ನಾಗಮಂಗಲ:ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜೊತೆ ಅಭಿನಾಭಾವ ಸಂಬಂಧ ಹೊಂದಿರುವ ಏಕೈಕ ಸಂಸ್ಥೆಯೆಂದರೆ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಹಾಗೂ ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ, ಮಂಡ್ಯರವರ ವತಿಯಿಂದ ಗಾಂಧಿ ಜಯಂತಿ ಸಂಭ್ರಮಾಚರಣೆ ಪ್ರಯುಕ್ತ ಆಯೋಜಿಸಲಾಗಿದ್ದ ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕಾಗಿ ಗಾಂಧೀಸ್ಮೃತಿ ಮತ್ತು ಪಾನಮುಕ್ತರ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ರಾಜ್ಯಾದ್ಯಂತ ಬಡ ಹಾಗೂ ಮಧ್ಯಮ ವರ್ಗಗಳ ಕುಟುಂಬಗಳಿಗೆ ಆಧಾರವಾಗಿದೆ.ಪ್ರತೀ ತಾಲೂಕಿನಲ್ಲಿ ಧರ್ಮಸ್ಥಳ ಟ್ರಸ್ಟ್ ನವರು ಬಹಳ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಸಂಸ್ಥೆಯೊಂದಿಗೆ ನಮ್ಮ ಸರ್ಕಾರ ರೈತರಿಗಾಗಿ ಸಣ್ಣ ಹಿಡುವಳಿದಾರರು ಹೈಟೆಕ್ ಕಟಾವ್ ಯಂತ್ರಗಳಿಗೆ ಹಾಗೂ ಅನೇಕ ಯೋಜನೆಗಳಿಗೆ ಸಹಕರಿಸಿದೆ. ರೈತರು ಮಧ್ಯಪಾನ ಮುಕ್ತರಾಗಿ ಕುಟುಂಬದೊಂದಿಗೆ ಸಂತೋಷವಾಗಿರಬೇಕು ಎಂದು ತಿಳಿಸಿದರು.
ನಂತರ ಮಾತನಾಡಿದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ವೆಂಟ್ ಪಾಯಸ್ ಬೆಳ್ತಂಗಡಿ, ಭೂಲೋಕದ ಸ್ವರ್ಗ ಎಂದಾದರೆ ಅದು ಶ್ರೀ ಕ್ಷೇತ್ರ ಧರ್ಮಸ್ಥಳ ಮಾತ್ರ ನಾನೊಬ್ಬ ಕ್ರೈಸ್ತನಾಗಿ ತುಂಬು ಮನಸ್ಸಿನಿಂದ ಒಪ್ಪಿಕೊಳ್ಳುತ್ತೇನೆ. ಮಧ್ಯಪಾನ ಕೇವಲ ಕುಟುಂಬದ ಸಮಸ್ಯೆಯಲ್ಲಾ ಇದೊಂದು ಮನುಕುಲದ ದೊಡ್ಡ ಸಮಸ್ಯೆ. ಮಧ್ಯೆಸೇವನೆಯಲ್ಲಿ ಜಗತ್ತಿಗೆ ಎರಡನೇ ಸ್ಥಾನ ಭಾರತದ್ದಾಗಿದೆ. ನಮ್ಮ ರಾಜ್ಯದಲ್ಲಿಯೇ 1700 ಕ್ಕೂ ಹೆಚ್ಚು ವೈನ್ ಶಾಪ್ ಗಳಿವೆ.ದೇಶದಲ್ಲಿ ಪಾನಮುಕ್ತ ರಾಜ್ಯಗಳು ಬೆರಳೆಣಿಕೆ
ಯಷ್ಟಿವೆ. ಕುಡಿತದಿಂದ ದೊಡ್ಡ ಕುಟುಂಬಗಳೂ ಬೀದಿಗೆ ಬಂದ ಉದಾಹರಣೆಗಳು ಸಾಕಷ್ಟಿವೆ. ಯಾವ ಧರ್ಮಗಳೂ ಸಹ ಮದ್ಯಪಾನವನ್ನು ಒಪ್ಪುವುದಿಲ್ಲ. ಮದ್ಯಪಾನವನ್ನು ಮಾಡುವವರು ಸೈತಾನ್ ಗಳು ಮಧ್ಯಪಾನ ಹರಾಮ್ ಎನ್ನುತ್ತದೆ ಇಸ್ಲಾಂ ಧರ್ಮ.
ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯಿಂದ ರಾಜ್ಯದಲ್ಲಿ 1800 ಮಧ್ಯಪಾನ ಬಿಡಿಸುವ ಶಿಬಿರಗಳು ನಡೆದಿದ್ದು 15 ಲಕ್ಷಕ್ಕೂ ಹೆಚ್ಚು ಮದ್ಯವ್ಯಸನಿಗಳು ಪಾನಮುಕ್ತರಾಗಿದ್ದಾರೆ ಎಂದು ಶ್ಲಾಘಿಸಿದರು.
ನಂತರ ಮಾತನಾಡಿದ ಜಿಲ್ಲಾ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಹನುಮಂತಯ್ಯ ಕೊಣನೂರು, ಇಲ್ಲಿಯವರೆಗೆ ಜಿಲ್ಲೆಯಲ್ಲಿ 30 ಶಿಬಿರಗಳನ್ನು ನೆಡೆಸಲಾಗಿದೆ.ಈ ಶಿಬಿರದಿಂದ ಸಾವಿರಾರು ಮದ್ಯವ್ಯಸನಿಗಳು ವ್ಯಸನ ಮುಕ್ತರಾಗಿದ್ದಾರೆ.
ಶ್ರೀಕ್ಷೇತ್ರದ ಬಗ್ಗೆ ಕೆಲವು ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ.ಅಂತಹವರಿಗೆ ತಕ್ಕ ಉತ್ತರ ನೀಡಲು ನಾವೆಲ್ಲ ಸಜ್ಜಾಗಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಈ ಸೌಮ್ಯ ಕೇಶವ ದೇವಸ್ಥಾನ ಮುಂಭಾಗದಿಂದ ನೂರಾರು ಮಹಿಳೆಯರು ಪೂರ್ಣಕುಂಭದೊಂದಿಗೆ ಪ್ರಮುಖ ರಸ್ತೆಗಳಲ್ಲಿ ಮಧ್ಯಪಾನ ವಿರೋಧ ಭಿತ್ತಿಪತ್ರದೊಂದಿಗೆ ಜಾಥಾ ನಡೆಸಿದರು.
ಈ ಸಂದರ್ಭದಲ್ಲಿ ಪ್ರಾದೇಶಿಕ ನಿರ್ದೇಶಕರು, ಜನಜಾಗೃತಿ ವೇದಿಕೆ ಸದಸ್ಯ ಮಂಜೇಶ್ ಚನ್ನಾಪುರ,ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ತಾಲ್ಲೂಕು ಯೋಜನಾಧಿಕಾರಿ ದಿವಾಕರ್ ,ಶ್ರೀ ಕ್ಷೇ. ಧ. ಗ್ರಾ. ಯೋಜನೆ ಬಿ.ಸಿ.ಟ್ರಸ್ಟ್ ಪ್ರಾದೇಶಿಕ ಕಛೇರಿ, ಮೈಸೂರಿನ ರಾಮಸ್ವಾಮಿ, ಪ್ರೋ. ಜಿ.ಬಿ ಶಿವರಾಜು ನಿರ್ದೇಶಕರು, ಗಾಂಧಿ ಭವನ, ಜೆ.ಆರ್. ಗೌರೀಶ್ ಸಮಾಜ ಸೇವಕರು, ಎಮ್ ಎಸ್ ಶ್ರೀಕಂಠಸ್ವಾಮಿ ಉಪಾಧ್ಯಕ್ಷರು, ಜಿಲ್ಲಾ ಜನಜಾಗೃತಿ ವೇದಿಕೆ ಮಂಡ್ಯ, ಚಂದ್ರು ಕೋಶಾಧಿಕಾರಿಯವರುಸೇರಿದಂತೆ ನೂರಾರು ಮಹಿಳೆಯರು ಹಾಜರಿದ್ದರು.
————————-ರವಿ ಬಿ ಹೆಚ್