ಕಡಕೊಳ-ಪಟ್ಟಣ ಹಾಗು ಗ್ರಾಮಗಳ ನೈರ್ಮಲ್ಯಿಕರಣಕ್ಕಾಗಿ ಹಾಗು ಮೂಲಭೂತ ಸೌಕರ್ಯಗಳ ಒದಗಿಸಲು ದಿನನಿತ್ಯವೂ ದುಡಿಯುವ ಪೌರ ಕಾರ್ಮಿಕರಿಗೆ ನಾವು ಎಷ್ಟೇ ಕೃತಜ್ಞತೆ ಸಲ್ಲಿಸಿದರು ಸಾಲದು ಎಂದು ಜಿಲ್ಲಾ ಯೋಜನಾ ನಿರ್ದೇಶಕಿ .ಶುಭ.ಬಿ ಹೇಳಿದರು.
ಪುರಸಭಾ ಭವನದಲ್ಲಿ ಪೌರ ಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಪೌರ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪೌರ ಕಾರ್ಮಿಕರು ಸಾರ್ವಜನಿಕರ ಒಳಿತಿಗಾಗಿ ತಮ್ಮ ಜೀವವನ್ನು ಮುಡಿಪಾಗಿಟ್ಟು ಕರ್ತವ್ಯ ನಿರ್ವಹಿಸು ತ್ತಾರೆ.ಅವರುಗಳು ಸಹ ನಿರಂತರ ಆರೋಗ್ಯ ತಪಾಸಣೆಗಳಿಗೆ ಒಳಪಟ್ಟು ತಮ್ಮ ಅರೋಗ್ಯ ಕಾಪಾಡಿಕೊಳ್ಳುವತ್ತ ಗಮನ ಹರಿಸಬೇಕು ಎಂದು ಶುಭ ಬಿ ಸಲಹೆ ನೀಡಿದರು.
ನಂತರ ಮಾತಾನಾಡಿದ ಮುಖ್ಯಾಧಿಕಾರಿಗಳು ನಗರದಲ್ಲಿ ಮುಂಜಾನೆ ಮಳೆ,ಚಳಿ ಲೆಕ್ಕಿಸದೆ ಸ್ವಚ್ಚ ಮತ್ತು ಆರೋಗ್ಯ ಪೂರ್ಣ ಸಮಾಜ ಸೃಷ್ಟಿಸುವ ನೀವು ನಿಜವಾದ ಕಾಯಕ ಯೋಗಿಗಳು.ನಿಮ್ಮ ಹಾಗೂ ನಿಮ್ಮ ಕುಟುಂಬದವರ ಆರೋಗ್ಯದ ಕಡೆಯು ಗಮನ ಹರಿಸಬೇಕು.ನಿಮ್ಮ ಮಕ್ಕಳಿಗೆ ಉತ್ತಮ ವಿದ್ಯಭ್ಯಾಸ ನೀಡಿ ಸಮಾಜದಲ್ಲಿ ಉನ್ನತ ಸ್ಥಾನದ ಉದ್ಯೋಗದಲ್ಲಿ ತರುವ ಛಲವನ್ನು ಹೊಂದಬೇಕು ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುವ ಪೌರಕಾರ್ಮಿಕರಿಗೆ ಸನ್ಮಾನವನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ನಗರಾಭಿವೃಧಿ ಕೋಶದ ವ್ಯವಸ್ಥಾಪಕರಾದ ಮುರುಗೇಶ್, ಪೌರಕಾರ್ಮಿಕರ ಸಂಘದ ಉಪಾದ್ಯಕ್ಷರಾದ ಡಿ.ಆರ್ ರಾಜು, ಪಟ್ಟಣ ಪಂಚಾಯಿತಿಯ ಸ್ವಚ್ಚ ಭಾರತ ಮಿಶಿನ್ ಪ್ರತಿನಿಧಿಯಾದ ಕುಮಾರಸ್ವಾಮಿ, ಮುಖ್ಯಾಧಿಕಾರಿ ಹೆಚ್.ಆರ್ ದೀಪಾ, ಆರೋಗ್ಯ ನಿರೀಕ್ಷಕರಾದ ಆರ್.ಮಂಜುನಾಥ್, ಸಮುದಾಯ ಸಂಘಟನಾಧಿಕಾರಿ ಯವರಾದ ಡಾ:ಶಂಕರ್, ಲೆಕ್ಕಿಗರಾದ ಸತೀಶ್, ಕಂದಾಯ ನಿರೀಕ್ಷಕರಾದ ಶಿವಕುಮಾರ್, ವೀಣಾ, ಈರಯ್ಯ ಹಾಗೂ ಕರವಸೂಲಿಗಾರರಾದ ಬೀರಯ್ಯ,ಲೋಕೇಶ್ ಹಾಗೂ ಪಂಚಾಯಿತಿಯ ಸಿಬ್ಬಂದಿಗಳು ಹಾಜರಿದ್ದರು.