ನಾಗಮಂಗಲ:ಯಾವುದೇ ಕಾಮಗಾರಿಗಳು ಕಳಪೆ ಮಟ್ಟದಲ್ಲಿ ನಡೆದರೆ ನಾನು ಗುತ್ತಿಗೆ ದಾರರನ್ನು ಕೇಳುವುದಿಲ್ಲ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು ಅಮಾನತ್ತು ಮಾಡಲಾಗುವುದು ಎಂದು ಕೃಷಿ ಸಚಿವ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚೆಲುವರಾಯಸ್ವಾಮಿ ಅವರು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಹೋಬಳಿಯ ದೊಡ್ಡ ಜಟಕ ಕೆರೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ನಂತರ ಮಾತನಾಡಿದರು.
ಗುತ್ತಿಗೆದಾರ ಕಾಮಗಾರಿಯನ್ನು ನಿಯಮಾವಳಿಗಳ ಪ್ರಕಾರ ಮಾಡಿದ್ದಾನೆಯೋ ಇಲ್ಲವೋ ಎಂಬುದನ್ನು ನೀರೀಕ್ಷಣೆ ಮಾಡಬೇಕ್ಕಾದ್ದು ಸಂಬಂಧಪಟ್ಟ ಅಧಿಕಾರಿಗಳ ಕರ್ತವ್ಯವಾ ಗಿರುತ್ತದೆ.ಸರಕಾರ ಸಾರ್ವಜನಿಕರು ಕಟ್ಟುವ ತೆರಿಗೆ ಹಣದಲ್ಲಿ ಅವರಿಗೆ ಸಂಬಳವನ್ನು ಅದೇ ಕಾರಣಕ್ಕೆ ನೀಡುತ್ತಿರುತ್ತದೆ.ಇದನ್ನು ಅರ್ಥೈಸಿಕೊಂಡು ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕು ಎಂದು ವರು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಚಿಕ್ಕಜಟಕ ಮತ್ತು ಕುಪ್ಪೆ ಗ್ರಾಮಸ್ಥರು ಉತ್ತಮವಾದ ರಸ್ತೆ ಇಲ್ಲ ದಯವಿಟ್ಟು ನಮಗೆ ರಸ್ತೆ ನಿರ್ಮಿಸಿಕೊಡುವಂತೆ ಸಚಿವರಿಗೆ ಮನವಿ ಮಾಡಿಕೊಂಡರು.ಇದಕ್ಕೆ ಪೂರಕವಾಗಿ ಸ್ಪಂದಿಸಿದ ಚೆಲುವರಾಯಸ್ವಾಮಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ತಾವರೆಕೆರೆ ಮೂಡಲಪ್ಪ, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಆರಣಿ ರವಿ,ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಶಂಕರ್,ನಾಗಮಂಗಲ ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ನಿರ್ಮಲೇಶ್, ಸಹಾಯಕ ಅಭಿಯಂತರ ವಿದ್ಯಾದರ್ಶನ್,ದೊಡ್ಡಜಟಕ ಗ್ರಾಮದ ಪ್ರಕಾಶ್, ಗುತ್ತಿಗೆದಾರ ತಿಬ್ಬನಹಳ್ಳಿ ರಮೇಶ್,ಭೀಮನಹಳ್ಳಿ ನಾಗರಾಜ್ ಸೇರಿದಂತೆ ಚಿಕ್ಕಜಟಕ, ಕುಪ್ಪೆ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು
—— ಬಿ.ಹೆಚ್.ರವಿ