ಅರಕಲಗೂಡು-ಎ ಮಂಜುರನ್ನು’ಲೋ,ಫರ್’ಎಂದ ‘ಕೈ’ಮುಖಂಡ ಶ್ರೀಧರಗೌಡ- ತಾಲೂಕಿನಾದ್ಯಂತ ವ್ಯಾಪಕ ಜನಾಕ್ರೋಶ-ಎ ಮಂಜುರವರ ಕ್ಷಮೆ ಕೇಳಲು ಆಗ್ರಹ

ಅರಕಲಗೂಡು-ಹಲವು ದಿನಗಳಿಂದ ಶಾಸಕ ಈ ಮಂಜು ಹಾಗು ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಶ್ರೀಧರಗೌಡರ ನಡುವೆ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಬಹಿರಂಗಗೊಂಡಿದೆ.

ಕ್ಷುಲಕ ಕಾರಣಕ್ಕೆ ಶ್ರೀಧರ್ ಗೌಡ ಶಾಸಕ ಮಂಜುರವರನ್ನು ಏಕವಚನದಲ್ಲಿ ಸಂಭೋದಿಸಿದ್ದಲ್ಲದೆ ಲೋ,ಫರ್ ಎಂದು ಬೈದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ನಡೆದದ್ದಿಷ್ಟು..

ಇಂದು ಪಟ್ಟಣದ ತಂಬಾಕು ಮಂಡಳಿ ಪ್ರಾಂಗಣದಲ್ಲಿ ತಂಬಾಕು ಹರಾಜು ಪ್ರಕ್ರಿಯೆ ಪ್ರಾರಂಭಗೊಂಡಿತು.ಇದರ ಉದ್ಘಾಟನೆಗಾಗಿ ಆಗಮಿಸಿದ್ದ ಶಾಸಕ ಎ ಮಂಜು ಮಾತನಾಡುತ್ತ ಮಧ್ಯವರ್ತಿಗಳು ತೂಕ ಹಾಗು ಬೆಲೆಯಲ್ಲಿ ರೈತರಿಗೆ ಮೋಸ ಮಾಡಬಾರದು ಎನ್ನುವುದರ ಜೊತೆಗೆ ಹಾಗೆ ಮಾಡುವವರು ಲೋ,ಫರ್ ಗಳು ಎಂದು ಹೇಳಿದರು.

ಆಗ ಸ್ಥಳಕ್ಕೆ ಬಂದ ಶ್ರೀಧರ್ ಗೌಡ ವಿಷಯವನ್ನು ಸಂಪೂರ್ಣ ಅರಿಯದೆ ರೈತರನ್ನು ನೀವ್ಯಾಕೆ ಲೋಫರ್ಗಳು ಎಂದು ಕರೆಯುತ್ತೀರಿ ಎಂದು ಎ ಮಂಜುರವರನ್ನು ಖಾರವಾಗಿ ಪ್ರಶ್ನಿಸಿದರು.

ಶಾಸಕ ಮಂಜು ನಾನು ರೈತರಿಗೆ ಆ ಶಬ್ದ ಬಳಕೆ ಮಾಡಲಿಲ್ಲ.ರೈತರಿಗೆ ಮೋಸ ಮಾಡು ವವರನ್ನು ಲೋ,ಫರ್ ಗಳು ಎಂದೆನಷ್ಟೆ ಎಂದು ತಿಳಿಸಿದರು ಶ್ರೀಧರ್ ಗೌಡ ತಣ್ಣಗಾಗಲಿಲ್ಲ.

ಘಟನೆ ತಾರಕಕ್ಕೇರಿ ಎ ಮಂಜು ಹಾಗು ಶ್ರೀಧರ್ ಗೌಡರ ನಡುವೆ ಮಾತಿನ ವ್ಯಾಗ್ಯುದ್ಧವೇ ನಡೆಯಿತು.

ಆಗ ಶ್ರೀಧರ್ ಗೌಡ ಮಾತನಾಡುವ ಬರದಲ್ಲಿ ನೀನು ಲೋ,ಫರ್ ಎಂದು ಎ ಮಂಜುವಿಗೆ ಬಹಿರಂಗವಾಗಿಯೇ ಬೈದರು.

ಒಂದು ಹಂತದಲ್ಲಿ ಶಾಸಕ ಹಾಗು ಶ್ರೀಧರ್ ಗೌಡ ಕೈ-ಕೈ ಮಿಲಾಯಿಸುವ ಹಂತಕ್ಕೂ ಹೋದರಾದರು ಪೊಲೀಸರು ಮದ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಶ್ರೀಧರ್ ಗೌಡ ಈ ಮಂಜುರವರ ವಿರುದ್ಧ ಸೋತರು ಸಹ ಕ್ಷೇತ್ರದಲ್ಲಿ ಸಕ್ರೀಯರಾಗಿದ್ದಾರೆ .ರಾಜ್ಯದಲ್ಲಿ ಅವರದ್ದೇ ಸರಕಾರ ಇರುವುದರಿಂದ ಶಾಸಕರ ಹಾಗೆಯೆ ಅಧಿಕಾರಿಗಳ ಮೇಲೆ ಹಿಡಿತ ಸಾದಿಸಿ ಅನಧಿಕೃತ ಶಾಸಕತ್ವವನ್ನು ನಡೆಸುತ್ತಿದ್ದಾರೆ.ಇದು ಯಾವ ಮಟ್ಟಕ್ಕೆ ಇದೆ ಎಂದರೆ ಕ್ಷೇತ್ರದ ಶಾಸಕರು ಯಾರು ಎಂದು ಸಾರ್ವಜನಿಕರು ಯೋಚಿಸುವ ಹಾಗಿದೆ.

ಈ ಕಾರಣಕ್ಕೆ ಈ ಮಂಜು ಹಾಗು ಶ್ರೀಧರಗೌಡ ರವರ ನಡುವೆ ಶೀತಲ ಸಮರ ನಡೆಯುತ್ತಿದ್ದು ಇಂದದು ಆಸ್ಫೋಟಗೊಂಡಿದೆ.

ಶ್ರೀಧರ್ ಗೌಡರ ಈ ನಡೆಗೆ ಜಿಲ್ಲೆ ಹಾಗು ತಾಲೂಕಿನಾದ್ಯಂತ ವ್ಯಾಪಕ ಜನಾಕ್ರೋಶ ಉಂಟಾಗಿದ್ದು ಹಿರಿಯ ರಾಜಕಾರಣಿಯೊಬ್ಬರ ಬಗ್ಗೆ ಅವರು ಬಳಸಿದ ಪದದವನ್ನು ಹಿಂಪಡೆದು ಈ ಮಂಜುರವರ ಕ್ಷಮೆ ಕೇಳಬೇಕೆಂಬ ಆಗ್ರಹ ವ್ಯಕ್ತವಾಗಿದೆ.

ಸದ್ಯ ಭೂದಿ ಮುಚ್ಚಿದ ಕೆಂಡದಂತಿರುವ ಪರಿಸ್ಥಿತಿ ಮುಂದೆ ಯಾವ ತಿರುವು ಪಡೆಯುತ್ತದೋ ಕಾದುನೋಡಬೇಕಾಗಿದೆ.

————————––ಶಶಿಕುಮಾರ್ ಕೆಲ್ಲೂರು

Leave a Reply

Your email address will not be published. Required fields are marked *

× How can I help you?