.ಪ್ರತಿಯೊಬ್ಬ ರಿಗೂ ಜೀವನದಲ್ಲಿ ಗುರಿ ಇರುತ್ತದೆ.ಆ ಗುರಿಯನ್ನು ಈಡೇರಿಸಿಕೊಳ್ಳಲು ಉತ್ತಮ ಗುರುವಿನ ಮಾರ್ಗದರ್ಶನದ ಅವಶ್ಯಕತೆ ಇರುತ್ತದೆ ಎಂದು ಬೇಲೂರು ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಡಾ ಚಂದ್ರಮೌಳಿ ಹೇಳಿದರು.
ಪಟ್ಟಣದಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗುರುವಂದನಾ ಕಾರ್ಯಕ್ರಮದ ಅಂಗವಾಗಿ ಶಿಕ್ಷಕ ಹಿರಿಯಣ್ಣಗೌಡರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಹಿರಿಯಣ್ಣಗೌಡರು ಒಬ್ಬ ಉತ್ತಮ ಶಿಕ್ಷಕರಷ್ಟೇ ಅಲ್ಲದೆ ಆರೋಗ್ಯ,ಪರಿಸರ ಸೇರಿದಂತೆ ಸಮಾಜದ ಒಳಿತಿಗಾಗಿ ಶ್ರಮಿಸುತ್ತಿರುವ ಶ್ರೇಷ್ಠ ವ್ಯಕ್ತಿ.ಅವರನ್ನು ಶಿಕ್ಷಕರ ದಿನಾಚರಣೆಯ ಹಿನ್ನೆಲೆಯಲ್ಲಿ ಸೇವೆಯನ್ನು ಗುರುತಿಸಿ ನಮ್ಮ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಗುತ್ತಿದೆ ಎಂದರು.
ಸನ್ಮಾನಿತ ಶಿಕ್ಷಕ ಹಿರಿಯಣ್ಣಗೌಡ ಮಾತನಾಡಿ,ಇತ್ತೀಚಿನ ದಿನಗಳಲ್ಲಿ ಗುರು ಮತ್ತು ಶಿಷ್ಯರ ಭಾಂದವ್ಯದಲ್ಲಿ ಬಿರುಕು ಉಂಟಾಗಿದೆ. ಕಾರಣ ಅಧುನಿಕ ಕಾಲಘಟ್ಟದಲ್ಲಿನ ಶಿಕ್ಷಣ ಕೇವಲ ಪಠ್ಯಕ್ಕೆ ಸೀಮಿತವಾಗಿದೆ.ವಿದ್ಯಾರ್ಥಿಗಳಿಗೆ ಸಂಸ್ಕಾರ ನೀಡದ ಕಾರಣದಿಂದ ಬದುಕಿಗೆ ಮಾರಕವಾಗುತ್ತಿದೆ.ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಸಂಬಂಧಿಸಿದ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಪಠ್ಯ ಜೊತೆಗೆ ಸಂಸ್ಕಾರ ಮತ್ತು ಸಂಸ್ಕೃತಿ ಕಲಿಸುವ ಕೆಲಸ ಮಾಡಬೇಕಾಗಿದೆ.ನಿಜಕ್ಕೂ ಬೇಲೂರು ಲಯನ್ಸ್ ಕ್ಲಬ್ ಕಳೆದ ದಶಕದಿಂದಲೂ ಉತ್ತಮ ಸೇವೆಯನ್ನು ನಡೆಸುತ್ತಾ ಬಂದಿದೆ. ಇವರು ನನ್ನ ಸೇವೆ ಗುರುತಿಸಿ ಸನ್ಮಾನಿಸಿದ್ದು ಸಂತೋಷವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಲಯನ್ಸ್ ಭವನ ಟ್ರಸ್ಟ್ ಅಧ್ಯಕ್ಷ ದೊಡ್ಡಮನೆ ಪ್ರಭಾಕರ್,ಕಾರ್ಯದರ್ಶಿ ಮುಕ್ತಿಯಾರ್ ಅಹಮದ್ ,ಖಜಾಂಚಿ ಪ್ರಶಾಂತ್ ಶೆಟ್ಟಿ,ವಲಯಾಧ್ಯಕ್ಷ ಅಬ್ದುಲ್ ಲತೀಪ್,ಮಾಜಿ ಅದ್ಯಕ್ಷರಾದ ಎಂ.ಪಿ.ಪೂವಯ್ಯ, ಕೆ.ಎಲ್.ಸುರೇಶ್, ವೈ.ಬಿ.ಸುರೇಶ್, ನಾಟಿ ವೈದ್ಯ ಉಮೇಶ್, ನೌಷದ್, ಪುಟ್ಟಸ್ವಾಮಿ, ಸಂತೋಷ್, ಹೆಬ್ಬಾಳು ಹಾಲಪ್ಪ, ಆದರ್ಶ, ತೌಫಿಕ್, ಸುಯೀಲ್, ಅಶ್ವಥ್, ಹೇಮಾಂತ್ ಇನ್ನೂ ಮುಂತಾದವರು ಹಾಜರಿದ್ದರು.
………………….
ಬೇಲೂರು ಲಯನ್ಸ್ ಕ್ಲಬ್ ವಿವಿಧ ಸೇವಾ ಚಟುವಟಿಕೆಗಳನ್ನು ನಡೆಸಲು ಲಯನ್ಸ್ ಸರ್ವ ಸದಸ್ಯರ ಸಹಕಾರದಿಂದ ಬೃಹತ್ ಲಯನ್ಸ್ ಭವನ ನಿರ್ಮಾಣವಾಗಿದೆ.ಇದೇ ಅಕ್ಟೋಬರ್ 13 ರಂದು ವಿವಿಧ ಗಣ್ಯಮಾನ್ಯರ ಸಮ್ಮುಖದಲ್ಲಿ ಲೋಕಾರ್ಪಣೆ ಮಾಡಲಾಗುತ್ತದೆ ಎಂದು ಬೇಲೂರು ಲಯನ್ಸ್ ಭವನ ಟ್ರಸ್ಟ್ ಅಧ್ಯಕ್ಷ ದೊಡ್ಡಮನೆ ಪ್ರಭಾಕರ್ ಹೇಳಿದರು