ಅರಕಲಗೂಡು-ಸ್ವಾತಂತ್ರ್ಯ ಸೇನಾನಿಗಳ ದಿನನಿತ್ಯವೂ ನೆನೆಯೋಣ-ಹೆಚ್ ಪಿ ಶ್ರೀಧರಗೌಡ

ಅರಕಲಗೂಡು;ಸ್ವಾತಂತ್ರ್ಯ ಸೇನಾನಿಗಳ ತ್ಯಾಗ ಬಲಿದಾನಗಳ ಕಾರಣಕ್ಕೆ ನಾವು ಬ್ರಿಟಿಷರ ದಬ್ಬಾಳಿಕೆಯಿಂದ ಬಿಡುಗಡೆಗೊಂಡು ನೈಜ ಸ್ವಾತಂತ್ರ್ಯವನ್ನು ಅನುಭವಿಸುವ ಅದೃಷ್ಟವನ್ನು ಪಡೆದಿದ್ದೇವೆ.ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರಂತಹ ನೂರಾರು ವೀರರು ದೇಶದ ಬಿಡುಗಡೆಗಾಗಿ ತಮ್ಮ ಬದುಕುಗಳನ್ನೇ ಮುಡಿಪಾಗಿಟ್ಟರು.ಇಂತಹ ಮಹನೀಯರನ್ನು ನಾವು ದಿನನಿತ್ಯವೂ ನೆನೆಸುವ ಮೂಲಕ ಅವರಿಗೆ ಗೌರವ ಸಲ್ಲಿಸುವ ಕೆಲಸವನ್ನು ಮಾಡಬೇಕೆಂದು ಹೆಚ್ ಪಿ ಶ್ರೀಧರಗೌಡ ತಿಳಿಸಿದರು.

ಕಾಂಗ್ರೆಸ್ ಕಚೇರಿಯಲ್ಲಿ ನಡೆದ ೭೮ ನೇ ಸ್ವಾತಂತ್ರ್ಯೋತ್ಸವ ಹಾಗು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರವರ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೇವಲ ಸ್ವಾತಂತ್ರ್ಯ ಆಚರಣೆಯ ದಿನವಷ್ಟೇ ನಾವು ಸ್ವಾತಂತ್ರ್ಯ ವೀರರ ಗುಣಗಾನ ಮಾಡಿ ನಂತರ ಅವರನ್ನು ಮರೆತು ಬಿಡುತ್ತೇವೆ.ಇಂದಿನ ಯುವಜನತೆಯಂತೂ ಮೊಬೈಲ್ ವ್ಯಾಮೋಹಕ್ಕೆ ಬಿದ್ದು ದೇಶ ಕಟ್ಟಿದವರ ಬಗೆಗೆ ಅರಿವನ್ನೇ ಹೊಂದಿದಂತೆ ಕಾಣುತ್ತಿಲ್ಲ.ಸಂಘ ಸಂಸ್ಥೆಗಳು ಹಾಗು ಶಿಕ್ಷಣ ಸಂಸ್ಥೆಗಳು ಹಾಗು ಮಾಧ್ಯಮಗಳು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರ ನೆನಪು ಶಾಶ್ವವಾತವಾಗಿ \ಉಳಿಯುವಂತೆ ಮಾಡುವ ಕಾರ್ಯಕ್ರಮಗಳನ್ನು ನಡೆಸಬೇಕು ಆ ಮೂಲಕ ವೀರರ ತ್ಯಾಗಗಳು ಮರೆಯಾಗದಂತೆ ಕಾಯುವ ಕಾಯಕ ಮಾಡಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತರ ಘಟಕದ ಹಾಸನ ಜಿಲ್ಲಾ ಉಪಾಧ್ಯಕ್ಷರಾದ ಅಮ್ಜದ್ ಖಾನ್ ,ಮಲ್ಲೇಶ್ ರವರು,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ,ಅಲ್ಪಸಂಖ್ಯಾತರ ಘಟಕದ
ಅರಕಲಗೂಡು ತಾಲೂಕು ಅಧ್ಯಕ್ಷರಾದ ಸುಭಾನ್ ಷರೀಫ್ ರವರು,ಎಸ್ ಸಿ ಘಟಕದ ತಾಲೂಕು ಅಧ್ಯಕ್ಷರಾದ ನಾಗರಾಜ್ ,ಅರಕಲಗೂಡು ತಾಲೂಕು ವೀರ ಶೈವ ಸಂಘದ ಉಪಾಧ್ಯಕ್ಷರಾದ ವೀರಪ್ಪ,ಜಿಲ್ಲಾ ಕಾರ್ಯದರ್ಶಿಗಳು ಹಾಗೂ ಬಗರ್ ಹುಕುಂ ಕಮಿಟಿ ಸದಸ್ಯರಾದ ಪುಟ್ಟಯ್ಯ ,ರಂಗನಾಥ,ಛಲವಾದಿ ಮಹಾಸಭಾ ಉಪಾಧ್ಯಕ್ಷರಾದ ನಿಂಗರಾಜ್,ಕೆಡಿಪಿ ಸದಸ್ಯರಾದ ಸುರೇಶ್ ಸೋಮನಹಳ್ಳಿ ಕ.ರ.ವೇ ತಾಲೂಕು ಅಧ್ಯಕ್ಷರಾದ ಜಿಮ್ ಸೋಮು,ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಅಭ್ಯರ್ಥಿಗಳಾದ ನಯನ್, ಶಹಾಬಾಜ್ ಪಾಷಾ,ಯುವ ಕಾಂಗ್ರೆಸ್ ಹಳ್ಳಿಮೈಸೂರು ಬ್ಲಾಕ್ ಅಧ್ಯಕ್ಷ ಅಭ್ಯರ್ಥಿಯಾದ ಹೇಮಂತ್ ತಾತನಹಳ್ಳಿ,ಮುಖಂಡರುಗಳಾದ ಓಡನಹಳ್ಳಿ ಕುಮಾರ್,ಕಬ್ಬಳಿಗೆರೆ ಸೋಮಶೇಖರ್,ದಿನೇಶ್ ಕಟ್ಟೇಪುರ, ಗುರು ಕಟ್ಟೇಪುರ,ಸತ್ಯರಾಜ್,ದಶರಥ, ಗುರುಮೂರ್ತಿ, ಧರ್ಮ, ವಿಜಿ ಹಾಗು ಕಾಂಗ್ರೆಸ್ ಪಕ್ಷದ ಆನೇಕ ಮುಖಂಡರು, ಹಿರಿಯರು, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

———-ಶಶಿಕುಮಾರ್ ಕೆಲ್ಲೂರು

Leave a Reply

Your email address will not be published. Required fields are marked *

× How can I help you?