ಕೊರಟಗೆರೆ-ವೇದ-ಆಗಮ-ಜ್ಯೋತೀಷ್ಯ ಅರಿಯಲು ಪ್ರತಿಯೊಬ್ಬ ವಿದ್ಯಾರ್ಥಿಯು ಸಂಸ್ಕೃತ ಭಾಷೆ ಅಭ್ಯಾಸ ಮಾಡುವ ಮೂಲಕ ಜ್ಞಾನ ಹೆಚ್ಚಿಸಿಕೊಳ್ಳಬೇಕು-ಉಮಾತ್ತಾರ

ಕೊರಟಗೆರೆ-ಮಾನವನ ಸರ್ವಾಂಗೀಣ ಅಭಿವೃದ್ದಿಗೆ ವೇದ,ಆಗಮ,ಜ್ಯೋತೀಷ್ಯ,ಆಯುರ್ವೇದ ಗ್ರಂಥಗಳು,ವ್ಯಾಕರಣ ಶಾಸ್ತ್ರ ಸಂಸ್ಕೃತ ಭಾಷೆಯ ನಿಘಂಟಿನಲ್ಲಿದ್ದು ಈ ಎಲ್ಲಾ ಜ್ಞಾನ ಅರಿಯಲು ಪ್ರತಿಯೊಬ್ಬ ವಿದ್ಯಾರ್ಥಿಯು ಸಂಸ್ಕೃತ ಭಾಷೆ ಅಭ್ಯಾಸ ಮಾಡುವ ಮೂಲಕ ಜ್ಞಾನ ಹೆಚ್ಚಿಸಿಕೊಳ್ಳ ಬೇಕೆಂದು ಸಾಹಿತಿ ಉಮಾತ್ತಾರ ತಿಳಿಸಿದರು.

ಅವರು ಕೊರಟಗೆರೆ ತಾಲೂಕಿನ ಸಿದ್ದರಬೆಟ್ಟದಲ್ಲಿ ಶ್ರೀ ವೀರಭದ್ರಶಿವಾಚಾರ್ಯಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಶ್ರೀ ಗಂಗಾಧರೇಶ್ವರಸ್ವಾಮಿ ಸಂಸ್ಕೃತ ಪಾಠಶಾಲೆಯಲ್ಲಿ ಏರ್ಪಡಿಸಿದ್ದ ಅಸ್ಮಾಕಂ ಸಂಸ್ಕೃತಮ್ ಸರಣ  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಂಸ್ಕೃತ ಭಾಷೆ ಪ್ರಾಚೀನ ಬಾರತೀಯ ಸಂಸ್ಕೃತಿಯ ಆಧಾರಭಾಷೆಯಾಗಿದ್ದು, ಸಂಸ್ಕ್ರತ ಭಾಷೆಯನ್ನು ಎಲ್ಲಾ ಭಾಷೆಗಳ ಜನನಿ ಎಂದು ಕರೆಯುತ್ತಾರೆ.ಯಾರು ಸಂಸ್ಕೃತ ಭಾಷೆಯನ್ನು ಅಧ್ಯಯನ ಮಾಡುತ್ತಾರೋ ಅವರಿಗೆ ಅತ್ಯಂತ ಸುಲಭವಾಗಿ ಕನ್ನಡ ಸೇರಿದಂತೆ ಹಲವರು ಭಾರತೀಯ ಭಾಷೆಗಳನ್ನು ಅರ್ಥವಾಗುತ್ತದೆ.ಮಕ್ಕಳಲ್ಲಿ ಬೌದಿಕಶಕ್ತಿ ಮಾನಸಿಕಶಕ್ತಿ ಹೆಚ್ಚಾಗಬೇಕಾದರೆ ವಿದ್ಯಾರ್ಥಿಗಳು ಸಂಸ್ಕೃತ ಭಾಷೆಯನ್ನು ಕಲಿಯ ಬೇಕು. ಈ ನಿಟ್ಟಿನಲ್ಲಿ ಸಂಸ್ಕೃತ ಭಾಷೆ ಪ್ರೇರಣೆ ಬರಲಿ ಎನ್ನುವ ಅಲೋಚನೆಯಿಂದ ಆಸ್ಮಾಕಂ ಸಂಸ್ಕೃತಮ್ ಎಂಬ ಅಭಿಯೋಚನೆ ನಡೆಸುತ್ತಿರುವ ಉದ್ದೇಶವಾಗಿದೆ ಎಂದರು.

