ಭಾರತ ಬಲಿಷ್ಠ ಆರ್ಥಿಕತೆಯತ್ತ ಸಾಗುತ್ತಿದೆ-ಕರ್ನಲ್ ಗೋಕುಲ್

ಮೈಸೂರು-ಭಾರತವು ಕಾರ್ಗಿಲ್ ನಂತಹ ಕಠಿಣ ಯುದ್ಧಗಳನ್ನು ಎದುರಿಸಿ ಇಂದು ವಿಶ್ವದ ಕೆಲವೇ ಬಲಿಷ್ಠ ರಾಷ್ಟ್ರಗಳ ಸಾಲಿನಲ್ಲಿನಿಂತಿದೆ,ಪ್ರಸ್ತುತವಾಗಿ ಭಾರತವು ಮೂರನೇ ಅತಿ ದೊಡ್ಡ ಆರ್ಥಿಕತೆಯತ್ತ ಮುಖ ಮಾಡಿದ್ದು ಅದು ಸಾಕಾರಗೊಳ್ಳಲು ಭವಿಷ್ಯದ ಪ್ರಜೆಗಳಾದ ತಮ್ಮೆಲ್ಲರ ಪಾತ್ರ ಬಹಳ ಮುಖ್ಯ ಎಂದು ಮಾಜಿ ಕರ್ನಲ್ ಗೋಕುಲರವರು ಹೇಳಿದರು.

ಜಯನಗರದ ಪ್ರತಿಷ್ಠಿತ ಶ್ರೀ ವಿವೇಕ ಬಾಲೋದ್ಯಾನ ಪಬ್ಲಿಕ್ ಸ್ಕೂಲ್ ನಲ್ಲಿ ನಡೆದ ೭೮ ನೇ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ದೇಶಕ್ಕಾಗಿ ಮಡಿದ ಸ್ವಾತಂತ್ರ್ಯ ಹೋರಾಟಗಾರರು ಹಾಗು ದೇಶವನ್ನು ರಕ್ಷಿಸುತ್ತಿರುವ ಹಾಗು ರಕ್ಷಣೆಯಲ್ಲಿ ನಿರತರಾಗಿ ಪ್ರಾಣ ಕಳೆದುಕೊಂಡಿರುವ ಸೈನಿಕರ ಬಲಿದಾನಗಳ ಬಗ್ಗೆ ಅರಿವು ಹೊಂದಬೇಕು ಪ್ರತಿದಿನ ಅವರ ಬಲಿದಾನಗಳ ಸ್ಮರಣೆ ಮಾಡಬೇಕು ಎಂದು ನೆರೆದಿದ್ದ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಶಾಲೆಯ ಕಾರ್ಯದರ್ಶಿ ಎಂ.ಎಸ್ ನಾಗೇಶ್ ಮಾತನಾಡಿ ಜಗತ್ತು ಬದಲಾಗಬೇಕು ಎನ್ನುವವರು ಮೊದಲು ತಮ್ಮಿಂದಲೇ ಬದಲಾವಣೆಯಾಗಬೇಕು ಎಂಬುದನ್ನು ಅರಿತುಕೊಳ್ಳಬೇಕು ಎಂದರು. ಹಾಗೂ ಇಂದಿನ ಎಲ್ಲಾ ಕಾರ್ಯಕ್ರಮಗಳು ಉತ್ತಮವಾಗಿ ಮೂಡಿಬಂದಿದ್ದು ಇಂತಹ ಕಾರ್ಯಕ್ರಮಗಳನ್ನು ಸುವ್ಯವಸ್ಥಿತವಾಗಿ ನಡೆಸಿಕೊಂಡು ಬರುತ್ತಿರುವ ನಮ್ಮ ಶಾಲೆಯ ಎಲ್ಲಾ ಶಿಕ್ಷಕರಿಗೂ ನನ್ನ ಅಭಿನಂದನೆಗಳು ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ವಾಸುದೇವ ರಾವ್ ಅರೂರು ರವರು ಮಾತನಾಡಿ ಬ್ರಿಟಿಷರು ನಮ್ಮ ದೇಶಕ್ಕೆ ಸ್ವಾತಂತ್ರ್ಯ ನೀಡಲಿಲ್ಲ ಬದಲಾಗಿ ನಮ್ಮ ದೇಶದ ಮೇಲೆ ಬಹಳ ಹಿಂದಿನಿಂದಲೂ ಅಲೆಕ್ಸಾಂಡರ್ ನಂತಹ ಚಕ್ರವರ್ತಿಗಳಿಂದ ಪ್ರಾರಂಭವಾಗಿ ಮೊಘಲರು, ಫ್ರೆಂಚರು, ಬ್ರಿಟಿಷರು ಮುಂತಾದ ವಿದೇಶಿಯರು ಆಕ್ರಮಣ ಮಾಡಿ ನಮ್ಮ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟು ಮಾಡಲು ಬಂದಾಗ,ಅವರನ್ನು ನಮ್ಮ ಸೇನಾನಿಗಳು ಹೊಡೆದೋಡಿಸಿದರು. ಈ ಹಿನ್ನೆಲೆಯಲ್ಲಿ ನಮ್ಮ ದೇಶದ ಸೇನಾನಿಗಳ ಹಾಗೂ ಪೂರ್ವಜರ ತ್ಯಾಗ ಮನೋಭಾವವನ್ನು ನಾವು ಸ್ಮರಿಸೋಣ ಎಂದರು.

ವೇದಿಕೆಯಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಬಿ. ಎನ್ ಪ್ರಭಾಕರ್,ಖಜಾಂಚಿ ಎಚ್. ಎಸ್. ಶಿವಶಂಕರ್, ಮುಖ್ಯ ಆಡಳಿತ ಅಧಿಕಾರಿಗಳಾದ ಭವಾನಿ ನಾಗೇಶ್,ಪ್ರಾಂಶುಪಾಲರಾದ
ಡಾ. ಎನ್. ಭಾರತೀ ಶಂಕರ್ ರವರು ಉಪಸ್ಥಿತರಿದ್ದರು.

ಮಕ್ಕಳಿಂದ ದೇಶಭಕ್ತಿಯನ್ನು ಹೊರಹೊಮ್ಮಿಸುವ ಸಾಮೂಹಿಕ ಗೀತ ಗಾಯನ ಹಾಗೂ ವರ್ಣ ರಂಜಿತ ಸಾಮೂಹಿಕ ನೃತ್ಯ ಹಾಗೂ ಶಿಸ್ತಿನ ಪಥಸಂಚಲನ ಕಾರ್ಯಕ್ರಮಗಳು ನಡೆದವು. ಪ್ರಾಂಶುಪಾಲರಾದ ಡಾ. ಎನ್.ಭಾರತೀ ಶಂಕರ್ ರವರು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಅತಿಥಿ ಗಣ್ಯರನ್ನು ಸ್ವಾಗತಿಸಿದರೆ,ಶಿಕ್ಷಕಿ ಕುಮಾರಿ ಶುಭಾಂಕರವರು ಎಲ್ಲರಿಗೂ ವಂದನಾರ್ಪಣೆಗಳನ್ನು ಸಲ್ಲಿಸಿದರು.ನಿರೂಪಣೆಯನ್ನು ಸಮಾಜ ವಿಜ್ಞಾನ ಶಿಕ್ಷಕರಾದ ಮೊಹಮ್ಮದ್ ಹುಮಾಯುನ್ ಎನ್ ರವರು ನೆರವೇರಿಸಿದರು. ಶಾಲೆಯ ಎಲ್ಲಾ ಬೋಧಕ, ಬೋಧಕೇತರ ವೃಂದದವರು ಪೋಷಕ ಬಂಧುಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು

Leave a Reply

Your email address will not be published. Required fields are marked *

× How can I help you?