ಚಿಕ್ಕಮಗಳೂರು-ಭಾರತದಲ್ಲಿ ಪ್ರತಿ ವರ್ಷ 30 ಲಕ್ಷ ಜನ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ-ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ: ಡಾ.ಮಂಜುನಾಥ್

ಚಿಕ್ಕಮಗಳೂರು-ಪಾಪಮಾತ್ಯ ಮತ್ತು ಐರೋಪ್ಯ ರಾಷ್ಟಗಳಲ್ಲಿ ಹೃದಯಾಘಾತ ಪ್ರಕರಣಗಳು ಕಡಿಮೆಯಾಗುತ್ತಿವೆ. ಆದರೆ ಇದೇ ಸಂದರ್ಭದಲ್ಲಿ ಭಾರತದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್. ಮಂಜುನಾಥ್ ತಿಳಿಸಿದರು.

ನಗರದ ಆಶ್ರಯ ಆಸ್ಪತ್ರೆ ಆವರಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ವಿಶ್ವ ಹೃದಯ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಾರತದಲ್ಲಿ ಪ್ರತಿ ವರ್ಷ 30 ಲಕ್ಷ ಜನ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಭಾರತದಲ್ಲಿ ಸಾವನ್ನಪ್ಪುತ್ತಿರುವ ಶೇಕಡ 90ರಷ್ಟು ಪ್ರಕರಣಗಳಲ್ಲಿ ಜೀವನಶೈಲಿ ಆಧಾರಿತ ರೋಗಗಳಾದ ಕ್ಯಾನ್ಸರ್, ಪಾರ್ಶ್ವವಾಯು, ಹೃದ್ರೋಗ, ಸಕ್ಕರೆ ಕಾಯಿಲೆ, ರಕ್ತದೊತ್ತಡದಿಂದಲೇ ಸಾವು ಸಂಭವಿಸುತ್ತಿದೆ. ಇದಕ್ಕೆ ಪ್ರಮುಖ ಕಾರಣವೇ ನಮ್ಮ ಜೀವನ ಶೈಲಿಯಲ್ಲಿ ಆದ ಬದಲಾವಣೆಯಾಗಿದೆ.ನಮ್ಮ ಹೃದಯ ಚೆನ್ನಾಗಿರಬೇಕು ಎಂದರೆ 365 ದಿನವೂ ನಡೆಯಬೇಕು ಎಂದು ಹೇಳಿದರು.

????????????????????????????????????

1960ರಲ್ಲಿ ಭಾರತದಲ್ಲಿ ಹೃದಯಾಘಾತದ ಪ್ರಮಾಣ ಶೇ.4ರಷ್ಟಿತ್ತು. ಆದರೆ ಇಂದು ಹೃದಯಘಾತ ದ ಪ್ರಮಾಣ ಶೇ. 10ಕ್ಕೆ ಏರಿಕೆಯಾಗಿದೆ. ಹಿಂದೆ ಹೃದಯಘಾತ ಎಂದರೆ ನಗರ ಪ್ರದೇಶದ ಅದರಲ್ಲೂ ಶ್ರೀಮoತ ವರ್ಗದ ಕಾಯಿಲೆ ಎಂದೇ ಹೇಳಲಾಗುತ್ತಿತ್ತು. ಆದರಿಂದ ಹೃದ್ರೋಗ ಜಾತ್ಯತೀತ ರೋಗವಾಗಿ ಬದಲಾಗಿದೆ. ನಗರ ಹಾಗೂ ಹಳ್ಳಿ ಜನರ ಜೀವನ ಶೈಲಿಗಳು ಒಂದೇ ಆಗಿರುವುದರಿಂದಾಗಿ ಇಂದು ಗ್ರಾಮೀಣ ಪ್ರದೇಶದಲ್ಲಿಯೂ ಹೆಚ್ಚಿನ ಹೃದಯಾಘಾತ ಪ್ರಕರಣಗಳನ್ನು ನೋಡುತ್ತಿದ್ದೇವೆ ಎಂದರು.೬

2013 ರಿಂದ 2014 ರವರೆಗೆ ಜಯದೇವ ಆಸ್ಪತ್ರೆಯಲ್ಲಿ ಅಧ್ಯಯನ ಒಂದನ್ನು ನಡೆಸಲಾಗಿತ್ತು. ಈ5ವರ್ಷಗಳ ಅವಧಿಯಲ್ಲಿ 6000 ಯುವಕರಿಗೆ ಹೃದಯ ಸಂಬoಧಿ ಚಿಕಿತ್ಸೆ ನೀಡಲಾಗಿತ್ತು. ಇದರಲ್ಲಿ ಶೇಕ ಡ 50ರಷ್ಟು ಮಂದಿ ಧೂಮಪಾನಿಗಳಾಗಿದ್ದರು. ಶೇ. 17ರಷ್ಟು ಜನರಿಗೆ ಅನುವಂಶೀಯತೆಯಿoದ ಹೃದಯ ರೋಗ ಕಾಣಿಸಿಕೊಂಡಿತ್ತು. ಯಾವುದೇ ಕುಟುಂಬದಲ್ಲಿ ಯಾರೊಬ್ಬರಿಗಾದರೂ 50 ವರ್ಷಕ್ಕಿಂತ ಮೊದಲೇ ಹೃದಯಘಾತವಾದಲ್ಲಿ ಆ ಕುಟುಂಬದ ಇತರರಲ್ಲಿಯೂ ಹೃದ್ರೋಗದ ಸಮಸ್ಯೆ ಕಾಣಿಸಿಕೊಳ್ಳಬಹುದು. ಈ ಬಗ್ಗೆ ಪ್ರತಿಯೊಬ್ಬರು ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.