ಶ್ರೀ ಗಂಗಾಧರೇಶ್ವರಸ್ವಾಮಿ ಸಂಸ್ಕೃತ ಪಾಠಶಾಲೆ ಮುಖ್ಯ ಶಿಕ್ಷಕ ಎನ್,ಸಿ.ಚಂದ್ರಶೇಖರಯ್ಯ ಮಾತನಾಡಿ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವಂತಹ ಸಂಸ್ಕೃತ ನಿರ್ದೇಶನಾಲಯದ ವತಿಯಿಂದ ಅಸ್ಮಾಕಂ ಸಂಸ್ಕೃತಮ್ ಎಂಬ ಕಾರ್ಯಕ್ರಮದ ಮೂಲಕ ಸಾಮಾನ್ಯ ಜನರಲ್ಲಿಯೂ ಕೂಡ ಸಂಸ್ಕೃತ ಭಾಷೆಯ ಬಗ್ಗೆ ಅರಿವನ್ನು ಮೂಡಿಸುವ ಉದ್ದೇಶವಾಗಿದೆ.ಪ್ರತಿ ಯೊಬ್ಬರೂ ಕೂಡ ಸಂಸ್ಕೃತ ಭಾಷೆಯನ್ನು ಕಲಿಯಬೇಕು.ಅದರಲ್ಲಿರುವ ಜ್ಞಾನವನ್ನು ಪಡೆದುಕೊಳ್ಳವ ಮೂಲಕ ಮಕ್ಕಳಲ್ಲಿ ಬುದ್ದಿಶಕ್ತಿ ಹೆಚ್ಚುತ್ತದೆ. ಭಾಷೆ ಪ್ರಭುತ್ವ ಬೆಳೆದು ಪ್ರವರ್ದಮಾನಕ್ಕೆ ಬರುತ್ತಾರೆ. ನಮ್ಮ ಭಾರತದಲ್ಲಿ ಕೆಲವು ಸ್ವಾಯತ್ತೆ ಸಂಸ್ಥೆಗಳು ದ್ಯೇಯ ವಾಕ್ಯಗಳು ಸಂಸ್ಕೃತದಲ್ಲಿಯೇ ಬಳಕೆಯಲ್ಲಿರುವುದು ಕಾಣಬುದಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಅಭಿವೃದ್ದಿ ಅಧಿಕಾರಿ ಮಹೇಶ್‍ಕುಮಾರ್, ಗ್ರಂಧಪಾಲಕರಾದ ತಿಮ್ಮರಾಜಮ್ಮ, ಶಿಕ್ಷಕ ಶ್ರೀನಿವಾಸ್ ಸಂಸ್ಕೃತ ಭಾಷೆಯ ಮಹತ್ವ, ಅದರ ವ್ಯಾಕರಣ, ಭಾಷೆಯ ಶುದ್ದಿ ಮತ್ತು ಮಕ್ಕಳಲ್ಲಿ ಸಂಸ್ಕೃತ ಎಂದರೇನು ಅದು ಎಷ್ಟರ ಮಟ್ಟಿಗೆ ನಮ್ಮ ಜೀವನಕ್ಕೆ ಅವಶ್ಯಕ, ಸಂಸ್ಕೃತ ಕಲಿತರೆ ಸಂಸ್ಕಾರ ಬರುತ್ತದೆ ಎನ್ನುವುದರ  ಬಗ್ಗೆ ಮಾತನಾಡಿದರೆ ಈ ಸಂದರ್ಭದಲ್ಲಿ ಶಾಲೆಯ ಭೋದಕ ಮತ್ತು ಭೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

——————--ಶಿವಕುಮಾರ್ ಕೊರಟಗೆರೆ

Leave a Reply

Your email address will not be published. Required fields are marked *

× How can I help you?