ಕೊರಟಗೆರೆ-ಕುಸಿದು ಬಿದ್ದು ಮೃತಪಟ್ಟ ರೆಹಮಾನ್[15] ಎಂಬ ಬಾಲಕ-ಹೃದಯಾಘಾತದ ಶಂಕೆ-ಈ ಸಾವುಗಳಿಗೆ ಕಾರಣ ಹುಡುಕಲಿದೆಯಾ ವೈದ್ಯಲೋಕ?

ಕೊರಟಗೆರೆ-ರವೀಂದ್ರ ಭಾರತಿ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ರೆಹಮಾನ್[15 ] ಎಂಬ ಬಾಲಕನೊಬ್ಬ ಕುಸಿದು ಬಿದ್ದು ಮೃತಪಟ್ಟಿರುವ ದುರ್ಘಟನೆಯೊಂದು ಕೊರಟಗೆರೆ ನಗರದಿಂದ ವರದಿಯಾಗಿದೆ.

ಮೃತ ಮಹಮ್ಮದ್ ರೆಹಮಾನ್ ನನ್ನು ಮಕ್ಕಳಿಲ್ಲದ ಶಬೀನಾ ಬೇಗಮ್ ದಂಪತಿಗಳು ದತ್ತು ಪಡೆದಿದ್ದು, ಬಹಳ ಪ್ರೀತಿ ವಾತ್ಸಲ್ಯದಿಂದ ಪೋಷಿಸುತ್ತಿದ್ದರು.

ತಾಯಿಯೊಡನೆ ಮನೆಯ ಮಹಡಿಯ ಮೇಲೆ ಒಣಗಲು ಹಾಕಿದ್ದ ಬಟ್ಟೆಗಳನ್ನು ತರಲು ರೆಹಮಾನ್ ತೆರಳಿದ್ದ.ಆಗ ಅಲ್ಲಿಯೇ ಬಾಲಕ ಕುಸಿದು ಬಿದ್ದಿದ್ದು ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಯಿತಾದರೂ ಅಷ್ಟೊತ್ತಿಗಾಗಲೇ ಆತನ ಪ್ರಾಣಪಕ್ಷಿ ಹಾರಿ ಹೋಗಿತ್ತು.

ಮೃತ ಬಾಲಕನ ಮನೆಯಲ್ಲಿ ಶೋಕ ಮಡುವುಗಟ್ಟಿದೆ.

ಇತ್ತೀಚಿನ ದಿನಗಳಲ್ಲಿ ದೇಶದಾದ್ಯಂತ ಹೀಗೆಯೇ ಅಪ್ರಾಪ್ತ ಜೀವಗಳು ಕುಸಿದು ಬಿದ್ದು ಸಾವನ್ನಪ್ಪುವ ಘಟನೆಗಳು ಆಗಾಗ ವರದಿಯಾಗುತ್ತಲೇ ಇವೆ.

ಹೃದಯಾಘಾತದಿಂದ ಈ ಸಾವುಗಳು ಸಂಭವಿಸುತ್ತಿವೆ ಎಂದು ವೈದ್ಯಲೋಕದ ವರದಿಗಳಿದ್ದು ಸೂಕ್ತ ಕಾರಣಗಳನ್ನು ಹುಡುಕಿ ಅದಕ್ಕೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ವೈದ್ಯರು ಮುಂದಾಗಬೇಕಿದೆ.

ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಸಿಪಿಐ ಅನಿಲ್ ಹಾಗೂ ಪಿಎಸ್ಐ ಚೇತನ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

————–ಶ್ರೀನಿವಾಸ್ ಕೊರಟಗೆರೆ

Leave a Reply

Your email address will not be published. Required fields are marked *

× How can I help you?