ಯುವ ಭಾರತೀಯರು ಮತ್ತು ಮಧ್ಯವಯಸ್ಕರ ಹೃದಯ ಭೌತಿಕವಾಗಿ ಮತ್ತು ಮಾನಸಿಕವಾ ಗಿಯೂ ಸರಿ ಇಲ್ಲ. ಇಂದು ಎಲ್ಲಾ ವರ್ಗದ ಜನರಲ್ಲಿಯೂ ಒತ್ತಡ ಹೆಚ್ಚಲಾರಂಭಿಸಿದೆ.ಇದಕ್ಕೆ ಮೂಲ ಕಾರಣ ನಮ್ಮ ನಿರೀಕ್ಷೆಗಳು ಹೆಚ್ಚಾಗಿವೆ.ಇದು ಆರೋಗ್ಯ ಸಮಸ್ಯೆ ಹೆಚ್ಚಾಗಲು ಕಾರಣವಾಗಿದೆ ಎಂದರು.

ದೊಡ್ಡ ನಗರಗಳಲ್ಲಿ ವಾಸ ಮಾಡುವುದೇ ಆರೋಗ್ಯಕ್ಕೆ ಮಾರಕ.ನಗರಗಳ ಮಾಲಿನ್ಯದಿಂದಾಗಿಯೂ ಹೃದಯದ ಮೇಲೆ ಪರಿಣಾಮ ಉಂಟಾಗುತ್ತದೆ.ಇದರೊಂದಿಗೆ ನಮ್ಮ ಸ್ವಭಾವವು ಹೃದಯದ ಮೇಲೆ ಪರಿಣಾಮವನ್ನು ಬೀರುತ್ತದೆ.ಹೀಗಾಗಿ ಪ್ರತಿಯೊಬ್ಬರು ಶಾಂತ ಸ್ವಭಾವವನ್ನು ಮೈಗೂಡಿಸಿಕೊಳ್ಳುವುದು ಒಳ್ಳೆಯ ದು ಎಂದು ಹೇಳಿದರು.

ಯಾವಾಗಲೂ ದೇಹ ಚಲಿಸುತ್ತಿರಬೇಕು.ಮನಸ್ಸು ಸ್ಥಿರವಾಗಿರಬೇಕು.ಆದರೆ ಇಂದು ಮನಸ್ಸು ಚಲಿಸುತ್ತಿದೆ.ದೇಹ ಸ್ಥಿರವಾಗಿದೆ.ರೋಗಗಳು ಹೆಚ್ಚಲು ಇದೇ ಕಾರಣವಾಗಿದೆ. ಭಾರತ ಹೃದ್ರೋಗ,ಸಕ್ಕರೆ ಕಾಯಿಲೆ,ರಕ್ತದೊತ್ತಡದ ರಾಜಧಾನಿಯಾಗುತ್ತಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎಚ್. ಡಿ. ತಮ್ಮಯ್ಯ ಮಾತನಾಡಿ, ಹೃದಯ ಸಂಬoಧಿ ರೋಗ ಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ವಿಶ್ವ ಹೃದಯ ದಿನಾಚರಣೆ ಆಚರಿಸಲಾಗುತ್ತಿದೆ.ಇತ್ತೀಚಿನ ವರ್ಷಗಳಲ್ಲಿ ಹೃದಯ ಸಂಬoಧಿ ರೋಗಗಳು ಸಾಮಾನ್ಯ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಪ್ರಮುಖ ಕಾರಣ ಇಂದಿನ ಒತ್ತಡದ ಬದುಕೇ ಆಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ, ಆಶ್ರಯ ಆಸ್ಪತ್ರೆ ಮುಖ್ಯಸ್ಥ ಡಾ. ಡಿ.ಎಲ್. ವಿಜಯಕುಮಾರ್, ಪ್ರಮುಖರಾದ ಶಿವಾನಂದ ಸ್ವಾಮಿ, ಡಾ.ಜೆ.ಪಿ.ಕೃಷ್ಣೇಗೌಡ, ಡಾ.ಶುಭ ವಿಜಯ್ ಕುಮಾರ್, ಡಾ. ಕಾರ್ತೀಕ್ ವಿಜಯ್ ಡಾ. ಅನಿಕೇತ್ ಮತ್ತಿತರರಿದ್ದರು.

——————-—ಸುರೇಶ್

Leave a Reply

Your email address will not be published. Required fields are marked *

× How can I help you?