ಕೊರಟಗೆರೆ-ಮಹಾತ್ಮಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ರವರ ಜನ್ಮ ದಿನಾಚರಣೆಯನ್ನು ಶಾಲಾ ಮಕ್ಕಳೊಂದಿಗೆ ಒಂದು ಕಿ.ಮೀ. ಪಾದಯಾತ್ರೆ ಮಾಡಿ ಅವರ ತತ್ವ ಸಿದ್ದಾಂತಗಳನ್ನು ಯುವ ಜನತೆ ಪಾಲಿಸುವಂತೆ ಅರಿವು ಮೂಡಿಸುವ ಕೆಲಸವನ್ನು ಮಾಡಲಾಗಿದೆ ಎಂದು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಡ್ಲಹಳ್ಳಿ ಅಶ್ವತ್ಥನಾರಾಯಣ ತಿಳಿಸಿದರು.
ಅವರು ಕೊರಟಗೆರೆ ಪಟ್ಟಣದಲ್ಲಿ ಮಹಾತ್ಮಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ರವರ ಜನ್ಮ ದಿನಾಚರಣೆ ಅಂಗವಾಗಿ ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ಬೃಹತ್ ಎಲ್.ಇ.ಡಿ. ಪರದೆ ಯನ್ನು ಆಳವಡಿಸಿ ಬೆಂಗಳೂರಿನಲ್ಲಿ ನಡೆಯುವ ಮಹಾತ್ಮಗಾಂಧಿ ಜನ್ಮ ದಿನಾಚರಣೆಯ ನೇರ ಪ್ರಸಾರವನ್ನು ವೀಕ್ಷಿಸಿ ಮಾತನಾಡಿ, ರಾಜ್ಯ ಕೆ.ಪಿ.ಸಿ.ಸಿ ಹಾಗೂ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ಅದೇಶದಂತೆ ಇಂದು ಪಟ್ಟಣದ ರಾಜೀವ ಭವನದಲ್ಲಿ ಇಬ್ಬರೂ ಮಹಾತ್ಮರಿಗೂ ಪೂಜೆ ಸಲ್ಲಿಸಿ ಶಾಲಾ ಮಕ್ಕಳೊಂದಿಗೆ ಗಾಂಧೀಜಿಯ ತತ್ವಸಿದ್ದಾಂತಗಳನ್ನು ಘೋಷಣೆ ಕೊಗುತ್ತಾ ಒಂದು ಕಿ.ಮೀ ಪಾದಯಾತ್ರೆ ಮಾಡಿ ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿನ ಕೆ.ಪಿ.ಸಿ.ಸಿ ಕಛೇರಿಯ ಕಾರ್ಯಕ್ರಮದ ನೇರ ವೀಕ್ಷಣೆ ಮಾಡಿ ಮಾಹಾತ್ಮ ಗಾಂಧಿ ರವರ ತತ್ವಸಿದ್ದಾಂತರ ಪಾಲನೆ ಬಗ್ಗೆ ಪ್ರಮಾಣ ಸ್ವೀಕಾರವನ್ನು ಮಾಡಿದ್ದೇವೆ ಎಂದರು.
ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್ ಮಾತನಾಡಿ ಮಹಾತ್ಮ ಗಾಂಧಿಜೀ ರವರ ತತ್ವಸಿದ್ದಾಂತಗಳು ಪ್ರಪಂಚಕ್ಕೆ ಆದರಣೀಯವಾಗಿದೆ, ಲಾಲ್ ಬಹುದ್ದೋರ್ ಶಾಸ್ತ್ರಿ ರವರ ದೇಶಪ್ರೇಮ, ನಿಷ್ಟೆ, ಪ್ರಾಮಾಣಿಕತೆ, ಶೌರ್ಯಕ್ಕೆ ಪ್ರಪಂಚವೇ ಬೆರಗಾಗಿದೆ. ಇಂತಹ ಮಹಾತ್ಮರ ಜಯಂತಿಯನ್ನು ನಾವೆಲ್ಲರೂ ಒಟ್ಟಾಗಿ ಆಚರಿಸಿ ಸರ್ಕಾರದ ಆದೇಶದ ಸ್ವಚ್ಚ ಭಾರತ, ಸ್ವಚ್ಚ ಕರ್ನಾಟಕ, ಸ್ವಚ್ಚ ಪರಿಸರ ಸಂರಕ್ಷಣೆಗೆ ನಾವೆಲ್ಲರೂ ಪಾಲಿಸೋಣ ಎಂದರು.
ಪ.ಪಂ.ಅಧ್ಯಕ್ಷೆ ಅನಿತಾ ಮಾತನಾಡಿ ಮಹಾತ್ಮಗಾಂಧಿರವರಿಂದ ಭಾರತವು ಸ್ವತಂತ್ರವಾಯಿತು.ಅವರ ತತ್ವ, ಸಿದ್ದಾಂತ, ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕಿದೆ, ಹಿಂಸೆ, ಕೌರ್ಯ, ರಕ್ತಪಾತದಿಂದ ಗೆಲುವು ಸಾಧಿಸಲು ಸಾಧ್ಯವಿಲ್ಲ. ಆದರೆ ಶಾಂತಿ, ಶಿಸ್ತು, ಪ್ರೀತಿ, ಸಂಯಮದಿಂದ ಏನ್ನನಾದರೂ ಗೆಲ್ಲಬಹುದು ಎಂದು ಗಾಂಧೀಜಿ ಪ್ರಪಂಚಕ್ಕೆ ತೋರಿಸಿ ಕೊಟ್ಟಿದ್ದಾರೆ.ಅಂತಹ ಮಹಾತ್ಮರ ದಿನವನ್ನು ನಾವುಗಳು ಇಂದು ಅರ್ಥಪೂರ್ಣವಾಗಿ ಆಚರಿಸುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಪ.ಪಂ ಸದಸ್ಯ ಎ.ಡಿ.ಬಲರಾಮಯ್ಯ, ಮಂಜುಳಾ ಗೋವಿಂದರಾಜು, ಮಾಜಿ ಜಿ.ಪಂ.ಸದಸ್ಯ ಪ್ರಸನ್ನಕುಮಾರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಮ್ಮ, ಮುಖಂಡರುಗಳಾದ ಈಶ್ವರಯ್ಯ, ಕೆ.ಬಿ.ಲೋಕೇಶ್, ಜಯರಾಮ್, ವೆಂಕಟಪ್ಪ, ಟಿ.ರಾಮಯ್ಯ, ಆನಂದ್, ಅಲ್ಲಾಬಕಾಷ್, ರಫೀಕ್, ನರಸಿಂಹಯ್ಯ, ಅರವಿಂದ್, ವಿನಯ್‍ಕುಮಾರ್, ಕವಿತಾ, ಲಕ್ಷ್ಮಮ್ಮ, ಬೈರೇಶ್, ದೀಪಕ್, ನಾಗೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.
———————-ಶ್ರೀನಿವಾಸ್ ಕೊರಟಗೆರೆ