ತುಮಕೂರು:ಅ.7ರಂದು ಜಿಲ್ಲಾ ಜನಜಾಗೃತಿ ವೇದಿಕೆ ವತಿಯಿಂದ ಜನಜಾಗೃತಿ ಜಾಥಾ ಮತ್ತು ಸಮಾವೇಶ-ಸತೀಶರಿಂದ ಮಾಹಿತಿ

ತುಮಕೂರು:ಅಕ್ಟೋಬರ್ 7 ರಂದು ನಗರದ ಮಹಾವೀರ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಬಿಸಿ.ಟ್ರಸ್ಟ್ನ
ಜಿಲ್ಲಾ ಜನಜಾಗೃತಿ ವೇದಿಕೆ ವತಿಯಿಂದ ಗಾಂಧೀಜಯoತಿ ಪ್ರಯುಕ್ತ ಜನಜಾಗೃತಿ ಜಾಥಾ ಹಾಗೂ ಸಮಾವೇಶವನ್ನು
ಹಮ್ಮಿಕೊಳ್ಳಲಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ನ ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣರವರು ತಿಳಿಸಿದರು.

ಅವರು ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಅಖಿಲ ಭಾರತ
ಜನಜಾಗೃತಿ ವೇದಿಕೆ ಟ್ರಸ್ಟ್ 1992ರಲ್ಲಿ ಪ್ರಾರಂಭವಾಗಿ ಇಲ್ಲಿವರೆವಿಗೂ 1800ಕ್ಕೂ ಹೆಚ್ಚು ಮದ್ಯವರ್ಜನ ಶಿಬಿರಗಳನ್ನು ನಡೆಸಿ ಕುಡಿತದ ಚಟದಿಂದ ಹೊರಬರಲು ಕಾರ್ಯಕ್ರಮ ರೂಪಿಸಿದೆ.

1ಲಕ್ಷದ 25ಸಾವಿರ ಜನ ಕುಡಿತ ಬಿಟ್ಟಿದ್ದಾರೆ,ತುಮಕೂರು ಜಿಲ್ಲೆಯಲ್ಲಿ 4500ಜನ ನವಜೀವನ ಸಮಿತಿ ಸದಸ್ಯರಿದ್ದಾರೆ,ತುಮಕೂರು ಜಿಲ್ಲೆಯನ್ನು ವ್ಯಸನಮುಕ್ತ ಸಮಾಜವನ್ನು ನಿರ್ಮಾಣ ಮಾಡಲು ಜನಜಾಗೃತಿ ವೇದಿಕೆ ಕೆಲಸ ಮಾಡುತ್ತಿದೆ ಎಂದರು.

ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ ನ ಅಧ್ಯಕ್ಷರಾದ ಅಮರನಾಥಶೆಟ್ಟಿ ಮಾತನಾಡುತ್ತಾ ಜಿಲ್ಲಾ ಜನಜಾಗೃತಿ ವೇದಿಕೆ
ವತಿಯಿಂದ ಈ ಕಾರ್ಯಕ್ರಮ ಮಾಡುತ್ತಿದ್ದೇವೆ.ಅ.7ರಂದು 10 ಗಂಟೆಗೆ ನಗರದ ಟೌನ್ ಹಾಲ್ ನಿಂದ ಜಾಥಾ ಪ್ರಾರಂಭವಾಗಿ ಮಹಾವೀರಭವನದಲ್ಲಿ ಕೊನೆಗೊಳ್ಳುತ್ತದೆ.11ಗಂಟೆಗೆ ವೇದಿಕೆ ಕಾರ್ಯಕ್ರಮ ನಡೆಯುತ್ತದೆ.

ಬಿಸಿ ಟ್ರಸ್ಟ್ ನ ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ

ಕಾರ್ಯಕ್ರಮವನ್ನು ಮಾಕನಹಳ್ಳಿ ಜಂಗಮಮಠದ ಶ್ರೀ ಗಂಗಾಧರಸ್ವಾಮೀಜಿ ದಿವ್ಯಸಾನಿಧ್ಯ ವಹಿಸುವರು,ಜಿಲ್ಲಾಧಿಕಾರಿ
ಶುಭಕಲ್ಯಾಣ್,ಎಸ್.ಪಿ.ಕೆ.ವಿ.ಅಶೋಕ್,ಪ್ರಾದೇಶಿಕ ನಿರ್ದೇಶಕರಾದ ಎಂ.ಶೀನಪ್ಪ,ಶಾಸಕರಾದ
ಜಿ.ಬಿ.ಜ್ಯೋತಿಗಣೇಶ್,ಮುರಳೀಧರಹಾಲಪ್ಪ,ಎಸ್.ಪಿ.ಚಿದಾನoದ್,ಪಾಲನೆನೀತ್ರಯ್ಯ,ಲೋಕೇಶ್ ಇತರರು ಉಪಸ್ಥಿತರಿರುವರು,ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ವ್ಯಸನಮುಕ್ತ ನವಜೀವನ ಸಮಿತಿಯ ಸದಸ್ಯರುಗಳು ದಂಪತಿಗಳ ಸಮೇತ ಕಾರ್ಯಕ್ರಮದಲ್ಲಿ ಹಾಜರಿರುವರು.ಅಕ್ಟೋಬರ್ 5ರಂದು ತಿಪಟೂರಿನ ಶಿವಶಾಂತಿ ಕಲ್ಯಾಣ ಮಂಟಪದಲ್ಲಿ,7ರoದು ತುಮಕೂರಿನಲ್ಲಿ ಕಾರ್ಯಕ್ರಮ ನಡೆಯಲಿದೆ ಎಂಬ ಮಾಹಿತಿಯನ್ನು ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷಗಣೇಶ್ ಪ್ರಸಾದ್, ಶ್ರೀಮತಿ ಪ್ರೇಮಾಹೆಗ್ಗಡೆ,ಶ್ರೀಮತಿ ವಿಜಯಭಾಸ್ಕರ್,
ಬಸವರಾಜು,ತಾಲ್ಲೋಕು ಯೋಜನಾಧಿಕಾರಿಗಳಾದ ಪಿ.ಬಿ.ಸಂದೇಶ್,ಪ್ರಭಾಕರ್ ರಾಮ್ ನಾಯಕ್ ಇತರರು
ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?