ಕೊರಟಗೆರೆ;ತಂಗನಹಳ್ಳಿ ಶ್ರೀ ಕಾಶಿ ಅನ್ನಪೂರ್ಣೇಶ್ವರಿ ಮಠದಲ್ಲಿ ನವರಾತ್ರಿ ಅಂಗವಾಗಿ ಆ.3 ರಿಂದ ಆ.11 ರವರೆಗೆ ವಿಶೇಷ ಪೂಜೆ-ಚಂಡಿಕಾ ಹೋಮ

ಕೊರಟಗೆರೆ;ತಾಲೂಕಿನ ತಂಗನಹಳ್ಳಿ ಗ್ರಾಮದ ಶ್ರೀ ಕಾಶಿ ಅನ್ನಪೂರ್ಣೇಶ್ವರಿ ಮಹಾಸಂಸ್ಥಾನ ಮಠದಲ್ಲಿ ನವರಾತ್ರಿ ಅಂಗವಾಗಿ ಆ.3 ರಿಂದ ಆ.11 ರವರೆಗೆ ವಿಶೇಷ ಪೂಜೆ,ಅಮ್ಮನವರಿಗೆ ಪ್ರತಿ ನಿತ್ಯ ನವದುರ್ಗೆಯ ಅಲಂಕಾರದೊಂದಿಗೆ ಆ.11 ರಂದು ಶುಕ್ರವಾರ ಚಂಡಿಕಾ ಹೋಮ ಏರ್ಪಡಿಸಲಾಗಿದೆ ಎಂದು ಶ್ರೀ ಮಠದ ಪೀಠಾಧ್ಯಕ್ಷ ಶ್ರೀ ಬಸವ ಮಹಾಲಿಂಗ ಸ್ವಾಮೀಜಿ ತಿಳಿಸಿದ್ದಾರೆ.

ಅವರು ತಂಗನಹಳ್ಳಿ ಶ್ರೀ ಮಠದಲ್ಲಿ ಪತ್ರಿಕಾ ಹೇಳಿಕೆ ನೀಡಿ ಪ್ರತಿ ವರ್ಷದಂತೆ ಈ ವರ್ಷವು ನವರಾತ್ರಿ ಅಂಗವಾಗಿ ಶ್ರೀ ಕಾಶಿ ಅನ್ನಪೂರ್ಣೇಶ್ವರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀಪೂಜ್ಯ ತಿಮ್ಮಪ್ಪ ಸ್ವಾಮೀಗಳ ಕೃಪಾರ್ಶೀವಾದದೊಂದಿಗೆ ಶ್ರೀ ಮಠದಲ್ಲಿ ಆ.3 ರಿಂದ ಆ.11 ವರೆಗೆ ಪ್ರತಿ ನಿತ್ಯ ವಿಶೇಷ ಪೂಜಾ ಕಾರ್ಯಕ್ರಮದೊಂದಿಗೆ ಅನ್ನಪೂರ್ಣೇಶ್ವರಿ ದೇವಿಗೆ ನವದುರ್ಗೆಯ ಅಲಂಕಾರ ಮಾಡಲಾಗುವುದು.ಪ್ರತಿ ನಿತ್ಯ ಸಂಜೆ 7-30 ಗಂಟೆಯಿಂದ 8-30 ರವರೆಗೆ ಮಹಾಮಂಗಳಾರತಿ ನಂತರ ಭಕ್ತರಿಗೆ ಪ್ರಸಾದ ವಿನಿಯೋಗಮಾಡಲಾಗುವುದು.ನವರಾತ್ರಿಯ ಕೊನೆಯದಿನ ಆ.11 ರಂದು ಶುಕ್ರವಾರ ದಂದು ಬೆಳಿಗ್ಗೆ ಅರಸಿಕೆರೆ ತಾಲೂಕಿನ ದೊಡ್ಡಮೇಟಿಕುರ್ಕೆಯ ಶ್ರೀಬೂದಿಹಾಳ್ ವಿರಕ್ತಮಠದ ಶ್ರೀ ಶಶಿಶೇಖರ ಸಿದ್ದ ಬಸವ ಸ್ವಾಮಿಗಳ ನೇತೃತ್ವದಲ್ಲಿ ಚಂಡಿಕಾ ಹೋಮ ಏರ್ಪಡಿಸಲಾಗಿದೆ.ಕಾರ್ಯಕ್ರಮಕ್ಕೆ ಆಗಮಿಸುವ  54ಮುತ್ತೈದೆಯರಿಗೆ ಶ್ರೀ ಮಠದಿಂದ ಬಾಗಿನ ನೀಡಲಾಗುವುದು ಎಂದು ತಿಳಿಸಿದರು.
 
