ಚಿಕ್ಕಮಗಳೂರು-ಹಿಂದೂ ಧಾರ್ಮಿಕ ಮತ್ತು ತೀರ್ಥ ಕ್ಷೇತ್ರಗಳನ್ನು ಸರ್ಕಾರದ ದಬ್ಬಾಳಿಕೆ,ನಿಯಂತ್ರಣದಿoದ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಮುಖಂಡರುಗಳು ಗುರುವಾರ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ವಿ.ಹೆಚ್.ಪಿ ಜಿಲ್ಲಾ ಕಾರ್ಯದರ್ಶಿ ರಂಗನಾಥ್, ತಿರುಪತಿ ಬಾಲಾಜಿ ಮತ್ತು ಇತರ ಸ್ಥಳಗಳಲ್ಲಿ ನಡೆದಿರುವಂತಹ ಅನಾಚಾರಗಳಿಂದ ಹಿಂದೂ ಸಮಾಜದ ದೇವಾಲಯಗಳ ಪವಿತ್ರತೆಯನ್ನು ಕಾಪಾಡಿಕೊಳ್ಳಬೇಕೆಂದರೆ ಸರ್ಕಾರದ ನಿಯಂತ್ರಣದಿoದ ಮುಕ್ತವಾದರೆ ಮಾತ್ರ ಸಾಧ್ಯವಾಗಲಿದೆ ಎಂದರು.
ಪ್ರತಿ ಹಿಂದೂ ದೇವಾಲಯಗಳ ಆಸ್ತಿ ಮತ್ತು ಆಧಾಯವನ್ನು ದೇವಾಲಯಗಳ ಅಭಿವೃದ್ದಿಗಾಗಿ ಮತ್ತು ಧಾರ್ಮಿಕ, ಸಂಬoಧಿತ ಸೇವಾ ಚಟುವಟಿಕೆಗಾಗಿ ಮಾತ್ರವೇ ಬಳಸಬೇಕು. ವಾಸ್ತವದಲ್ಲಿ ದೇವಾಲಯಗಳ ಆದಾಯ ಮತ್ತು ಆಸ್ತಿಪಾಸ್ತಿಗಳ ತೆರೆದ ಲೂಟಿಯನ್ನು ಅಧಿಕಾರಿ,ರಾಜಕಾರಣಿಗಳು ಮಾತ್ರವಲ್ಲ ಅವರೊಂದಿಗೆ ಕೈಜೋಡಿಸಿರುವ ಸನಾತನ ವಿರೋಧಿ ಪಾತ್ರಧಾರಿಗಳು ಮಾಡುತ್ತಿದ್ದಾರೆ ಎಂದು ದೂರಿದರು.
ಕೋಟ್ಯಾಂತರ ಹಿಂದೂಗಳಿಗೆ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ಆರಾದ್ಯದೈವ.ಅಲ್ಲದೇ ಭಕ್ತರಿಗೆ ವಿತರಿಸುವ ಪ್ರಸಾದ ರೂಪವಾಗಿ ನೀಡುವ ಲಾಡುಗಳ ಶುದ್ದತೆ ಮತ್ತು ಪರಿಪೂರ್ಣತೆಯ ಮೇಲೆ ಅನಾದಿ ಕಾಲದಿಂದಲೂ ಅಪಾರ ನಂಬಿಕೆಯಿದೆ. ಆದರೆ ಈಚೆಗೆ ಲಾಡುವಿನಲ್ಲಿ ಗೋವು,ಹಂದಿಯ ಕೊಬ್ಬು,ಮೀನಿನ ಎಣ್ಣೆ ಸೇರಿಸುತ್ತಿದ್ದಾರೆ.
