ಕೊರಟಗೆರೆ-ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ವೈಭವದ ನವರಾತ್ರಿ ಉತ್ಸವ-9 ದಿನಗಳ ಕಾಲ ವಿಶೇಷ ಅಲಂಕಾರ ಮತ್ತು ಪೂಜೆ-ಎಂ.ಜಿ.ಸುಧೀರ್ ಮಾಹಿತಿ

ಕೊರಟಗೆರೆ-ತಾಲ್ಲೂಕಿನ ಆರ್ಯವೈಶ್ಯ ಮಂಡಳಿ ಮತ್ತು ಕನ್ನಿಕಾ ವಿದ್ಯಾ ಪೀಠ ಹಾಗೂ ಅದರ ಅಂಗಸಂಸ್ಥೆಗಳ ಸಹಯೋಗದಲ್ಲಿ ಪಟ್ಟಣದ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ವೈಭವದ ನವರಾತ್ರಿ ಉತ್ಸವದ ಅಂಗವಾಗಿ 9 ದಿನಗಳ ಕಾಲ ವಿಶೇಷ ಅಲಂಕಾರ ಮತ್ತು ಪೂಜೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕನ್ನಿಕಾ ವಿದ್ಯಾ ಪೀಠದ ಅಧ್ಯಕ್ಷ ಎಂ.ಜಿ.ಸುಧೀರ್ ತಿಳಿಸಿದರು.

ಅವರು ಪಟ್ಟಣದ ಕನ್ನಿಕಾ ಪರಮೇಶ್ವರಿ ದೇವಾಲಯ ಸಭಾಗಂಣದಲ್ಲಿ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ,ತುಮಕೂರು ಜಿಲ್ಲೆಯಲ್ಲಿ ಜನಾಂಗದಿಂದ ಪ್ರಥಮವಾಗಿ ಕೊರಟಗೆರೆ ತಾಲ್ಲೂಕು ಆರ್ಯವೈಶ್ಯ ಮಂಡಳಿಯಿಂದ ಕನ್ನಿಕಾ ಪರಮೇಶ್ವರಿ ಅಮ್ಮನವರಿಗೆ 9 ದಿನಗಳ ಕಾಲ ನವದುರ್ಗೆಯರ ಅಲಂಕಾರವನ್ನು ತಮಿಳುನಾಡಿನ ಸೇಲಂ ನಗರದ ಪ್ರಸಿದ್ದ ದೇವಿ ಅಲಂಕಾರದ ತಂಡದವರಿಂದ ನಡೆಸಲಾಗುತ್ತದೆ.

ನವರಾತ್ರಿಯ ಆ.3 ರಿಂದ ಆ.12 ರವರೆಗೆ ಶೈಲಪುತ್ರಿ, ಬಹ್ಮಚಾರಣ , ಚಂದ್ರಘಂಟಾ, ಕೊಷ್ಮಾಂಡ, ಸ್ಕಂದಮಾತಾ, ಕಾತ್ಯಾಯಿನಿ, ಕಾಲರಾತ್ರಿ, ಮಹಾಗೌರಿ, ಸಿದ್ದಧಾತ್ರಿ, ಅಲಂಕಾರಗಳನ್ನು ಕನ್ನಿಕಾ ಪರಮೇಶ್ವರಿ ಅಮ್ಮನವರಿಗೆ ಮಾಡಲಾಗುವುದು.

ಸಾರ್ವಜನಿಕರಿಗೆ ನವರಾತ್ರಿಯ 9 ದಿನಗಳ ಕಾಲ ಸಂಜೆ 7 ಗಂಟೆಯಿಂದ 8-30 ರವರಗೆ ದೇವಿಯ ದರ್ಶನವಿದ್ದು 8-30 ಕ್ಕೆ ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗವಿರುತ್ತದೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕೋರಿದರು.

ಮಂಡಳಿ ನಿರ್ದೇಶಕ ಚಿನ್ನವೆಂಕಟ ಶೆಟ್ಟಿ ಮಾತನಾಡಿ ನವರಾತ್ರಿ ಪೂಜೆಯ 9 ದಿನಗಳಲ್ಲಿ ಆ.10 ರಂದು ವಾಸವಿ ಜನಾಂಗದ ಮಹಾ ಸ್ವಾಮೀಜಿಗಳಾದ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಗಳು ಆಗಮಿಸಲಿದ್ದು ಅಂದು ಸಂಜೆ 6 ಗಂಟೆಗೆ ಪ್ರವಚನ ನೀಡಲಿದ್ದಾರೆ. ರಾಜ್ಯ ಸರ್ಕಾರದ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ರವರು 9 ದಿನಗಳಲ್ಲಿ ಒಂದು ದಿನ ಆಗಮಿಸಿ ದೇವಿಗೆ ವಿಶೇಷ ಕಾರ್ಯಕ್ರಮ ಪೂಜೆ ಸಲ್ಲಿಸಲ್ಲಿದ್ದಾರೆ.ಪ್ರತಿ ದಿನವು ವಾಸವಿ ಮಹಿಳಾ ಮಂಡಲಿಯಿಂದ ಸಂಜೆ 7 ರಿಂದ 8 ಗಂಟೆ ವರೆಗೂ ಭಜನೆ ಮತ್ತು ಸಾಂಸ್ಕೃತಿಕ  ಕಾರ್ಯಕ್ರಮಗಳು ನಡೆಯಲಿದ್ದು ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಪಟ್ಟಣ ಎಲ್ಲಾ ವಾಸವಿ ಬಂದುಗಳು ಕೈಜೋಡಿಸಿದ್ದು ಸಾರ್ವಜನಿಕರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ನವರಾತ್ರಿ ಉತ್ಸವದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಪತ್ರಿಕಾ ಗೋಷ್ಠಿಯಲ್ಲಿ ತಾಲೂಕು ಆರ್ಯವೈಶ್ಯ ಮಂಡಲಿ ಅಧ್ಯಕ್ಷ ಹೆಚ್.ಜಿ. ಕೃಷ್ಣಯ್ಯ ಶೆಟ್ಟಿ , ಕಾರ್ಯದರ್ಶಿ ಶ್ರೀನಿವಾಸ್, ಅರ್ಯವೈಶ್ಯ ಮಹಾಸಭಾ ಜಿಲ್ಲಾ ನಿರ್ದೇಶಕ ಹೆಚ್.ಜಿ.ನಾಗೇಂದ್ರ ಬಾಬು, ಕನ್ನಿಕಾ ವಿದ್ಯಾಪೀಠದ ಕಾರ್ಯದರ್ಶಿ ಕೆ.ಎಸ್.ವಿ.ರಘು,  ನಿರ್ದೇಶಕರುಗಳಾದ ಡಾ,ವಿನಯ್, ಡಾ,ಹರೀಶ್,  ಪ್ರಶಾಂತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

———————————-ನರಸಿಂಹಯ್ಯ

Leave a Reply

Your email address will not be published. Required fields are marked *

× How can I help you?