ಶ್ರೀ ಮಠದ ಕಾರ್ಯಕ್ರಮಕ್ಕೆ ರಾಜ್ಯ ರೈಲ್ವೇ ಖಾತೆ ಮತ್ತು ಜಲಶಕ್ತಿ ಖಾತೆ ಸಚಿವ ಹಾಗೂ ತುಮಕೂರು ಸಂಸದ ವಿ.ಸೋಮಣ್ಣ, ಗೃಹ ಸಚಿವರು ಹಾಗೂ ಜಿಲ್ಲಾಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ, ಸಹಕಾರ ಸಚಿವ ಕೆ.ಎನ್.ರಾಜಣ್ಣ ಸೇರಿದಂತೆ ಚಿತ್ರದುರ್ಗಾ ಭೋವಿ ಗುರುಪೀಠದ ಶ್ರೀ ಜಗದ್ಗುರು ಇಮ್ಮಡಿ ಸಿದ್ದರಾಮ ಸ್ವಾಮೀಜಿ, ಹೊಸದುರ್ಗಾ ಕುಂಚಿಟಿಗರ ಮಹಾಸಂಸ್ಥಾನ ಮಠದ ಶ್ರಿ ಜಗದ್ಗುರು ಶಾಂತವೀರ ಸ್ವಾಮೀಜಿ, ಚಿತ್ರದುರ್ಗಾ ಯಾದವಾನಂದ ಗುರುಪೀಠದ ಶ್ರೀಜಗದ್ಗುರು ಕೃಷ್ಣ ಯಾದವಾನಂದ ಸ್ವಾಮೀಜಿ, ಶಿವಮೊಗ್ಗ ಶ್ರೀ ನಾರಾಯಣ ಈಡಿಗ ಗುರುಪೀಠದ ಶ್ರೀರೇಣುಕಾನಂದ ಸ್ವಾಮೀಜಿ, ಚಿತ್ರದುರ್ಗಾ ಶ್ರೀ ಮಡಿವಾಳರ ಗುರುಪೀಠದ ಶ್ರೀ ಬಸವಮಾಚಿದೇವ ಸ್ವಾಮೀಜಿ, ಮಧುಗಿರಿ ತಗ್ಗಿಹಳ್ಳಿ ಶ್ರೀರಾಮಕೃಷ್ಣ ಆಶ್ರಮದ ಶ್ರೀ ರಾಮಾನಂದ ಸ್ವಾಮೀಜಿ, ಅರಸಿಕೆರೆ ತಾಲೂಕು ಮೇಟಿಕುರ್ಕೆ ಮಠದ ಶ್ರೀ ಶಶಿಶೇಖರ ಸ್ವಾಮೀಜಿ ಸೇರಿದಂತೆ ರಾಜ್ಯದ ವಿವಿಧ ಮಠದ ಸ್ವಾಮೀಜಿಗಳು ಆಗಮಿಸಲಿದ್ದಾರೆ.

ನವರಾತ್ರಿ ಕಾರ್ಯಕ್ರಮಕ್ಕೆ ಅಕ್ಕ ಪಕ್ಕದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಕುಟುಂಬ ಸಮೇತ ಆಗಮಿಸಿ ದೇವಿಯ ಆಶೀರ್ವಾದ ಪಡೆಯುವಂತೆ ಕೋರಿದ್ದಾರೆ.

————–—–ಶ್ರೀನಿವಾಸ್ ಕೊರಟಗೆರೆ

Leave a Reply

Your email address will not be published. Required fields are marked *

× How can I help you?