ಕೆಲವು ಧರ್ಮದ್ರೋಹಿಗಳು ಮತ್ತು ಸರ್ಕಾರಿ ಲಂಚಕೋರರು ದುರುದ್ದೇಶದಿಂದ ಹಿಂದೂ ಧರ್ಮಕ್ಕೆ ದ್ರೋಹ ಬಗೆದಿರುವುದಲ್ಲದೇ ಕೋಟ್ಯಾಂತರ ಹಿಂದೂ ಭಕ್ತಾಧಿಗಳ ಮನಸ್ಸಿಗೆ ಘಾಸಿಯುನ್ನುಂಟು ಮಾಡಿದ್ದಾರೆ. ಇದರಿಂದ ರೊಚ್ಚಿಗೆದ್ದು ವಿವಿಧ ಸಂತರು, ಮಠಾಧೀಶರು, ಧಾರ್ಮಿಕ ಮುಖಂಡರು ಹಾಗು ಭಕ್ತಾಧಿಗಳ ಕೋಪವು ವಿಭಿನ್ನ ರೀತಿಯಲ್ಲಿ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.
ಸನಾತನ ವಿರೋಧಿ ಶಕ್ತಿಗಳು ಹಿಂದೂಗಳ ನಂಬಿಕೆಯೊoದಿಗೆ ಪ್ರಸಾದದ ತಯಾರಿಕೆಯ ವಿಷಯದಲ್ಲಿ ಧಾರ್ಮಿಕ ಹಕ್ಕುಗಳ ಮೇಲೆ ಪ್ರಹಾರ ಮಾಡಿವೆ. ಅದಕ್ಕಿಂತಲೂ ಮಿಗಿಲಾಗಿ ದೇವಸ್ಥಾನದಲ್ಲಿ ಭಕ್ತಾಧಿಗಳು ದೇವರಿಗೆ ಅರ್ಪಿಸುವ ದೇಣಿಗೆ ಮತ್ತು ಕಾಣಿಕೆಗಳ ದುರುಪಯೋಗ ಆಗುತ್ತಿದ್ದು ಸರ್ಕಾರ, ಅಧಿಕಾರಿ ಹಾಗೂ ರಾಜಕಾರಣಿಗಳು ಹುಂಡಿ ಹಣವನ್ನು ಧರ್ಮದ ವಿರುದ್ಧ ಬಳಸುತ್ತಿರುವುದು ಭಕ್ತರಿಗೆ ಅಪಾರವಾದ ನೋವು ತಂದಿದೆ ಎಂದರು.
ಹೀಗಾಗಿ ಕರ್ನಾಟಕ ಸರ್ಕಾರವು ತಕ್ಷಣವೇ ಎಲ್ಲಾ ಹಿಂದೂ ದೇವಾಲಯಗಳನ್ನು ತಮ್ಮ ನಿಯಂತ್ರ ಣದಿಂದ ಬಿಡುಗಡೆಗೊಳಿಸಬೇಕು. ಪ್ರಾದೇಶಿಕ ವ್ಯವಸ್ಥೆಯಡಿಯಲ್ಲಿ ಹಿಂದೂ ಸಂತರು ಮತ್ತು ಭಕ್ತರಿಗೆ ಒಪ್ಪಿಸಬೇಕು ಎಂದು ರಂಗನಾಥ್ ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಜಿಲ್ಲಾ ಉಪಾಧ್ಯಕ್ಷರು ಯೋಗೇಶ್ ರಾಜ್, ಸಹ ಕಾರ್ಯದರ್ಶಿ ಅಮಿತ್ ಗೌಡ, ಬಜರಂಗದಳ ಜಿಲ್ಲಾ ಸಹ ಸಂಯೋಜಕ ಶ್ಯಾಮ್ ವಿ ಗೌಡ. ನಗರ ಉಪ ಅಧ್ಯಕ್ಷ ದೇವು, ಸಂಯೋಜಕ ಸುನಿಲ್, ಸಹ ಸಂಯೋಜಕ ರವಿ, ಮುಖಂಡರುಗಳಾದ ಕಿರಣ್, ಗುರು, ಆಕಾಶ್, ಕಿಶೋರ್, ಸೀತಾರಾಮ್ರಣ್ಯ ಉಪಸ್ಥಿತರಿದ್ದರು.
———————–ಸುರೇಶ್