ಶ್ರವಣಬೆಳಗೊಳ:ಗಾಂಧೀಜಿ-ಶಾಂತಿ ಮತ್ತು ಅಹಿಂಸೆ ಸಿದ್ಧಾಂತಗಳಿoದ ಹೋರಾಟ ಮಾಡಬಹುದು ಎಂಬುದನ್ನು ವಿಶ್ವಕ್ಕೆ ಸಾರಿದ ಮಹಾನ್ ವ್ಯಕ್ತಿ-ಡಾ. ರಾಜೇಂದ್ರ ಪಾಟೀಲ್ ಶಾಸ್ತ್ರಿ

ಶ್ರವಣಬೆಳಗೊಳ:ಮಹಾತ್ಮ ಗಾಂಧೀಜಿಯವರು ಭಾರತವನ್ನು ಸ್ವಾತಂತ್ರ್ಯಕ್ಕಾಗಿ ಹೋರಾಡುವಲ್ಲಿ ಪ್ರಮುಖ ಪಾತ್ರ ವಹಿಸಿ ಶಾಂತಿ ಮತ್ತು ಅಹಿಂಸೆ ಸಿದ್ಧಾಂತಗಳಿoದ ಹೋರಾಟ ಮಾಡಬಹುದು ಎಂಬುದನ್ನು ಜಗತ್ತಿಗೆ ಸಾರಿ ಮಹಾನ್ ವ್ಯಕ್ತಿಯಾಗಿದ್ದಾರೆ ಎಂದು ನಿಪ್ಸಾರ್‌ನ ಪ್ರಾಕೃತ ಭಾಷಾ ಅಧ್ಯಕ್ಷರಾದ ಡಾ. ರಾಜೇಂದ್ರ ಪಾಟೀಲ್ ಶಾಸ್ತ್ರಿ ಹೇಳಿದರು.

ಶ್ರವಣಬೆಳಗೊಳ ಸಮೀಪದ ಶ್ರೀಧವಲ ತೀರ್ಥಂನಲ್ಲಿರುವ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ಜಯಂತಿಯನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿಯವರ ಜೀವನ ಆದರ್ಶಗಳನ್ನು, ಶಾಂತಿ, ಅಹಿಂಸೆ, ಮತ್ತು ಸಾಮಾಜಿಕ ನ್ಯಾಯದ ತತ್ವಗಳನ್ನು ಮೈಗೂಡಿಸಿಕೊಂಡು, ಪ್ರಸ್ತುತ ಸಮಾಜಕ್ಕೆ ಪರಿಚಯಿಸುವ ಕೆಲಸವಾಗಬೇಕು ಎಂದರು.

ಮಹಾತ್ಮಾ ಗಾಂಧೀಜಿಯವರು ಭಾರತದಲ್ಲಿ ಅಹಿಂಸಾ ತತ್ವವನ್ನು ಶ್ರೇಷ್ಠವಾಗಿ ಪ್ರತಿಪಾದಿಸಿ, ಯಾವುದೇ ರೀತಿಯ ಹಿಂಸೆ ಬಳಸದೆ, ಶಾಂತಿಯುತ ಮಾರ್ಗದಿಂದ ಶ್ರೇಷ್ಠ ಸಾಧನೆಗಳನ್ನು ಸಾಧಿಸಬಹುದು ಎಂದು ತೋರಿಸಿಕೊಟ್ಟವರು. ಅವರ ಜ್ಞಾನ ಮತ್ತು ಜೀವನ ಮೌಲ್ಯಗಳ ಪ್ರತಿಬಿಂಬವಾಗಿ ಅಹಿಂಸೆ ಆಧಾರಿತ ಹೋರಾಟಗಳು ಜಗತ್ತಿನ ಹಲವಾರು
ದೇಶಗಳಲ್ಲಿ ಪ್ರೇರಣೆಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸoಸ್ಥೆಯ ನಿರ್ದೇಶಕ ಡಾ. ಸುರೇಶ್ ಕುಮಾರ್, ಮ್ಯಾನೇಜಿಂಗ್ ಟ್ರಸ್ಟಿ ಅಜಿತ್ ಬಳಗಾರ್,ಹಸ್ತಪ್ರತಿ ವಿಭಾಗದ ಅಧ್ಯಕ್ಷ ಹಜಾರಿ, ಪರೀಕ್ಷಾ ಕುಲಸಚಿವ ಲೋಕಕುಮಾರ್, ಡಾ.ಜ್ವಾಲಾ ಸುರೇಶ್, ವಿಶ್ವನಾಥ ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.

Leave a Reply

Your email address will not be published. Required fields are marked *

× How can I help you?