ಚಿಕ್ಕಮಗಳೂರು:ಪ.ಜಾತಿ ಮತ್ತು ವರ್ಗಗಳ ಪತ್ರಿಕಾ ಮಾಲೀಕರ ಹಾಗೂ ಪತ್ರಕರ್ತರ ಆರ್ಥಿಕ,ಸಾಮಾಜಿಕ ಹಾಗೂ ಔದ್ಯಮಿಕ ಸ್ಥಿತಿ- ಅಧ್ಯಯನ ಸಮಿತಿ-ಪತ್ರಕರ್ತ ಆರ್. ತಾರಾನಾಥ್ ನೇಮಕ

ಚಿಕ್ಕಮಗಳೂರು:ಪರಿಶಿಷ್ಟ ಜಾತಿ ಮತ್ತು ವರ್ಗಗಳ ಪತ್ರಿಕಾ ಮಾಲೀಕರ ಹಾಗೂ ಪತ್ರಕರ್ತರ ಆರ್ಥಿಕ,ಸಾಮಾಜಿಕ ಹಾಗೂ ಔದ್ಯಮಿಕ ಸ್ಥಿತಿಗತಿಯ ಬಗ್ಗೆ ಅಧ್ಯಯನ ಮಾಡಲು ಕನ್ನಡಪ್ರಭ ಪತ್ರಿಕೆಯ ಚಿಕ್ಕಮಗಳೂರು ಜಿಲ್ಲಾ ವರದಿಗಾರ ಆರ್. ತಾರಾನಾಥ್ ಸೇರಿದಂತೆ 8 ಮಂದಿ ಒಳಗೊಂಡ ಸಮಿತಿಯನ್ನು ರಾಜ್ಯ ಸರ್ಕಾರ ರಚನೆ ಮಾಡಿದೆ.

ಆರ್. ತಾರಾನಾಥ್ (ಚಿಕ್ಕಮಗಳೂರು), ಕೆ. ಶಿವಕುಮಾರ್ (ಮೈಸೂರು), ಎಂ.ಡಿ. ಶಿವಕುಮಾರ್ (ಚಾಮರಾಜನಗರ), ಶ್ರೀಮತಿ ಎ. ಲಾವಣ್ಯ (ಬೆಂಗಳೂರು), ಚಲುವರಾಜು, ಅಧ್ಯಕ್ಷರು, ಎಸ್ಸಿ.ಎಸ್ಟಿ. ಪತ್ರಕರ್ತರ ಸಂಘ (ಬೆಂಗಳೂರು), ಮುತ್ತುನಾಯರ್ (ಬಾಗಲಕೋಟೆ), ಎಸ್. ಪೃಥ್ವಿರಾಜ್ (ಬೀದರ್) ಹಾಗೂ ವಾರ್ತಾ ಇಲಾಖೆಯ ಜಂಟಿ ನಿರ್ದೇಶಕರಾದ ಮಂಜನಾಥ್ ಡೊಳ್ಳಿನ ಅವರನ್ನು ಅಧ್ಯಯನ ಸಮಿತಿಯ ಸದಸ್ಯರನ್ನಾಗಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಪರಿಶಿಷ್ಟ ಜಾತಿ ಮತ್ತು ವರ್ಗಗಳ ಪತ್ರಕರ್ತರ ಜೀವನ ಭದ್ರತೆ ಮತ್ತು ವೃತ್ತಿ ಭದ್ರತೆ ದುಸ್ಥಿರವಾಗಿರುವ ಹಿನ್ನಲೆಯಲ್ಲಿ ಅಧ್ಯಯನ ನಡೆಸಿ ವರದಿ ನೀಡಲು ಸಮಿತಿ ರಚನೆ ಮಾಡಲಾಗಿದೆ.

Leave a Reply

Your email address will not be published. Required fields are marked *

× How can I help you?