ಮೈಸೂರು-ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸುವರ್ಣ ಸಂಭ್ರಮ ಹಾಗೂ 11ನೇ ರಾಜ್ಯಮಟ್ಟದ ವಿಪ್ರ ಸಮ್ಮೇಳನವು ರಾಜ್ಯಾಧ್ಯಕ್ಷರಾದ ಅಶೋಕ ಹಾರನಹಳ್ಳಿಯವರ ನೇತೃತ್ವದಲ್ಲಿ 2025ರ ಜನವರಿ18 ಹಾಗೂ 19ನೇ ತಾರೀಖಿನಂದು ಬೆಂಗಳೂರಿನಲ್ಲಿ ಜರುಗಲಿದೆ ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘ ಅಧ್ಯಕ್ಷರಾದ ಡಿ.ಟಿ ಪ್ರಕಾಶ್ ತಿಳಿಸಿದರು.
ಇದಕ್ಕೆ ಪೂರ್ವಭಾವಿಯಾಗಿ ನಗರದಲ್ಲಿ ಸೋಮವಾರದಂದು ಬೆಳಗ್ಗೆ 11:00ಗೆ ಕೃಷ್ಣಮೂರ್ತಿಪುರಂ ಶ್ರೀರಾಮಮಂದಿರದಲ್ಲಿ ಸಭೆ ಕರೆಯಲಾಗಿದೆ.ಆ ಸಭೆಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯಾಧ್ಯಕ್ಷರಾದ ಅಶೋಕ್ ಹಾರನಹಳ್ಳಿಯವರು ಆಗಮಿಸಿ ಸುವರ್ಣ ಸಂಭ್ರಮ ಹಾಗೂ ವಿಪ್ರ ಸಮ್ಮೇಳನದ ಪೂರ್ಣ ವಿವರಗಳನ್ನು ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಮೈಸೂರು ಜಿಲ್ಲೆಯ ಎಲ್ಲಾ ಬ್ರಾಹ್ಮಣ ಸಂಘಟನೆಗಳ ಪದಾಧಿಕಾರಿಗಳು ಸಭೆಗೆ ಆಗಮಿಸಬೇಕೆಂದು ಮನವಿ ಮಾಡಿದರು
ಪತ್ರಿಕಾಗೋಷ್ಟಿಯಲ್ಲಿ ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ. ಟಿ. ಪ್ರಕಾಶ್, ಮುಖಂಡರಾದ ಎಂ ಆರ್,ಬಾಲಕೃಷ್ಣ, ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷರಾದ ಕೆ ಆರ್ ಸತ್ಯನಾರಾಯಣ್, ಬ್ರಾಹ್ಮಣ ಸಂಘದ ಗ್ರಾಮಾಂತರ ಅಧ್ಯಕ್ಷರಾದ ಗೋಪಾಲ ರಾವ್, ಡಾ. ಲಕ್ಷ್ಮಿ ,ರಾಕೇಶ್ ಭಟ್, ಕೆ.ಎಂ. ನಿಶಾಂತ್, ಅಪೂರ್ವ ಸುರೇಶ್, ಚಕ್ರಪಾಣಿ, ಸುಚಿಂದ್ರ, ಉಪಸ್ಥಿತರಿದ್ದರು.
——————--ಮಧುಕುಮಾರ್