ಹೆಚ್ ಡಿ ಕೋಟೆ:ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಮತ್ತು ಟಾಟಾ ಕನ್ಸೂಮರ್ಸ್ ಅವರ ಸಹಯೋಗದೊಂದಿಗೆ ಕೃಷಿಯಲ್ಲಿ ಸುಸ್ಥಿರತೆಯನ್ನು ಕಾಪಾಡುವ ದೃಷ್ಟಿಯಿಂದ ಎರೆಹುಳು ವಿತರಣಾ ಕಾರ್ಯಕ್ರಮ ಕೆಂಚನಹಳ್ಳಿ ಗ್ರಾಮದ ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರದಲ್ಲಿ ನಡೆಯಿತು.
ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ನ ಸಾಮಾಜಿಕ ಆರ್ಥಿಕ ಸಬಲೀಕರಣ ವಿಭಾಗದ ನಿರ್ದೇಶಕ ಡಾ. ಡೆನ್ನಿಸ್ ಡಿ ಚೌಹಾಣ್ ,ಸುಸ್ಥಿರತೆ ಮತ್ತು ಕೃಷಿ ಉಪವಿಭಾಗದ ವತಿಯಿಂದ 44 ರೈತರಿಗೆ ಎರೆಹುಳುಗಳನ್ನು ವಿತರಿಸಿ ಎರೆಹುಳು ಗೊಬ್ಬರದ ಉತ್ಪಾದನೆ,ಅದರ ನಿರ್ವಹಣೆ,ಇರುವೆಗಳಿಂದ ಕಾಪಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು.
ರೈತರೆಲ್ಲರೂ ಅತಿ ಹೆಚ್ಚು ಎರೆಹುಳುಗಳನ್ನು ಉತ್ಪಾದನೆ ಮಾಡಿ ಅದನ್ನು ತಮ್ಮ ಹೊಲಗಳಲ್ಲಿ ಬಳಸಿ ಉತ್ತಮವಾದ ಕೃಷಿ ಚಟುವಟಿಕೆಗಳನ್ನು ಮಾಡುವ ಮೂಲಕ ಸ್ವಾವಲಂಬನೆ ಹಾಗೂ ಸುಸ್ಥಿರತೆಯನ್ನು ಕಾಪಾಡಿಕೊಳ್ಳುವುದರ ಜೊತೆಗೆ ತಮ್ಮ ಜಮೀನುಗಳಲ್ಲಿ ಕಡಿಮೆಯಾಗುತ್ತಿರುವ ಸಾವಯುವ ಇಂಗಾಲದ ಪ್ರಮಾಣವನ್ನು ಹೆಚ್ಚಿಸಲು ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ರೈತರಿಗೆ ಸಾವಯುವ ಇಂಗಾಲದ ಮಹತ್ವ ಮತ್ತು ಅದನ್ನ ಮಣ್ಣಿನಲ್ಲಿ ಉಳಿಸಿಕೊಳ್ಳುವ ಕೆಲವು ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.
ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣ ವಿಭಾಗದ ಹಿರಿಯ ವ್ಯವಸ್ಥಾಪಕ ಪಿ.ಡಿ ನಾಯಕ ಮತ್ತು ಯೋಜನಾ ಸಂಯೋಜಕರು ಹಾಗೂ ಕ್ಷೇತ್ರ ಅನುವುಗಾರರು ಹಾಗೂ ಸಿಬ್ಬಂದಿಗಳು ಇದ್ದರು.
—————-ಶಿವು ಕೋಟೆ