ಚಿಕ್ಕಮಗಳೂರು-ರಾಮೇಶ್ವರ ನಗರದ ಹಳ್ಳದ ರಾಮೇಶ್ವರ ದೇವಾಲಯದಲ್ಲಿ ಹತ್ತು ದಿನಗಳ ಕಾಲ ಜರುಗಲಿರುವ ನವರಾತ್ರಿ ಉತ್ಸವಕ್ಕೆ ಚಾಲನೆ ದೊರಕಿದೆ.
ಉತ್ಸವದ ಅಂಗವಾಗಿ ದೇವಾಲಯವನ್ನು ವಿಶೇಷವಾಗಿ ವಿದ್ಯುತ್ ದೀಪ, ತಳಿರು ತೋರಣಗಳಿಂದ ಅಲಂಕರಿಸಲಾಗಿದೆ.
ಅರ್ಚಕ ಸುನಿಲ್ ಹೆಬ್ಬಾರ್ ನೇತೃತ್ವದಲ್ಲಿ ದೇವಿಗೆ ಹೊಸ ಉಡುಗೆ ತೊಡಿಸಿ ವಿಶೇಷವಾಗಿ ಶೃಂಗರಿಸಲಾಯಿತು.ದಾನಿಗಳು ನೀಡಿದ ಬೆಳ್ಳಿ ಕವಚವನ್ನು ಪೂಜೆ ಸಲ್ಲಿಸಿ ದೇವಿಗೆ ಸಮರ್ಪಿಸಿ ತೊಡಿಸಲಾಯಿತು.
ಲೋಕೇಶ್ ಮುಂದಾಳತ್ವದಲ್ಲಿ ನಿರ್ಮಾಣಗೊಂಡ ಸತ್ಯನಾರಾಯಣ ಪೂಜಾ ಮಂಟಪವನ್ನು ಸಮರ್ಪಿಸಲಾಯಿತು.ಭಜನಾ ಮಂಡಳಿ ಸದಸ್ಯರಿಂದ ಲಲಿತಾ ಪಾರಾಯಣ ,ಭಜನೆ ನಡೆಯಿತು. ಮಹಾ ಮಂಗಳಾರತಿ ಪ್ರಸಾದ ವಿನಿಯೋಗಳೊಂದಿಗೆ ಮೊದಲ ದಿನದ ಕಾರ್ಯಕ್ರಮ ಸಂಪನ್ನಗೊoಡಿತು.
ಹಳ್ಳದ ರಾಮೇಶ್ವರ ದೇವಾಲಯ ಸಮಿತಿ, ರಾಮೇಶ್ವರ ನಗರ ಹಿತ ರಕ್ಷಣಾ ಸಮಿತಿ ಪದಾಧಿಕಾ ರಿಗಳು,ಸದಸ್ಯರು ಪೂಜೆಯ ಕಾರ್ಯಕ್ರಮಗಳಿಗೆ ಸಹಕಾರ ನೀಡಿದರು.
——————-ಸುರೇಶ್