ಹೆಚ್.ಡಿ ಕೋಟೆ-ಬೇಕರಿ ತಿಂಡಿಗಳು-ಇತರ ಆಹಾರ ಪದಾರ್ಥಗಳನ್ನು ತಯಾರಿಸುವ ಮಳಿಗೆಗಳ ಮೇಲೆ ದಿಢೀರ್ ದಾಳಿ-ಲೈಸೆನ್ಸ್ ಪಡೆಯಲು ಸೂಚನೆ-ನೋಟಿಸ್ ಜಾರಿ

ಹೆಚ್.ಡಿ ಕೋಟೆ-ತಾಲೂಕು ಆಹಾರ ಸುರಕ್ಷತಾ ಅಧಿಕಾರಿಗಳಾದ ಟಿ ರವಿಕುಮಾರ್ ಪಟ್ಟಣದ ಹಲವಾರು ಬೇಕರಿಗಳು ಹಾಗು ಆಹಾರ ತಿಂಡಿಗಳನ್ನು ತಯಾರಿಸುವ ಮಳಿಗೆಗಳ ಮೇಲೆ ದಿಢೀರ್ ದಾಳಿ ನಡೆಸಿದರು.

ದಾಳಿ ನಡೆಸಿದ ಎಲ್ಲ ಕಡೆಗಳಲ್ಲೂ ಎಫ್.ಎಸ್.ಎಸ್.ಎ.ಐ ನ ಲೈಸೆನ್ಸ್ ಪಡೆಯದೇ ಆಹಾರ ಪದಾರ್ಥಗಳನ್ನು ತಯಾರಿಸುತ್ತಿರುವುದು ಕಂಡು ಬಂದ ಕಾರಣ ಅವರೆಲ್ಲರಿಗೂ ನೋಟಿಸ್ ನೀಡಲಾಯಿತು.

ಮಾಲೀಕರು ಮತ್ತು ವ್ಯಾಪಾರಸ್ಥರು ಗ್ರಾಹಕರಿಗೆ ಉತ್ತಮವಾದ ಮತ್ತು ಶುದ್ಧವಾದ ಒಳ್ಳೆ ಗುಣಮಟ್ಟದ ತಿಂಡಿ ಪದಾರ್ಥ ಮತ್ತು ಆಹಾರವನ್ನು ನೀಡಬೇಕು.ಯಾವುದೇ ಕಾರಣಕ್ಕೂ ಹಳೆಯ ತಿಂಡಿ ಪದಾರ್ಥಗಳು,ಆಹಾರವನ್ನು ನೀಡಬಾರದು.ತಿಂಡಿ ಮತ್ತು ಆಹಾರ ಪದಾರ್ಥಗಳನ್ನು ಮಾಡಿದ ನಂತರ ಅವುಗಳನ್ನು ಪ್ಲಾಸ್ಟಿಕ್ ಕವರ್ ನಿಂದ ಮುಚ್ಚಿಡಬೇಕು.ನೊಣ ಮತ್ತು ಇನ್ನಿತರ ಕೀಟಗಳು ಕೂರದ ಹಾಗೆ ನೋಡಿಕೊಳ್ಳಬೇಕು.ಘನತ್ಯಾಜ್ಯಗಳನ್ನು ಪುರಸಭೆಯವರು ನೇಮಿಸಿರುವ ವಾಹನಕ್ಕೆ ಮಾತ್ರ ನೀಡಬೇಕು.ರಸ್ತೆ,ಬದಿ,ಕೆರೆ,ಕಟ್ಟೆ,ನದಿಗಳಲ್ಲಿ ಬಿಸಾಡಬಾರದು ಎಂದು ಸೂಚನೆ ನೀಡಲಾಯಿತು.

ಹೆಚ್.ಡಿ. ಕೋಟೆ ಮತ್ತು ಸರಗೂರು ತಾಲ್ಲೂಕಿನ ಎಲ್ಲಾ ಹೋಟೆಲ್ ಮತ್ತು ಬೇಕರಿ ಮಾಲೀಕರು,ಮತ್ತು ವ್ಯಾಪಾರಸ್ಥರು 1ವಾರದ ಒಳಗೆ ಕಡ್ಡಾಯವಾಗಿ ಆಹಾರ ಪರವಾನೆ ಲೈಸೆನ್ಸ್ ಪಡೆಯಬೇಕು.ಇಲ್ಲದಿದ್ದರೆ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಸ್ಥಳದಲ್ಲೇ ಸೂಚಿಸಿದರು.

ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರಾದ ರವಿರಾಜ್ ಪ್ರತಾಪ್,ಸಿದ್ದರಾಜು ,ಇನ್ನಿತರರು ಹಾಜರಿದ್ದರು.

—————-ವಿನೋದ್ ರಾವ್,ಎಚ್ ಡಿ ಕೋಟೆ

Leave a Reply

Your email address will not be published. Required fields are marked *

× How can I help you?