ಮಧುಗಿರಿ-ಮಧುಗಿರಿ-ತುಮಕೂರು ಮಾರ್ಗದಲ್ಲಿ ನಿತ್ಯ ಸಂಚರಿಸುವ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಬಸ್ ಗಳು ಲಭ್ಯವಾಗದ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಪರಿಷತ್ ಸದಸ್ಯರಾದ ರಾಜೇಂದ್ರ ಇಂದು ಖುದ್ದು ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ಬಸ್ ನಿಲ್ದಾಣದ ಅಧಿಕಾರಿಗಳು ಹಾಗು ಪ್ರಯಾಣಿಕರೊಂದಿಗೂ ಮಾಹಿತಿ ಪಡೆದ ಅವರು ಸಾರಿಗೆ ಸಚಿವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷರಾದ ಲಾಲಪೇಟೆ ಮಂಜುನಾಥ್,ಮಧುಗಿರಿ ಪ್ರಭಾರ ಡಿಪೋ ವ್ಯವಸ್ಥಾಪಕರಾದ ಮಲ್ಲೇಶಪ್ಪ,ಸಂಚಾರ ನಿಯಂತ್ರಕರಾದ ನರಸಿಂಹ ಮೂರ್ತಿ, ಪುರಸಭೆ ಸದಸ್ಯರುಗಳು ಉಪಸ್ಥಿತರಿದ್ದರು.
———ಈರಣ್ಣ ಮಧುಗಿರಿ