ಹಾಸನ:ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ-ಎನ್.ಎಸ್.ಕೆ.ಎಂ.ಎಫ್ [NSKMF]ಕರಾಟೆ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ಹಾಸನ:ಅಕ್ಟೋಬರ್ 5 ರಂದು ಉಪನಿರ್ದೇಶಕರ ಕಚೇರಿ ಶಿಕ್ಷಣ ಇಲಾಖೆ ಹಾಸನ ಮತ್ತು ಎ.ಪಿ.ಜೆ ಅಕಾಡೆಮಿ ಇವರ ಸಂಯುಕ್ತಾಶ್ರಯದಲ್ಲಿ ನಡೆದ ನೇರ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಎನ್.ಎಸ್.ಕೆ.ಎಂ.ಎಫ್ [NSKMF]ಕರಾಟೆ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕಮಲ ಕಾನ್ವೆಂಟ್ ಹಾಗು ,ಭುವನೇಶ್ವರಿ ಹೈ ಸ್ಕೂಲ್ ದುದ್ದ ಶಾಲೆಗಳ ಆದಿತ್ಯ ಮತ್ತು ಸ್ಪಂದನ ರವರು –55 ಕೆ.ಜಿ ಮತ್ತು –34 ಕೆ.ಜಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದರೆ, ಪಿ.ವಿ ಇಂಟರ್ನ್ಯಾಷನಲ್ ಹಾಸನ ಶಾಲೆಯ ವಿದ್ಯಾರ್ಥಿಗಳಾದ ಜೀವನ್ ಮತ್ತು ಗಗನ್ ರವರು –45ಕೆ.ಜಿ ಮತ್ತು –60ಕೆ.ಜಿ ವಿಭಾಗಗಳಲ್ಲಿ ಸ್ಪರ್ಧಿಸಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿ ಹಾಸನ ಜಿಲ್ಲೆಗೆ ಮತ್ತು ಶಾಲೆಗೆ ಕೀರ್ತಿ ತಂದಿದ್ದಾರೆ.

ನ್ಯಾಷನಲ್ ಶೋಟೋಕಾನ್ ಕರಾಟೆ ಮಲ್ಟಿಪರ್ಪಸ್ ಫೆಡರೇಷನ್ (ರಿ) ಮುಖ್ಯ ತರಬೇತುದಾರರಾದ ಅನಂತ್ ಕುಮಾರ್ ಕೆ.ಜೆ ಹಾಗೂ ತರಬೇತುದಾರರಾದ ಸುಮಂತ್, ವಿಶ್ವಂತ್ ಹಾಗೂ ಚರಣ್ ಮತ್ತು ಚೇತನ್ ರವರು ಮಕ್ಕಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

———————ಸಂತೋಷ್

Leave a Reply

Your email address will not be published. Required fields are marked *

× How can I help you?