ಜಾವಗಲ್-ದೇಶಕ್ಕೆ ಸ್ವಾತಂತ್ರ್ಯ ಬಂದ ವರ್ಷದಲ್ಲಿ ಪ್ರಾರಂಭವಾದ ಜಿಲ್ಲೆಯ ಹಿರಿಯ ಗಣಪತಿ ಸಮಿತಿಗಳಲ್ಲೊಂದಾದ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿ ಪ್ರತಿಷ್ಠಾಪಿಸಿದ್ದ ವಿಘ್ನನಿವಾರಕನ ವಿಸರ್ಜನಾ ಮಹೋತ್ಸವವು ಅತ್ಯಂತ ವಿಜೃಂಭಣೆಯಿಂದ ಜರುಗಿತು.
ಶ್ರೀ ಪ್ರಸನ್ನ ಗಣಪತಿ ಸಮಿತಿಯು ಪ್ರತಿ ವರ್ಷವೂ 30 ದಿನಗಳ ಕಾಲ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪ್ರತಿ ದಿನವೂ ವಿಭಿನ್ನ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಹಾಸನ ಜಿಲ್ಲೆಯಲ್ಲಿಯೇ ಮಾದರಿ ಗಣಪತಿ ಸಮಿತಿ ಎಂಬ ಬಿರುದನ್ನೂ ಪಡೆದುಕೊಂಡಿದೆ.
ಈ ಗಣಪತಿಯನ್ನು ನೋಡಿ ಆಶೀರ್ವಾದ ಪಡೆಯಲು ಅರಸೀಕೆರೆ,ಬೇಲೂರು,ಹಳೇಬೀಡು ಗಳಿಂದಲೂ ಭಕ್ತಾದಿಗಳು ಹರಿದು ಬರುತ್ತಾರೆ.
ಈ ಬಾರಿಯೂ ಶ್ರೀ ಸೀತಾ ರಾಮ ಮಂದಿರ ದಲ್ಲಿ ಪ್ರತಿಷ್ಠಾಪಿಸಲಾಗಿದ್ದ ವಿಘ್ನ ನಿವಾರಕನಿಗೆ ನಿತ್ಯ ವಿಶೇಷ ಪೂಜಾ ಕಾರ್ಯಗಳನ್ನು ನೇರವೇರಿಸಿ,ಹೋಮ ಹವನಗಳ ಜೊತೆಗೆ ಮನರಂಜನಾ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು.ಪ್ರತಿ ದಿನವೂ ಸಂಜೆ ಪೂಜಾ ಕಾರ್ಯಕ್ರಮಕ್ಕೆ ಬರುವ ಭಕ್ತಾದಿಗಳಿಗೆ ಲಘು ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.
ವಿಸರ್ಜನೆಯ ದಿನ ಡೊಳ್ಳು ಕುಣಿತ,ಬೊಂಬೆ ಕುಣಿತ,ಕೀಲು ಕುದುರೆ ಕುಣಿತದೊಂದಿಗೆ ಭವ್ಯ ರಥದಲ್ಲಿ ಗಣೇಶನ ಭವ್ಯ ಮೆರವಣಿಗೆ ಪಟ್ಟಣದ ಎಲ್ಲ ಬೀದಿಗಳಲ್ಲಿಯೂ ನಡೆಯಿತು.
ಸುತ್ತಮುತ್ತಲ ಹಳ್ಳಿಗಳಿಂದ ಸಾವಿರಾರು ಮಂದಿ ಭಕ್ತಾದಿಗಳು ಆಗಮಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡು ನ್ರತ್ಯ ಮಾಡಿ ಸಂಭ್ರಮಿಸಿದರು.
———————-ಜಾವಗಲ್ ದಯಾನಂದ್