ಕೆ.ಆರ್.ಪೇಟೆ:ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗ ಶ್ರೀ ಧರ್ಮಧ್ವಜ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ಪ್ರತಿಷ್ಠಾಪನೆ ಮಾಡಿರುವ ಹಿಂದೂ ಮಹಾ ಗಣಪತಿ ವಿಸರ್ಜನಾ ಮಹೋತ್ಸವ ದಿನಾಂಕ 28-9-2024 ಶನಿವಾರ ವಿಶೇಷ ವಿವಿಧ ಜಾನಪದ ಕಲಾತಂಡಗಳೊಂದಿಗೆ ಶ್ರದ್ಧಾ-ಭಕ್ತಿ,ಸಡಗರ ಸಂಭ್ರಮದಿಂದ ಅರ್ಥಪೂರ್ಣವಾಗಿ ವಿಸರ್ಜನೆ ನಡೆಯಲಿದೆ ಎಂದು ಟ್ರಸ್ಟ್ ಸದಸ್ಯ ಹಾಗೂ ಪುರಸಭಾ ಸದಸ್ಯ ನಟರಾಜ್ ತಿಳಿಸಿದರು.
ಪಟ್ಟಣದ ಜಯನಗರ ಬಡಾವಣೆಯಲ್ಲಿರುವ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ರವರ ಕಚೇರಿಯಲ್ಲಿ ಮಾತನಾಡಿದ ಪುರಸಭಾ ಸದಸ್ಯ ನಟರಾಜ್,11ನೇ ವರ್ಷದ ಹಿಂದೂ ಮಹಾಗಣಪತಿ ಮೂರ್ತಿ ವಿಸರ್ಜನಾ ಮಹೋತ್ಸವದ ಮೆರವಣಿಗೆಯು ಮಂಡ್ಯ ಜಿಲ್ಲೆಯಲ್ಲಿಯೆ ಮೊದಲ ಬಾರಿಗೆ ಕೇರಳದ ತಿರುವಂತಪುರಂನ ಪಿ.ಝೆಡ್.ಎಂ ಕಲಾ ಸಮಿತಿ ಇವರಿಂದ ತಾಂಬೊಲಮ್ ಹಾಗೂ ವೈಲೆನ್ ವಾದ್ಯ, ನವಕೇರಳ ಆರ್ಟ್ಸ್ ರವರಿಂದ ಮೋಹಿನಿ ಆಟಂ ದೇವರ ಆಕರ್ಷಣೆ ವೇಷಗಳಾದ ಶ್ರೀ ರಾಮ,ರಾಧೆ ಕೃಷ್ಣ, ಛತ್ರಪತಿ ಶಿವಾಜಿ ಮಹಾರಾಜ್, ವಾಯುಪುತ್ರ ಆಂಜನೇಯ ಮತ್ತು ಇತರೆ ಜಾನಪದ ಕಲಾ ತಂಡಗಳೊಂದಿಗೆ ಜರುಗಲಿದೆ.
ಕರ್ನಾಟಕದಲ್ಲೇ ಪ್ರಪ್ರಥಮ ಬಾರಿಗೆ ಇಡ್ರಾಲೀಕ್ ಡಿ.ಜೆ ಮಂಗಳವಾದ್ಯ ಮತ್ತು ಇತರೆ ಸಾಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ ಹಿಂದೂ ಮಹಾಗಣಪತಿ ಉತ್ಸವ ಪಟ್ಟಣದ ರಾಜಬೀದಿಗಳಲ್ಲಿ ವಿಜೃಂಭಣೆಯಿಂದ ಮೆರವಣಿಗೆ ಮೂಲಕ ದೇವಿರಮ್ಮಣ್ಣಿ ಕೆರೆಗೆ ಮೂರ್ತಿ ವಿಸರ್ಜಿಸಲಾಗುವುದು ಆದ್ದರಿಂದ ಕೆ ಆರ್ ಪೇಟೆ ತಾಲ್ಲೂಕಿನ ಸಮಸ್ತ ಜನತೆ ಹೆಚ್ಚಿನ ಸoಖ್ಯೆಯಲ್ಲಿ ಆಗಮಿಸಿ ವಿಸರ್ಜನಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಬಳಿಕ ಮಾತನಾಡಿದ ಸಮಾಜ ಸೇವಕ ಆರ್ ಟಿ ಓ ಮಲ್ಲಿಕಾರ್ಜುನ್ ಅವರ ಅಭಿಮಾನಿಗಳ ಬಳಗದ ಅಧ್ಯಕ್ಷ ಗಂಜೀಗೆರೆ ಮಹೇಶ್ ಇತ್ತೀಚಿನ ದಿನಗಳಲ್ಲಿ ಹಬ್ಬ ಹರಿದಿನ ಹೆಸರಿನಲ್ಲಿ ಮೋಜು ಮಸ್ತಿ ಮಾಡುವ ಯುವಕರ ನಡುವೆ ಶ್ರೀ ಧರ್ಮಧ್ವಜ ಸೇವಾ ಸಮಿತಿ ಯುವಕರು ಅಯೋಧ್ಯೆ ಬಾಲರಾಮನ ಮೂರ್ತಿಯ ಮಾದರಿಯಲ್ಲಿ ಶ್ರೀ ಮಹಾ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಸರ್ಜನಾ ಕಾರ್ಯಕ್ರಮಕ್ಕೆ ವಿವಿಧ ಅಪರೂಪದ ಕಲಾತಂಡಗಳೊಂದಿಗೆ ವಿಸರ್ಜನೆ ಕೈಗೊಂಡಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಭಾಸ್ಕರ್, ಖಜಾಂಚಿ ನಂದನ್, ಮಹೇಂದ್ರ, ಡಿ.ಸಿ ಕುಮಾರ್,ನಂಜುಂಡ, ರಕ್ಷಿತ್, ಸೇರಿದಂತೆ ಉಪಸ್ಥಿತರಿದ್ದರು.
——————————-ಮನು ಮಾಕವಳ್ಳಿ ಕೆ ಆರ್ ಪೇಟೆ